ಪ್ರವೀಣ ಪಾಟೀಲ ಹರವಾಳರಿಗೆ ಸನ್ಮಾನ

ಪ್ರವೀಣ ಪಾಟೀಲ ಹರವಾಳರಿಗೆ ಸನ್ಮಾನ
ಕಲಬುರಗಿ: ಗುಲಬರ್ಗಾ ವಿದ್ಯುತ್ ಶಕ್ತಿ ಸರಬರಾಜು ಕಂಪನಿ (ಜೇಸ್ಕಾಂ) ನಿಗಮ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾದ ಪ್ರವೀಣ ಪಾಟೀಲ ಹರವಾಳ ಅವರನ್ನು ಕಾಂಗ್ರೆಸ್ ಮುಖಂಡ ಬಾಪುಗೌಡ ಪಾಟೀಲ್ ಕಲಹಂಗರಗಾ ಅವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಪ್ರವೀಣ ಪಾಟೀಲ ಅವರ ಭಾವಚಿತ್ರವನ್ನು ನೀಡಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪ್ರದೀಪ ಪಾಟೀಲ ಹರವಾಳ, ಬಸವರಾಜ ಕೋಂಗಡಿ, ರಮೇಶ ಸಂತಿ, ಭೀಮು ಹರವಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.