ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ವಿ.ಜಿ. ಮಹಿಳಾ ವಿದ್ಯಾರ್ಥಿಗಳು ಬಹುಮಾನ

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ವಿ.ಜಿ. ಮಹಿಳಾ ವಿದ್ಯಾರ್ಥಿಗಳು ಬಹುಮಾನ
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರದಲ್ಲಿ
ಯುವಜನೋತ್ಸವ 19ನೇ ಶಕ್ತಿ ಸಂಭ್ರಮ ಕಾರ್ಯಕ್ರಮವನ್ನು ನವೆಂಬರ್ 27ರಿಂದ 29 ರ ವರೆಗೆ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ
ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ 45 ವಿದ್ಯಾರ್ಥಿನಿಯರು ಅಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದುಕೊಂಡು ಹೈದರಾಬಾದ್ ಕರ್ನಾಟಕ ಸಂಸ್ಥೆ ಮತ್ತು ಕಾಲೇಜಿಗೆ ಕೀರ್ತಿ ತಂದುಕೊಟ್ಟಿದ್ದಾರೆ ಆದಕಾರಣ ಇದರಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರಿಗೂ ಮತ್ತು ಟೀಮ್ ಮ್ಯಾನೇಜರ್ ಆದ ಡಾಕ್ಟರ್ ಸವಿತಾ ಬಿ ಬೋಳ ಶೆಟ್ಟಿ ಮತ್ತು ಅವರ ಜೊತೆ ನಿಂತು ಸಹಕರಿಸಿದ ಶ್ರೀಮತಿ ದಾನಮ್ಮ ಎಸ್ ಬಿರಾದಾರ, ವೈಷ್ಣವಿ , ಡಾಕ್ಟರ್ ಸುಭಾಷ್ ಚಂದ್ರ ದೊಡ್ಮನಿ, ಡಾಕ್ಟರ್ ವಿಶ್ವನಾಥ್ ದೇವರಮನಿ, ಡಾಕ್ಟರ್ ರೇಣುಕಾ, ಡಾಕ್ಟರ್ ಮುಕ್ಕಿಮಿಯಾ, ಡಾಕ್ಟರ್ ಮಹೇಶ್ ಕುಮಾರ ಗವರ್, ಡಾಕ್ಟರ್ ಪ್ರೇಮ್ ಚಂದ್ ಚವ್ಹಾನ್ ಶ್ರೀ ಸಿದ್ದು ದೇವರಮನಿ ಮತ್ತು ಬೋಧಕೇತರ ಸಿಬ್ಬಂದಿ ವರ್ಗಕ್ಕೆ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮಾನ್ಯ ಶ್ರೀ ಶಶಿಲ್ ಜಿ ನಮೋಶಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಮತ್ತು ಶ್ರೀಮತಿ ವೀರಮ್ಮ ಗಂಗಶ್ರೀ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾಕ್ಟರ್ ರಾಜೇಂದ್ರ ಕೊಂಡ ಅವರು ಎಲ್ಲರನ್ನು ಅಭಿನಂದಿಸಿ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.