ಅಶೋಕ ಬಗಲಿ ಅವರಿಗೆ ಮಾದಿಗ ಸಮಾಜದಿಂದ ಸನ್ಮಾನ

ಅಶೋಕ ಬಗಲಿ ಅವರಿಗೆ ಮಾದಿಗ ಸಮಾಜದಿಂದ ಸನ್ಮಾನ
ಕಲಬುರಗಿ: ಜಿಲ್ಲಾ ಮಾದಿಗ ಸಮಾಜದ ಸಂಘಟನೆಗಳ ಒಕ್ಕೂಟದ ವತಿಯಿಂದ ನೂತನ ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷರಾಗಿ ಆಯ್ಕೆಯಾದ ಅಶೋಕ ಬಗಲಿ ಅವರನ್ನು ನಗರದ ಬಾಬು ಜಗಜೀವನ್ ರಾವ್ ಪುತ್ಥಳಿ ಬಳಿ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ ಜಿನಕೇರಿ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಂಬರಾಯ ಬೆಳಕೋಟಿ, ರವಿಚಂದ್ರ ಕಾಂತಿಕರ, ಬಂಡೇಶ ತಾರಫೈಲ್, ಪ್ರದೀಪ್ ಬಾಚನಾಳಕರ್, ಶ್ರೀಮಂತ ಬಂಡಾರಿ, ಮಲ್ಲಪ್ಪ ಚಿಗನೂರ, ಕೃಷ್ಣ ತಂಗಡಿ ಸೇರಿದಂತೆ ಸಮಾಜದ ಮುಖಂಡರು ಇದ್ದರು.