ಸಿದ್ದರಾಮಯ್ಯನವರನ್ನು ಪೂರ್ಣಾವಧಿ ಸಿಎಂ ಆಗಿ ಮುಂದುವರಿಸಿ –ಕಲಬುರಗಿ ಅಭಿಮಾನಿ ಬಳಗದ ಪತ್ರ

ಸಿದ್ದರಾಮಯ್ಯನವರನ್ನು ಪೂರ್ಣಾವಧಿ ಸಿಎಂ ಆಗಿ ಮುಂದುವರಿಸಿ –ಕಲಬುರಗಿ ಅಭಿಮಾನಿ ಬಳಗದ ಪತ್ರ

ಸಿದ್ದರಾಮಯ್ಯನವರನ್ನು ಪೂರ್ಣಾವಧಿ ಸಿಎಂ ಆಗಿ ಮುಂದುವರಿಸಿ –ಕಲಬುರಗಿ ಅಭಿಮಾನಿ ಬಳಗದ ಪತ್ರ

ಕಾಂಗ್ರೇಸ್ ಪಕ್ಷವನ್ನು ಉಳಿಸಿ–ಬೆಳೆಯಿಸಬೇಕಾದರೆ ಸಿದ್ದರಾಮಯ್ಯ ಸಿ ಎಂ ಸ್ಥಾನದಿಂದ ಮುಂದುವರಿಯಲಿ 

ಸಿದ್ದರಾಮಯ್ಯನವರ ಅಭಿಮಾನಿ ಬಳಗ ಕಲಬುರಗಿಯಿಂದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಲಬುರಗಿ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ

ಸಿದ್ದರಾಮಯ್ಯರನ್ನು 5 ವರ್ಷದ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಸಿ; ಕಾಂಗ್ರೇಸ್ ಪಕ್ಷವನ್ನು ಉಳಿಸಿ–ಬೆಳೆಯಿಸಿ”

ಕಲಬುರಗಿ: ಸಿದ್ದರಾಮಯ್ಯನವರ ಅಭಿಮಾನಿ ಬಳಗ ಹಾಗೂ ಕಲಬುರಗಿಯ ಮುಖಂಡರು ಇಂದು ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಸಲ್ಲಿಸಿ, ಸಿದ್ದರಾಮಯ್ಯನವರನ್ನು ಐದು ವರ್ಷದ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕೆಂಬ ಆಗ್ರಹ ವ್ಯಕ್ತಪಡಿಸಿದ್ದಾರೆ.

ಅಭಿಮಾನಿ ಬಳಗದ ಪ್ರತಿನಿಧಿಗಳು ಹೇಳುವಂತೆಸಿದ್ದರಾಮಯ್ಯನವರು ಜಾತ್ಯತೀತ, ಧರ್ಮಾತೀತ, ಪಕ್ಷಾತೀತ ಮೌಲ್ಯಗಳಿಂದ ಬೆಳೆದ ನಾಯಕರು. ಸುಮಾರು 50 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಸಂವಿಧಾನಾತ್ಮಕ ಮೌಲ್ಯಗಳನ್ನು ಅನುಷ್ಠಾನಗೊಳಿಸುತ್ತಾ ಸಮಾನತೆ, ಸ್ವಾತಂತ್ರ್ಯ, ನ್ಯಾಯಕ್ಕೆ ಆದ್ಯತೆ ನೀಡಿದವರು. ರಾಜ್ಯದ 7 ಕೋಟಿ ಜನರ ಮನ ಗೆದ್ದಿರುವ ಏಕೈಕ ಜನನಾಯಕ ಎಂಬ ಅಭಿಪ್ರಾಯವನ್ನು ಅವರು ತಿಳಿಸಿದ್ದಾರೆ.

ಹಿಂದುಳಿದ ವರ್ಗ, ಶೋಷಿತರು, ಅಲ್ಪಸಂಖ್ಯಾತರು, ಮಹಿಳೆಯರು, ಕಾರ್ಮಿಕರು—ಎಲ್ಲರಿಗೂ ಸಿದ್ದರಾಮಯ್ಯ ಆಶಾಕಿರಣವಾಗಿದ್ದಾರೆ.

ರಾಜ್ಯಕ್ಕೆ 16 ಬಜೆಟ್‌ಗಳನ್ನು ನೀಡಿದ ಅನುಭವ ಹೊಂದಿರುವ ಅವರು, ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ನೆಲೆಯೂರಿಸಿ, "ನುಡಿದಂತೆ ನಡೆಯುವ" ನಾಯಕತ್ವದ ಮಾದರಿಯಾಗಿದ್ದಾರೆ ಎಂದು ಅಭಿಮಾನಿಗಳು ಸ್ಪಷ್ಟಪಡಿಸಿದರು.

“ಸಿದ್ದರಾಮಯ್ಯನವರನ್ನು ಅಧಿಕಾರದಿಂದ ದೂರ ಮಾಡುವಂತಹ ಯಾವ ತಪ್ಪನ್ನೂ ಅವರು ಮಾಡಿಲ್ಲ. ಭ್ರಷ್ಟಾಚಾರ, ಪಕ್ಷಪಾತ, ಅಧಿಕಾರ ದುರುಪಯೋಗ—ಯಾವ ಆರೋಪವೂ ಅವರ ವಿರುದ್ಧ ಇಲ್ಲ. ಹಾಗಿರಲು ಅವರನ್ನು ಮಧ್ಯದಲ್ಲಿ ಬದಲಿಸುವುದು ಅನ್ಯಾಯ” ಎಂದು ಅಭಿಮಾನಿ ಬಳಗ ಮನವಿಯಲ್ಲಿ ತಿಳಿಸಿದೆ.

ಮುಂದಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ರಾಜ್ಯದಲ್ಲಿ ಕಾಂಗ್ರೇಸ್ ಪಾರ್ಟಿಯನ್ನು ಬಲಪಡಿಸಲು ಮತ್ತು ಉಳಿಸಿಕೊಳ್ಳಲು ಸಿದ್ದರಾಮಯ್ಯನವರಿಗೆ ಪೂರ್ಣಾವಧಿಯ ವಿಶ್ವಾಸ ನೀಡಬೇಕು ಎಂಬ ಬೇಡಿಕೆಯನ್ನು ಬಳಗ ವ್ಯಕ್ತಪಡಿಸಿದೆ.

ಈ ಮನವಿಗೆ ಮಹಾಂತೇಶ ಕೌಲಗಿ, ರೇವಣಸಿದ್ದಪ್ಪಾ ಸಾತನೂರ, ಸಾಯಬಣ್ಣಾ ಹೆಳವರ, ಕುಮಾರ ಯಾದವ, ಚಂದ್ರಶೇಖರ ಗೊಂದಳಿ, ಭೀಮಶ್ಯಾ ಖನ್ನಾ, ಮರೆಪ್ಪ ಹಳ್ಳಿ, ಎ.ಬಿ. ಹೊಸಮನಿ, ಅರ್ಜುನ ಗೊಬ್ಬರ, ಸಂಜುಕುಮಾರ ಜವಳಕರ, ನಿಂಗಪ್ಪಾ ಹೆರೂರ, ಡಾ. ಬಿ.ಟಿ. ಪೂಜಾರಿ, ಶರಣು ಕನಗೊಂಡ, ಭೈಲಪ್ಪಾ ನೆಲೋಗಿ, ಪರಮೇಶ್ವರ ಆಲಗೂಡ, ಶರಣ ಬೇಲೂರ, ಲಕ್ಷ್ಮಣ ಪೂಜಾರಿ ಸೇರಿದಂತೆ ಅನೇಕರು ಸಹಿ ಹಾಕಿದ್ದಾರೆ.