ನಿತಿನ್ ವ್ಹಿ ಗುತ್ತೇದಾರ್ ಅವರ ಜನ್ಮದಿನದ ನಿಮಿತ್ತ ವೃದ್ಧಾಶ್ರಮದಲ್ಲಿ ಅನ್ನ ಸಂತರ್ಪಣೆ ಹಾಗೂ ವಸ್ತ್ರ ವಿತರಿಸಿದರು

ನಿತಿನ್ ವ್ಹಿ ಗುತ್ತೇದಾರ್ ಅವರ ಜನ್ಮದಿನದ ನಿಮಿತ್ತ ವೃದ್ಧಾಶ್ರಮದಲ್ಲಿ ಅನ್ನ ಸಂತರ್ಪಣೆ ಹಾಗೂ ವಸ್ತ್ರ ವಿತರಿಸಿದರು
ಕಲಬುರಗಿ: ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಬಿಜೆಪಿ ಪಕ್ಷದ ಯುವ ಮುಖಂಡರು ಹಾಗೂ ಯುವ ಸಾರಥಿ ನಿತಿನ್ ವ್ಹಿ ಗುತ್ತೇದಾರ್ ರವರ ಜನ್ಮದಿನದ ಪ್ರಯುಕ್ತ ಸಮಾಜ ಸೇವಕರಾದ ಶ್ರೀಕಾಂತ್ ರೆಡ್ಡಿ ಅವರ ನೇತೃತ್ವ ಹಾಗೂ ಹಿಂದೂ ಪರ ಸಂಘಟನೆಗಳು ಕನ್ನಡ ಪರ ಸಂಘಟನೆಗಳು ದಲಿತ ಪರ ಸಂಘಟನೆಗಳ ನೇತೃತ್ವದಲ್ಲಿ ಸೈಯದ್ ಚಿಂಚೋಳಿ ಕ್ರಾಸ್ ಬಳಿ ಇರುವ ಮಹಾದೇವಿ ತಾಯಿ ಮಹಿಳಾ ವಿದ್ಯಾವರ್ಧಕ ಸಂಘ ವೃದ್ಧಾಶ್ರಮ ಹಾಗೂ ರಾಣೆಶಫೀರ ದರ್ಗಾದ ಬಳಿ ಇರುವ ಮಾರ್ಗದರ್ಶಿ ಚಾರಿಟೇಬಲ್ ಟ್ರಸ್ಟ್ ನೆಮ್ಮದಿ ಹಿರಿಯರ ಕೇಂದ್ರ ವೃದ್ಧಾಶ್ರಮ ಮತ್ತು ನಗರದ ಹೈಕೋರ್ಟ್ ಬಳಿ ಇರುವ ಸಮಾಜ ಕಲ್ಯಾಣ ಇಲಾಖೆ ಸ್ಥಳೀಯ ನಿರಾಶ್ರಿತರ ಪರಿಹಾರ ಕೇಂದ್ರ ವೃದ್ಧಾಶ್ರಮದಲ್ಲಿ ವೃದ್ಧರಿಗೆ ಅನ್ನ ಸಂತರ್ಪಣೆ ಹಾಗೂ ಸೀರೆ ವಿತರಣೆ ಮಾಡಿ ಕೆಕ್ ಕತ್ತರಿಸುವ ಮೂಲಕ ಅತ್ಯಂತ ಸರಳವಾಗಿ ನಿತಿನ್ ವ್ಹಿ ಗುತ್ತೇದಾರ್ ರವರ ಜನ್ಮದಿನ ಆಚರಣೆ ಮಾಡಿದರು.
ಈ ವರ್ಷ ವಿಪರೀತ ಮಳೆಯಾಗಿ ಪ್ರವಾಹದಿಂದ ತಾಲೂಕಿನ ಜನರು ತುಂಬಾ ದುಖದಲ್ಲಿದ್ದಾರೆ ನಾಯಕರ ಜನ್ಮದಿನವನ್ನು ವೃದ್ಧಾಶ್ರಮದಲ್ಲಿ ವೃದ್ಧರಿಗೆ ಒಂದು ಹೊತ್ತಿನ ಊಟ ಹಾಗೂ ವೃದ್ಧರಿಗೆ ಬಟ್ಟೆ ವಿತರಣೆ ಮಾಡಿ ಅತಿ ಸರಳತೆಯಿಂದ ನಾಯಕರ ಜನ್ಮದಿನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಡಾ. ನಾಗೇಶ್ ತಳಕೇರಿ, ಕನ್ನಡ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಮ್ ಎಸ್ ಪಾಟೀಲ್ ನರಿಬೋಳ, ಜಯ ಕರ್ನಾಟಕ ಸಂಘಟನೆಯ ವಿಭಾಗೀಯ ಅಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ, ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ನಾಗೇಂದ್ರಪ್ಪ ತಂಬೆ, ಹಿಂದೂ ಜಾಗೃತಿ ಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ್ ಸ್ವಾದಿ, ಭಾರತೀಯ ಯುವ ಸೈನ್ಯದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಚಿಂಚನಸೂರ್, ವೀರ ಶಿವಾಜಿ ಸೇನೆ ಜಿಲ್ಲಾಧ್ಯಕ್ಷ ಶ್ರೀಕಾಂತ್ ಜಾಧವ್, ರಾಮ್ ಸೇನೆ ವಿಭಾಗಿ ಅಧ್ಯಕ್ಷ ಗುಂಡು ಪಾಟೀಲ್, ಹಿರಿಯ ಮುಖಂಡ ಮಲ್ಲಿಕಾರ್ಜುನ ಡೋಲೆ ಸೇರಿದಂತೆ ಅನೇಕ ಮುಖಂಡರು, ಯುವಕರು ಉಪಸ್ಥಿತರಿದ್ದರು
.