ಕೆ.ಹೆಚ್.ಮುನಿಯಪ್ಪ ಅವರಿಗೆ ರಾಜ್ಯದ ಮುಖ್ಯಮಂತ್ರಿ ಮಾಡಬೇಕೆಂದು ರಾಜ್ಯದ ಕಾಂಗ್ರೆಸ ಪಕ್ಷದ ವರಿಷ್ಠರಲ್ಲಿ ರಾಜು ಕಟ್ಟಿಮನಿ ಮನವಿ
ಕೆ.ಹೆಚ್.ಮುನಿಯಪ್ಪ ಅವರಿಗೆ ರಾಜ್ಯದ ಮುಖ್ಯಮಂತ್ರಿ ಮಾಡಬೇಕೆಂದು ರಾಜ್ಯದ ಕಾಂಗ್ರೆಸ ಪಕ್ಷದ ವರಿಷ್ಠರಲ್ಲಿ ರಾಜು ಕಟ್ಟಿಮನಿ ಮನವಿ
ಕಲಬುರಗಿ: ಜನಪ್ರೀಯ ನಾಯಕರು ಮಾದಿಗ ಸಮುದಾಯದ ಹಿರಿಯ ನಾಯಕರಾದ ಕೆ.ಹೆಚ್.ಮುನಿಯಪ್ಪ ಅವರಿಗೆ ರಾಜ್ಯದ ಮುಖ್ಯಮಂತ್ರಿ ಮಾಡಬೇಕೆಂದು ಜಿಲ್ಲಾ ಮಾಧಿಗ ಸಮಾಜದ ಯುವ ಹೋರಾಟಗಾರ ರಾಜು ಎಸ್.ಕಟ್ಟಿಮನಿ ಅವರು ರಾಜ್ಯದ ಕಾಂಗ್ರೆಸ ಪಕ್ಷದ ವರಿಷ್ಠರಲ್ಲಿ ಮತ್ತು ಸಚಿವರು ಹಾಗೂ ಶಾಸಕರಲ್ಲಿ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ "ಮುಖ್ಯಮಂತ್ರಿಗಳ" ಬದಲಾವಣೆ ಮತ್ತು ರಾಜಿನಾಮೆ ನೀಡಬೇಕೆಂದು ಮಾಧ್ಯಮಗಳಲ್ಲಿ ದಿನಾಲು ಬರ್ತಾ ಇದೆ. ಒಂದು ವೇಳೆ ಮುಖ್ಯಮಂತ್ರಿಗಳ ಸ್ಥಾನ ಬದಲಾವಣೆಯಾದರೆ ನಮ್ಮ ಮಾದಿಗ ಸಮುದಾಯದ ಹಿರಿಯ ನಾಯಕರು ಮತ್ತು ಸತತ ೭ ಸಲ ಸಂಸದರಾದ ಹಾಗೂ ಪ್ರಸ್ತುತ ರಾಜ್ಯದ ಹಾಲಿ ಸಚಿವರಿದ್ದು ಸುಮಾರು ೫೦ ವರ್ಷಗಳ ಕಾಲ ರಾಜಕೀಯ ಜೀವನದಲ್ಲಿ ಸಕ್ರೀಯರಾಗಿದ್ದು, ಕಾಂಗ್ರೇಸ್ ಪಕ್ಷವನ್ನು ತಳಮಟ್ಟದಿಂದ ಬಲಿಷ್ಟಮಾಡಲು ಇವರ ಶ್ರಮ ಬಹಳಷ್ಟು ಇರುತ್ತದೆ.
ಮುಂದೆ ರಾಜ್ಯದಲ್ಲಿ "ದಲಿತ ಮುಖ್ಯಂತ್ರಿ ಮಾಡಬೇಕೆಂದು" ಕೂಗೂ ಇದೆ. ಇಲ್ಲಿ ಒಂದು ವೇಳೆ ದಲಿತ ಮುಖ್ಯಮಂತ್ರಿ ಮಾಡಬೇಕೆಂದು ಸಂದರ್ಭ ಬಂದರೆ "ಮಾದಿಗ ಸಮುದಾಯದ ಹಿರಿಯ ನಾಯಕರಾದ ಸನ್ಮಾನ್ಯ ಶ್ರೀ ಕೆ.ಹೆಚ್.ಮುನಿಯಪ್ಪಾರವರನ್ನು ರಾಜ್ಯದ ಮುಖ್ಯಮಂತ್ರಿಗಳಾಗಿ ಎಲ್ಲಾ ಕಾಂಗ್ರೆಸ ಪಕ್ಷದ ಕೇಂದ್ರದ ವರಿಷ್ಠರು ಮತ್ತುಉ ರಾಜ್ಯದ ವರಿಷ್ಠರು ಹಾಗೂ ಸಚಿವರು ಉ, ಶಾಸಕರು ಸರ್ವಾನುಮತಿಂದ ಆಯ್ಕೆ ಮಾಡಬೇಕು ಏಕೆಂದರೆ ರಾಜ್ಯದ ಇತಿಹಾಸದಲ್ಲಿ ಕಾಂಗ್ರೆಸ ಪಕ್ಷದಿಂದ ಮಾದಿಗ ಸಮುದಾಯದವರಿಗೆ ಸಿ.ಎಂ. ಅಥವಾ ಡಿ.ಸಿ.ಎಂ. ಹುದ್ದೆ ನೀಡಿರುವುದಿಲ್ಲ. ಆದರೆ ಬಲಗೈ ಸಮುದಾಯದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ರವರನ್ನು ೨೦೧೯ರ ಲೋಕಸಭೆ ಚುವಾಣೆಯಲ್ಲಿ ಹೀನಾಯವಾಗಿ ಸೋಲು ಕಂಡಿದ್ದರು ಕುಡ ಅವರನ್ನು ರಾಜ್ಯ ಸಬಾ ಸದಸ್ಯರನ್ನಾಗಿ ಮಾಡಿ ಕಾಂಗ್ರೇಸ ಪಕ್ಷದ ರಾಷ್ಟ್ರ ಅಧ್ಯಕ್ಷರಾಗಿ ಪಕ್ಷದ ಪ್ರಮುಖರಾದ ಶ್ರೀಮತಿ ಸೋನಿಯಾ ಗಾಂಧಿಜಿ ಮತ್ತು ರಾಹುಲ ಗಾಂಧಿಜಿ ಯವರು ಮಾಡಿರುತ್ತಾರೆ. ಅದರಂತೆ ಇನ್ನೊರ್ವ ರಾಜ್ಯದ ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಜಿ. ಪರಮೇರ್ಶವರ ರವರು ೨೦೧೩ರ ವಿಧಾನ ಸಭೆ ಚುನಾವಣೆಯಲ್ಲಿ ಸೋತರು ಕೂಡ ಅವರನ್ನು ಕಾಂಗ್ರೆಸ ಪಕ್ಷದ ರಾಜ್ಯಧ್ಯಕ್ಷರಾಗಿ ಮತ್ತು ೨೦೧೮ರಿಂದ ೨೦೨೦ರ ಅವಧಿಯವರೆಗೆ ಉಪ ಮುಖ್ಯಮಂತ್ರಿಯಾಗಿ ಮಾಡಿರುತ್ತಿರಿ. ಆದರೆ ರಾಜ್ಯದಲ್ಲಿ ದಲಿತರಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಮಾದಿಗ ಸಮುದಾಯದವರಿಗೆ ಪಕ್ಷದಲ್ಲಿ ಉನ್ನತ ಸ್ಥಾನ ಮಾನ ಕೊಟ್ಟಿರುವುದಿಲ್ಲ. ಕಾಂಗ್ರೆಸ ಪಕ್ಷ ಮಾದಿಗ ಸಮಾಜಕ್ಕೆ ಮಲತಾಯಿ ಧೋರಣೆ ತೋರಿಸುತ್ತಿದೆ. ಆದ್ದರಿಂದ ತಾವುಗಳು ಮಾದಿಗ ಸಮುದಾಯದ ಸಂಘಟನೇ ಚತುರ ರಾಜಕೀಯ ಚಾಣಕ್ಯ ಮತ್ತು ಕರ್ನಾಟಕ ರಾಜ್ಯದ ಸಚಿವರಾದ ಸನ್ಮಾನ್ಯ ಶ್ರೀ ಕೆ.ಹೆಚ್.ಮುನಿಯಪ್ಪಾರವರನ್ನು "ರಾಜ್ಯದ ಮುಖ್ಯಮಂತ್ರಿ" ಸರ್ವಾನುಮತದಿಂದ ಆಯ್ಕೆ ಮಾಡಬೇಕೆಂದು ಕಲಬುರಗಿ ಜಿಲ್ಲೆಯ ಮಾದಿಗ ಸಮಾಜದ ಯುವ ಹೋರಾಟಗಾರ ಮತ್ತು ಡಾ. ಬಾಬು ಜಗಜೀವನರಾಂ ಹೋರಾಟ ಸಮೀತಿಯ ಜಿಲ್ಲಾಧ್ಯಕ್ಷರಾದ ರಾಜು ಎಸ್. ಕಟ್ಟಿಮನಿ ಯವರು ಕಾಂಗ್ರೇಸ ಪಕ್ಷದ ಪ್ರಮುಖರಾದ ಶ್ರೀಮತಿ ಸೋನಿಯಾ ಗಾಂಧಿಜಿ ಮತ್ತು ರಾಹುಲ ಗಾಂಧಿಜಿ ಮತ್ತು ರಾಜ್ಯದ ಕಾಂಗ್ರೆಸ ಪಕ್ಷದ ವರಿಷ್ಠರಲ್ಲಿ ಮತ್ತು ಸಚಿವರು ಹಾಗೂ ಶಾಸಕರಲ್ಲಿ ಅತ್ಯಂತ ಕಳಕಳಿಯ ಮನವಿ ಮಾಡಿದ್ದಾರೆ.