ಬಿಜೆಪಿ ಮುಖಂಡರಿಂದ ದಲಿತ ಕಾಂಗ್ರೇಸ ಕಾರ್ಯಕರ್ತನ ಮೇಲೆ ಹಲ್ಲೆ ||ರಾಜಕೀಯ ಬಣ್ಣ ಹಚ್ಚಲು ಶರಣ ಪ್ರಕಾಶ ಪಾಟೀಲ್ ರ ಮೇಲೆ ಆರೋಪ
ಬಿಜೆಪಿ ಮುಖಂಡರಿಂದ ದಲಿತ ಕಾಂಗ್ರೇಸ ಕಾರ್ಯಕರ್ತನ ಮೇಲೆ ಹಲ್ಲೆ, ಎಸ್. ಸಿ. ಪಿ, ಟಿ. ಎಸ್. ಪಿ ಯೋಜನೆ ಕೆಲಸಕ್ಕೆ ಬಿಜೆಪಿಗರಿಂದ ಅಡ್ಡಿ.
ಸಚಿವರ ಅಭಿವೃದ್ಧಿ ಸಹಿಸದ ಬಿಜೆಪಿಗರು ರಾಜಕೀಯ ಬಣ್ಣ ಹಚ್ಚಲು ಶರಣ ಪ್ರಕಾಶ ಪಾಟೀಲ್ ರ ಮೇಲೆ ಆರೋಪ
ಚಿಂಚೋಳಿ : ತಾಲೂಕಿನ ಗಣಾಪೂರ ಗ್ರಾಮದ ದಲಿತ ಸಮುದಾಯದ ಕಾಂಗ್ರೇಸ್ ಕಾರ್ಯಕರ್ತನ ಮೇಲೆ ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿರುವ ಬಿಜೆಪಿ ಮುಖಂಡ ಪಿತಂಬರ್ ರಾವ ನಾವದಗಿ ಅವರನ್ನು ಕೂಡಲೇ ಬಂಧನಗೊಳಿಸಬೇಕೆಂದು ಸೇಡಂ ಬ್ಲಾಕ್ ಕಾಂಗ್ರೇಸ್ ಆಗ್ರಹಿಸಿದೆ.
ಚಿಂಚೋಳಿ ಪ್ರವಾಸಿ ಮಂದಿರದಲ್ಲಿ ಸೇಡಂ ಬ್ಲಾಕ್ ಅಧ್ಯಕ್ಷ ಶಿವಶರಣರೆಡ್ಡಿ ನೇತೃತ್ವದಲ್ಲಿ ಪ್ರತಿಕಾಗೋಷ್ಠಿ ನಡೆಸಿ ಮಾತನಾಡಿದ, ವಕೀಲ ಶರಣು ಪಾಟೀಲ್ ಮೋಟಕಪಳ್ಳಿ ಅವರು,
ಗಣಾಪೂರ ಗ್ರಾಮದ ದಲಿತ ಸಮುದಾಯದ ಓಣಿಗಳಿಗೆ ಮೂಲಭೂತ ಸೌಲಭ್ಯ ಒದಗಿಸಿ ಅಭಿವೃದ್ಧಿ ಪಡಿಸಬೇಕೆಂಬ ದೃಷ್ಟಿಯಿಂದ ಸಚಿವ ಡಾ. ಶರಣ ಪ್ರಕಾಶ ಪಾಟೀಲರು ಕೆ.ಕೆ.ಆರ್.ಡಿ.ಬಿ (ಎಸ್.ಸಿ.ಪಿ) ಯೋಜನೆಯಡಿ 10 ಲಕ್ಷ ರು ಅನುದಾನದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಸಿಸಿ ರಸ್ತೆ ಕಾಮಾಗಾರಿಗೆ ಅನುಮೋದನೆ ನೀಡಿಲಾಗಿದೆ. ದಲಿತ ಓಣಿಯ ಅಭಿವೃದ್ಧಿ ಸಹಿಸದೇ ಬಿಜೆಪಿ ಮುಖಂಡ ಪಿಂತಬರ್ ರಾವ ನಾವದಗಿ ಅವರು ಕಳೆದ ಒಂದು ತಿಂಗಳಿನಿಂದ ಕಾಮಾಗಾರಿ ಪ್ರಾರಂಭಕ್ಕೆ ಅಡ್ಡಿ ಪಡಿಸುತ್ತಿರುವುದಕ್ಕೆ ಕಾರಣ ಕೇಳಿದಕ್ಕೆ ದಲಿತ ಕಾಂಗ್ರೇಸ್ ಕಾರ್ಯಕರ್ತನನ್ನು ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ ಅಲ್ಲಿನ ಬಿಜೆಪಿ ಮುಖಂಡ ಪಿತಂಬರ್ ರಾವ ಸೇರಿ ಮೂರು ಜನರ ಮೇಲೆ ದೌರ್ಜನ್ಯ ಕಾಯ್ದೆಯಡಿ ಸುಲೇಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಸೇಡಂ ಮತಕ್ಷೇತ್ರದ ಅಭಿವೃದ್ಧಿ ಸಹಿಸದ ಬಿಜೆಪಿಗರು ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ರ ಮೇಲೆ ಇಲ್ಲ ಸಲ್ಲದ ಆರೋಪಗಳು ಮಾಡುತ್ತಾ ರಾಜಕೀಯ ಬಣ್ಣ ಹಚ್ಚಿತ್ತಿದ್ದಾರೆ. ಬಿಜೆಪಿ ಮುಖಂಡರು ದೌರ್ಜನ್ಯ ಹಲ್ಲೆ ನಡೆಸಿರುವುದರ ಬಗ್ಗೆ ವೀಡೀಯೋಗಳು ಹರಿದಾಡುತ್ತಿವೆ. ಕೂಡಲೇ ಪೊಲೀಸ್ ಇಲಾಖೆಯ ಹೆಲ್ಲೆ ನಡೆಸಿದವರನ್ನು ಬಂಧನ ಪಡಿಸಬೇಕು ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿ ರಾಜಕೀಯ ಬಣ್ಣ ಹಚ್ಚಲು ಫೆ. 28 ರಂದು ಸುಲೇಪೇಟ ಬಂದ್ ಕರೆ ಕೊಟ್ಟಿರುವ ಬಿಜೆಪಿಗರಿಗೆ ಪೊಲೀಸ್ ಇಲಾಖೆ ಅವಕಾಶ ನೀಡಬಾರದೆಂದು ಆಗ್ರಹಿಸಿದ್ದಾರೆ.
ಪ್ರಕರಣದಲ್ಲಿ ಸಚಿವ ಡಾ. ಶರಣ ಪ್ರಕಾಶ ಪಾಟೀಲರ ಪಾತ್ರ ಇಲ್ಲ :
ಗಣಾಪೂರ ಗ್ರಾಮದ ದಲಿತ ಓಣಿಯಲ್ಲಿ ಸಿಸಿ ರಸ್ತೆ ಕಾಮಗಾರಿ ಪ್ರಾರಂಭಿಸಲು ಬಿಜೆಪಿ ಮುಖಂಡರು ಒಂದು ತಿಂಗಳುಗಳಿಂದ ಅಡಿಪಡಿಸಲಾಗುತ್ತಿದೆ ಎಂದು ಸಮುದಾಯದವರು ತಿಳಿಸಿದ ಹಿನ್ನಲೆಯಲ್ಲಿ ಕೇಳಲಿಕೆ ಹೋದ ಸಂದರ್ಭದಲ್ಲಿ ನಮ್ಮ ಮೇಲೆ ಜಾತಿ ನಿಂದನೆ ಮಾಡಿ, ಬಿಜೆಪಿ ಮುಖಂಡರಾ ಪಿತಂಬರ್ ರಾವ, ದೌಲಪ್ಪ, ಶೆಕಪ್ಪ, ಬಾಬುಮಿಯಾ ಅವರು ಹಲ್ಲೆ ನಡೆಸಿದಿರುವ ಕಾರಣ ಅವರುಗಳ ಮೇಲೆ ದೌರ್ಜನ್ಯ ಕಾಯ್ದೆಯಡಿ ಸುಲೇಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಈ ಪ್ರಕರಣದಲ್ಲಿ ಸಚಿವ ಶರಣಪ್ರಕಾಶ ಪಾಟೀಲ ಅವರ ಯಾವುದೇ ಮಧ್ಯಸ್ಥಿಕೆಯ ಪಾತ್ರ ಯಾವುದು ಇರುವುದಿಲ್ಲ. ಬಿಜೆಪಿಯವರು ವಿನಃ ಕಾರಣ ಸಚಿವರ ಹೆಸರನ್ನು ಪ್ರಕರಣದೊಂದಿಗೆ ಮೇಲ್ಕು ಹಾಕಲಾಗುತ್ತಿದೆ. ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರು ಸರಕಾರ ಎಸ್.ಸಿ.ಪಿ ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸುತ್ತಾರೆ. ಮಾಡುತ್ತಿರುವ ಕೆಲಸಕ್ಕೆ ಬಿಜೆಪಿಯವರೆ ತಡೆಯಲಾಗುತ್ತಿದೆ ಎಂದು ಹಲ್ಲೆಗೆ ಒಳಗಾದ ಗರಗಪಳ್ಳಿ ಗ್ರಾಮ ಪಂಚಾಯತ್ ಸದಸ್ಯ ಮಹೇಶ ಶರಣಪ್ಪ ಕೆಳಕೇರಿ ತಿಳಿಸಿದ್ದಾರೆ.
ಪ್ರಮುಖರಾದ ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಜಗನ್ನಾಥ, ವಕೀಲ ಶರಣುಪಾಟೀಲ ಮೋತಕಪಳ್ಳಿ, ಶಿವಶರಣ ರೆಡ್ಡಿ ಭಕ್ತಂಪಳ್ಳಿ, ಗೋಪಾಲರೆಡ್ಡಿ, ನಾಸೀರ ಸುಲೇಪೇಟ್, ಸುಬ್ಬನ ರೆಡ್ಡಿ, ರೇವಣಸಿದ್ದ ಮಠ, ಮಹ್ಮದ್ ಶಫಿ, ಮಾರುತಿ ತಳವಾರ, ಬಸವರಾಜ ಮೊಮ್ಮನೂರ್ ರಾಜು ಬೇಡಕಪಳ್ಳಿ ಅವರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.