ರಾಜ್ಯ ಮಟ್ಟದ ನಾನು ವಿಜ್ಞಾನಿ 2025 ಟೆಲಿಸ್ಕೋಪ್ ತರಬೇತಿಗೆ ಅಮಿತ್ ಪಾಟೀಲ್ ಶಾಲೆಯ ವಿದ್ಯಾರ್ಥಿ ವಾಸು ಪಾಟೀಲ್ ಆಯ್ಕೆ

ರಾಜ್ಯ ಮಟ್ಟದ ನಾನು ವಿಜ್ಞಾನಿ 2025 ಟೆಲಿಸ್ಕೋಪ್ ತರಬೇತಿಗೆ ಅಮಿತ್ ಪಾಟೀಲ್ ಶಾಲೆಯ ವಿದ್ಯಾರ್ಥಿ ವಾಸು ಪಾಟೀಲ್ ಆಯ್ಕೆ
ಕಲಬುರಗಿ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಬೆಂಗಳೂರು ವತಿಯಿಂದ ರಾಜ್ಯದ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಎಂಟು ದಿನಗಳ ಕಾಲ ನಾನು ವಿಜ್ಞಾನಿ 2025 ಶೀರ್ಷಿಕೆ ಅಡಿಯಲ್ಲಿ ಶಾಲೆಗೊಂದು ಟೆಲಿಸ್ಕೋ ಪ್ ತಯಾರಿಸುವ ತರಬೇತಿಯನ್ನು ನುರಿತ ತಜ್ಞರಿಂದ ನೀಡಲಾಗುವುದು.
ಇದೊಂದು ಐತಿಹಾಸಿಕ ಘಟನೆ ಯಾಗಲಿದೆ ಗಿನ್ನಿಸ್ ದಾಖಲೆ ಗೆ ಸೇರ್ಪಡೆ ಯಾಗುವ ಸದಾವಕಾಶ ಒದಗಿ ಬಂದಿದೆ.ಈ ತರಬೇತಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಹತ್ತಿರ ಇರುವ ಬ್ಯಾ ಸೆಂಟ್ ಉದ್ಯಾನವನದ ಸೌಟ್ ಕ್ಯಾಂಪ್ ನಲ್ಲಿ ನೀಡಲಾಗುತ್ತಿದೆ. ಕಲಬುರಗಿ ಜಿಲ್ಲೆಯಿಂದ ವಾಸು ಪಾಟೀಲ್ ಭಾಗವಹಿಸುತ್ತಿರುವುದು ನಮ್ಮೆಲ್ಲರ ಹೆಮ್ಮೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟಾರೆ .250 ರಿಂದ 300 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಪ್ರತಿಯೊಂದು ಶಾಲೆಗಳಿಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ನ ಅಧ್ಯಕ್ಷರಾದ ಆರ್. ಎಚ್.ಎಮ್. ಚನ್ನಬಸವ ಸ್ವಾಮಿ ಹಾಗೂ ಪ್ರಧಾನ ಕಾರ್ಯದರ್ಶಿ ಯು. ರಮೇಶ್ ಇತರೆ ಪದಾಧಿಕಾರಿಗಳೊಂದಿಗೆ ತೆರಳಿ ವೈಜ್ಞಾನಿಕ ಚಿಂತನೆ ಮಕ್ಕಳಿಗೆ ಭೌತಿಕ ಪ್ರಜ್ಞೆ ಆಕಾಶಕಾಯಗಳ ಪರಿಚಯ ಗ್ರಹಣ ಮುಂತಾದ ಹಲವಾರು ವಿಷಯಗಳ ಮಂಡನೆ ನಾನು ವಿಜ್ಞಾನಿಯಾಗಬೇಕು ಸಂಶೋಧನಾ ಸ್ವರೂಪದ ಬಗ್ಗೆ ತಿಳಿಹೇಳಿ ಮಕ್ಕಳ ಮನವೊಲಿಸಿ ಈ ಕಾರ್ಯಕ್ರಮದ ಯಶಸ್ವಿಗೆ ಅಮಿತ್ ಪಾಟೀಲ್ ಕೇಂದ್ರೀಯ ವಿದ್ಯಾಲಯದ ಆಡಳಿತ ಮಂಡಳಿ ಪ್ರಾಚಾರ್ಯರು ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಪಾಲಕ ಪೋಷಕರು ಪ್ರೋತ್ಸಾಹಿಸಿದ ಪರಿಣಾಮ ವಾಸು ಪಾಟೀಲ್ ತರಬೇತಿಯಲ್ಲಿ ಭಾಗವಹಿಸುತ್ತಿರುವುದು ಶ್ಲಾಘನೀಯ. ಈ ತರಬೇತಿಯು ಅಕ್ಟೋಬರ್ ಒಂದರಿAದ ನಡೆಯಲಿದೆ.