ಪಿ.ಆರ್ (ಖಾಸಗಿ ನಿವಾಸಿ) ಬೆಳೆ ಸಮೀಕ್ಷೆದಾರರಿಗೆ ಖಾಯಂಗೊಳಿಸುವ ಹಾಗೂ ಜೀವ ವಿಮೆ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ

ಪಿ.ಆರ್ (ಖಾಸಗಿ ನಿವಾಸಿ) ಬೆಳೆ ಸಮೀಕ್ಷೆದಾರರಿಗೆ ಖಾಯಂಗೊಳಿಸುವ ಹಾಗೂ ಜೀವ ವಿಮೆ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ

ಪಿ.ಆರ್ (ಖಾಸಗಿ ನಿವಾಸಿ) ಬೆಳೆ ಸಮೀಕ್ಷೆದಾರರಿಗೆ ಖಾಯಂಗೊಳಿಸುವ ಹಾಗೂ ಜೀವ ವಿಮೆ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ

ಕಲಬುರಗಿ, 17 ನವೆಂಬರ್ 2025: ರಾಜ್ಯದ ಪಿ.ಆರ್ (ಖಾಸಗಿ ನಿವಾಸಿ) ಬೆಳೆ ಸಮೀಕ್ಷೆದಾರರನ್ನು ಖಾಯಂಗೊಳಿಸಿ, ಜೀವ ವಿಮೆ ಹಾಗೂ ಸೇವಾ ಭದ್ರತೆ ಒದಗಿಸಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಪಿ.ಆರ್ ಸಮೀಕ್ಷೆದಾರರ ಸಂಘದ ಜಿಲ್ಲಾಅಧ್ಯಕ್ಷರು ರೆಡ್ಮಿ 15–56 ಸಬ್ಗ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಹಣಮಂತ್ರಾಯ ಎನ್. ಗುತ್ತೇದಾರ ಅವರು ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿ  ಒತ್ತಾಯಿಸಿದ್ದಾರೆ.

ರಾಜ್ಯಾದ್ಯಂತ ಸುಮಾರು 25–30 ಸಾವಿರ ಪಿ.ಆರ್ ಸಮೀಕ್ಷೆದಾರರು ಕಳೆದ 9–10 ವರ್ಷಗಳಿಂದ ಕೃಷಿ ಮತ್ತು ಕಂದಾಯ ಇಲಾಖೆಗೆ ಸಂಬಂಧಿಸಿದ ಸಮೀಕ್ಷಾ ಸೇವೆಯನ್ನು ನಿರಂತರವಾಗಿ ಸಲ್ಲಿಸುತ್ತಿದ್ದಾರೆ. ಹೊಲಗಳಲ್ಲಿ ಹಾವು, ಬೆಳ್ಳು, ಹೆಜ್ಜೆನುಗಳು, ಕಾಡು ಹಂದಿಗಳು ಹಾಗೂ ತೋಳಗಳ ದಾಳಿಯಿಂದ ಸಮೀಕ್ಷೆದಾರರು ಹಲವು ಬಾರಿ ಗಂಭೀರ ಅಪಾಯಗಳನ್ನು ಎದುರಿಸಿದರೂ ಯಾವುದೇ ರೀತಿಯ ಜೀವ ಭದ್ರತೆ ಅಥವಾ ಪರಿಹಾರ ಸಿಗದೆ ಉಳಿದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಹಾಗೂ ಕೋಡ್ಲಾ ಗ್ರಾಮಗಳಲ್ಲಿ ಇಬ್ಬರು ಸಮೀಕ್ಷೆದಾರರಿಗೆ ಹಾವು ಕಚ್ಚಿದ ಘಟನೆ ಸಂಭವಿಸಿದರೂ, ಪರಿಹಾರ ನೀಡದಿರುವುದನ್ನು ಅವರು ಖಂಡಿಸಿದ್ದಾರೆ. “ರೈತರಿಂದ ಅನಾವಶ್ಯಕ ಪ್ರಶ್ನೆಗಳು, ಅವಾಚ್ಯ ಶಬ್ದಗಳಿಂದ ಅವಮಾನಗಳು—ಇವೆಲ್ಲವನ್ನೂ ಸಹಿಸಿಕೊಂಡು ನಾವು ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದೇವೆ” ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಹೈಕೋರ್ಟ್‌ ಆದೇಶದ ಪ್ರಕಾರ 10 ವರ್ಷಗಳ ಸೇವೆ ಪೂರ್ಣಗೊಳಿಸಿದ ದಿನಗೂಲಿ ಕಾರ್ಯಕರ್ತರಿಗೆ ಖಾಯಂ ಹುದ್ದೆಗೆ ಅವಕಾಶ ನೀಡಲು ಸೂಚಿಸಿರುವುದರಿಂದ, ಅದೇ ಮಾದರಿಯಲ್ಲಿ ಪಿ.ಆರ್ ಸಮೀಕ್ಷೆದಾರರನ್ನೂ ಖಾಯಂಗೊಳಿಸಿ, ದಿನಗೂಲಿ ಆಧಾರದ ಮೇಲೆ ನಿತ್ಯ ಕೆಲಸ ಹಾಗೂ ಜೀವವಿಮೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

ರಾಜ್ಯದ ಕೃಷಿ ಮತ್ತು ಕಂದಾಯ ಇಲಾಖೆಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರಕದ ಹಿನ್ನೆಲೆ, ಈ ಮನವಿಯನ್ನು ತಕ್ಷಣ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಕಲಬುರಗಿ ಜಿಲ್ಲಾಧಿಕಾರಿಗಳವರ ಮುಖಾಂತರ ಅವರು ವಿನಂತಿ ಮಾಡಿದ್ದಾರೆ.

-