ಭಕ್ತಿ ಹಾಗೂ ಶಕ್ತಿಯ ಸಾಂಕೇತಿಕ ನೃತ್ಯಗಳೇ “ಗರ್ಭಾ–ದಾಂಡೀಯಾ” ರೇಖಾ ಅಂಡಗಿ

ಭಕ್ತಿ ಹಾಗೂ ಶಕ್ತಿಯ ಸಾಂಕೇತಿಕ ನೃತ್ಯಗಳೇ “ಗರ್ಭಾ–ದಾಂಡೀಯಾ” ರೇಖಾ ಅಂಡಗಿ

ಭಕ್ತಿ ಹಾಗೂ ಶಕ್ತಿಯ ಸಾಂಕೇತಿಕ ನೃತ್ಯಗಳೇ “ಗರ್ಭಾ–ದಾಂಡೀಯಾ” ರೇಖಾ ಅಂಡಗಿ

ಕಲಬುರಗಿ : ನವರಾತ್ರಿ ಉತ್ಸವದ ಅಂಗವಾಗಿ ಭಕ್ತಿ ಮತ್ತು ಶಕ್ತಿಯ ಪ್ರತೀಕವಾಗಿರುವ ಗರ್ಬಾ–ದಾಂಡೀಯಾ ಕಾರ್ಯಕ್ರಮವು ನಗರದ ವಿದ್ಯಾನಗರ ಕಾಲೋನಿಯ ರಾಜ್ವಿಕಾ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಭವ್ಯವಾಗಿ ನೆರವೇರಿತು.

ಗರ್ಬಾ ಯಾವುದೇ ಉಪಕರಣಗಳಿಲ್ಲದೇ ಕೈ ಚಲನೆಯ ಮೂಲಕ ಆಡುವ ಮೂಲಕ ಭಕ್ತಿಯ ಸಂಕೇತವನ್ನೂ, ದಾಂಡೀಯಾ ಎರಡು ಕೋಲುಗಳಿಂದ ಆಡುವ ಮೂಲಕ ಶಕ್ತಿಯ ಸಂಕೇತವನ್ನೂ ತೋರುತ್ತವೆ. ಇದು ದುರ್ಗಾ ದೇವಿಯು ಮಹಿಷಾಸುರನನ್ನು ಸಂಹರಿಸಿದ ಪೌರಾಣಿಕ ಹಿನ್ನೆಲೆಯನ್ನು ಪ್ರತಿಬಿಂಬಿಸುವ ವಿಶೇಷ ನೃತ್ಯವಾಗಿದೆ ಎಂದು ಅಂಡಗಿ ಪ್ರತಿಷ್ಠಾನದ ಕಾರ್ಯದರ್ಶಿ ರೇಖಾ ಅಂಡಗಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಅವರು ಗರ್ಬಾ ನೃತ್ಯದಲ್ಲಿಯೂ ಭಾಗವಹಿಸಿ ಎಲ್ಲರ ಮನಸೆಳೆಯುವಂತಾದರು.

ಕಾರ್ಯಕ್ರಮವನ್ನು ಮಹಾನಗರ ಪಾಲಿಕೆಯ ಸದಸ್ಯೆ ಯಂಕಮ್ಮ ಜಗದೇವ ಗುತ್ತೇದಾರ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ದೇವಿಯನ್ನು ಒಲಿಸಿಕೊಳ್ಳಲು ವಿವಿಧ ಪೂಜೆ-ಆರಾಧನೆಗಳ ನಡುವೆ ಗರ್ಬಾ ಮತ್ತು ದಾಂಡೀಯಾ ಕೂಡ ಪ್ರಮುಖವಾದವುಗಳಾಗಿವೆ. ವಿದ್ಯಾರ್ಥಿನಿಯರು, ಶಿಕ್ಷಕಿಯರು ಹಾಗೂ ಪಾಲಕ ಮಹಿಳೆಯರಿಗೆ ನವರಾತ್ರಿಯ ಅಂಗವಾಗಿ ಈ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಲೆಯ ಮುಖ್ಯಗುರು ಶಿಲ್ಪಾ ಕೋಟೆ ಅವರು ಅಧ್ಯಕ್ಷೀಯ ಮಾತಿನಲ್ಲಿ ತಿಳಿಸಿದರು.

ವೇದಿಕೆಯಲ್ಲಿ ಶಾಲೆಯ ಶಿಕ್ಷಕಿಯರಾದ ರಾಜೇಶ್ವರಿ ಪಾಟೀಲ, ನಸೀಂ, ದೀಪಿಕಾ, ಪವಿತ್ರ, ಕವಿತ್ರಾರಾಣಿ ಹಾಗೂ ಗೀತಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿನಿಯರು, ಶಿಕ್ಷಕಿಯರು, ಮಕ್ಕಳ ಪಾಲಕ ಮಹಿಳೆಯರು ಹಾಗೂ ವಿದ್ಯಾನಗರ ಕಾಲೋನಿಯ ಅಕ್ಕಮಹಾದೇವಿ ಮಹಿಳಾ ಟ್ರಸ್ಟ್ ಸದಸ್ಯರು ಗರ್ಬಾ ಮತ್ತು ದಾಂಡೀಯಾ ನರ್ತಿಸಿ ಸಂಭ್ರಮಿಸಿದರು. ಉತ್ಸವದ ನೆಲೆಗಟ್ಟಿನಲ್ಲಿ ಭಕ್ತಿ, ಶಕ್ತಿ ಮತ್ತು ಉತ್ಸಾಹದ ಹಬ್ಬದ ವಾತಾವರಣ ಆವರಿಸಿತ್ತು.