ಕಲಬುರಗಿಯಲ್ಲಿ ದತ್ತು ಕುರಿತು ಜಾಗೃತಿ ಕಾರ್ಯಕ್ರಮ

ಕಲಬುರಗಿಯಲ್ಲಿ ದತ್ತು ಕುರಿತು ಜಾಗೃತಿ ಕಾರ್ಯಕ್ರಮ

ಕಲಬುರಗಿಯಲ್ಲಿ ದತ್ತು ಕುರಿತು ಜಾಗೃತಿ ಕಾರ್ಯಕ್ರಮ

ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವತಿಯಿಂದ ಆಯೋಜನೆ

ಕಲಬುರಗಿ: ಮಕ್ಕಳ ರಕ್ಷಣಾ ನಿರ್ದೇಶನಾಲಯ, ಬೆಂಗಳೂರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ “

ದತ್ತು ಕಾರ್ಯಕ್ರಮ – ಕಾನೂನಿನಡಿ ಪಡೆದ ದತ್ತು ಜೀವನವಿಡಿ ಸುಖದ ಸಂಪತ್ತು” ಎಂಬ ಶೀರ್ಷಿಕೆಯಡಿ ಜಾಗೃತಿ ಕಾರ್ಯಕ್ರಮವನ್ನು ಕಲಬುರಗಿಯ ಸರ್ಕಾರಿ ವೀಕ್ಷಣಾಲಯ ಕಟ್ಟಡದಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯಾಗಿರುವ ಶ್ರೀಮತಿ ಮಂಜುಳಾ ವಿ. ಪಾಟೀಲ್ ಅವರು ಮಾತನಾಡಿ, “ಪ್ರತಿಯೊಂದು ಮಗುವಿಗೂ ಕುಟುಂಬದಲ್ಲಿ ಬೆಳೆದು ಬಾಳುವ ಹಕ್ಕು ಇದೆ. ದತ್ತು ಪ್ರಕ್ರಿಯೆಯು ಅನಾಥ, ಸಲತೃಪ್ತ ಹಾಗೂ ನಿರ್ಗತಿಕ ಮಕ್ಕಳಿಗೆ ಹೊಸ ಬದುಕು ನೀಡುವ ಕಾನೂನುಬದ್ಧ ಮತ್ತು ಮಾನವೀಯ ಮಾರ್ಗವಾಗಿದೆ” ಎಂದು ಹೇಳಿದರು.

 ಕಾನೂನಿನಡಿ ದತ್ತು ಸ್ವೀಕಾರ ಮಾಡುವವರು ಸರ್ಕಾರ ಮಾನ್ಯತೆ ನೀಡಿರುವ ದತ್ತು ಕೇಂದ್ರಗಳ ಮೂಲಕ ಮಾತ್ರ ಮಗುವನ್ನು ಸ್ವೀಕರಿಸಬೇಕು ಎಂದು ತಿಳಿಸಿದರು. 

ಕಾನೂನು ಬಾಹಿರ ದತ್ತು ಸ್ವೀಕಾರವು ಭವಿಷ್ಯದಲ್ಲಿ ಮಗುವಿನ ಮತ್ತು ಪೋಷಕರಿಬ್ಬರಿಗೂ ಕಾನೂನು ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಶ್ರೀ ವಿಶ್ವರಾಧ್ಯ ಈಜೇರಿ, ಕಾನೂನು ಮತ್ತು ಪರಿವೀಕ್ಷಣಾಧಿಕಾರಿಗಳಾದ ಭರತೇಶ್ ಶೀಲವಂತರ್, ರಕ್ಷಣಾಧಿಕಾರಿಗಳಾದ ಮಂಜುಳಾ ದೇವಿ ರೆಡ್ಡಿ,ಬಸವರಾಜ್, ಹಾಗೂ ಮಾರ್ಗದ ಸಂಸ್ಥೆಯ ನಿರ್ದೇಶಕ ಆನಂದ್ ರಾಜ್ ಉಪಸ್ಥಿತರಿದ್ದರು.