ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಿಸದಿದ್ದರೆ ನ.4 ರಂದು ಸತ್ಯಾಗ್ರಹಕ್ಕೆ ಮುಂದಾದ ರೈತರು
ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಿಸದಿದ್ದರೆ ನ.4 ರಂದು ಸತ್ಯಾಗ್ರಹಕ್ಕೆ ಮುಂದಾದ ರೈತರು
ಕಲಬುರಗಿ: ಚಿಂಚೋಳಿಯ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಿಸಲು ರೈತರ ಜೊತೆ ಸರ್ಕಾರ ಆಟವಾಡುತ್ತಿದೆ. ಕಾರ್ಖಾನೆ ಪ್ರಾರಂಭಿಸದೆ ಹೋದರೆ ನ.4 ರಿಂದ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟ ಕಾಲ ಧರಣಿ ಸತ್ಯಾಗ್ರಹ ನಡೆಸಲಾಗುವದು' ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಅಧ್ಯಕ್ಷ ಜಗದೀಶ ಪಾಟೀಲ ರಾಜಾಪೂರ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 30 ಸಾವಿರ ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆದ ಸಾವಿರಾರು ರೈತರು ಮತ್ತು ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಕಬ್ಬು ನುರಿಸುವ ಕಾರ್ಯ ಪ್ರಾರಂಭಿಸಲು ಕಾರ್ಖಾನೆ ಅನುಮತಿ ನೀಡಬೇಕು ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೈಕೋರ್ಟ್ ಸ್ಪಷ್ಟ ಆದೇಶ ನೀಡಿದೆ. ಆದರೂ ಮಂಡಳಿ ಅನುಮತಿ ನೀಡದೇ ನ್ಯಾಯಾಲಯದ ಆದೇಶ ಉಲ್ಲಂಘಿಸುತ್ತಿದೆ. ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಖಾನೆ ಪ್ರಾರಂಭಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ,ಸಚಿವರುಗಳಾದ ಭೀಮಣ್ಣ ಖಂಡ್ರೆ, ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಕಾಳಿಗಿ ,ಚಿಂಚೋಳಿ,ರೈತರು ಉಗ್ರ ಹೋರಾಟ ಮಾಡಲು ನಿರ್ಧರಿಸಿದ್ದಾರೆ.
ನ.4 ರಿಂದ ಕಬ್ಬು ಬೆಳೆದ ಎಲ್ಲಾ ರೈತರು ಹಳ್ಳಿ, ಹಳ್ಳಿಗಳಿಂದ ಹೋರಾಟಕ್ಕೆ ಸಜ್ಜಾಗಿದ್ದಾರೆ.
ನಮ್ಮ ಹೋರಾಟದಲ್ಲಿ ರೈತರಿಗೆ ಏನಾದರೂ ಅನಾಹುತಗಳು ಸಂಭವಿಸಿದರೆ ಸರ್ಕಾರವೇ ಹೊಣೆಯಾಗುತ್ತದೆ' ಎಂದು ಅವರು ಎಚ್ಚರಿಕೆ ಗಂಟೆ ಹೊಡೆದಿದ್ದಾನೆ.
ಕಲಬುರ್ಗಿ ಜಿಲ್ಲೆಯಲ್ಲಿರುವ ಎಲ್ಲಾ ಸಕ್ಕರೆ ಕಾರ್ಖಾನೆಗಳು 15 ದಿನದೊಳಗಾಗಿ ಪ್ರಾರಂಭಗೊಳ್ಳುತ್ತಿವೆ. ಸಿದ್ದಶ್ರೀ ಕಾರ್ಖಾನೆ ಪ್ರಾರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ. ಕಬ್ಬಿಗೆ ನಿಗದಿತ ಬೆಲೆ ಮಾಡಬೇಕು ಅಕ್ಟೋಬರ್ 30 ಒಳಗಾಗಿ, ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡದೆ ಹೋದರೆ ಸತ್ಯಾಗ್ರಹ ಜೊತೆಗೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಧರ್ಮರಾಜ ಸಾಹು ಎಚ್ಚರಿಕೆ ಸಂದೇಶ ನೀಡಿದ್ದಾರೆ.
ಗೋಷ್ಠಿಯಲ್ಲಿ ಸವರಾಜ ಪಾಟೀಲ ಅಂಕಲಗಿ, ,ಶಾಂತವೀರ ಪಾಟೀಲ ದಸ್ತಾಪೂರ, ಶಾಂತವೀರಪ್ಪ ಕಲಬುರಗಿ ಹೆಬ್ಬಾಳ, ಶರಣು ಬಿಲ್ಲಾಡ, ನಾಗೀಂದ್ರರಾವ ದೇಶಮುಖ, ಶರಣಬಸಪ್ಪ ರಟಕಲ್ ಉಪಸ್ಥಿತರಿದ್ದರು.