ನಕಲಿ ಪ್ರಮಾಣ ಪತ್ರ ಪಡೆದರೆ ಕ್ರಿಮಿನಲ್‌ ಕೇಸ್‌ ದಾಖಲಿಸಲು ಒತ್ತಾಯ

ನಕಲಿ ಪ್ರಮಾಣ ಪತ್ರ ಪಡೆದರೆ ಕ್ರಿಮಿನಲ್‌ ಕೇಸ್‌ ದಾಖಲಿಸಲು ಒತ್ತಾಯ

ನಕಲಿ ಪ್ರಮಾಣ ಪತ್ರ ಪಡೆದರೆ ಕ್ರಿಮಿನಲ್‌ ಕೇಸ್‌ ದಾಖಲಿಸಲು ಒತ್ತಾಯ

ಕಲಬುರಗಿ: ಪರಿಶಿಷ್ಟ ಪಂಗಡ ನಾಯಕ ತಳವಾರ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರದವರ ವಿರುದ್ಧ ಜಿಲ್ಲಾಡಳಿತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ರಾಜ್ಯ ಎಸ್.ಸಿ. ಎಸ್.ಟಿ ನಕಲಿ ಜಾತಿ ಪ್ರಮಾಣಪತ್ರಗಳ ತಡೆ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾರೆಪ್ಪ ನಾಯಕ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ, ಯಾದಗಿರಿ, ವಿಜಯಪುರ, ಬೆಳಗಾವಿ ಸೇರಿದಂತೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರಿಗೆ ಪ್ರಮಾಣಪತ್ರ ನೀಡಲಾಗಿದೆ ಎಂದು ಆರೋಪಿಸಿದರು.

೨೦೨೦ರಲ್ಲಿ ಪರಿವಾರ ಮತ್ತು ತಳವಾರ ಸಮುದಾಯಗಳಿಗೆ ಪರಿಶಿಷ್ಟ ಪಂಗಡದ ಸೌಲಭ್ಯ ವಿಸ್ತರಣೆ ಮಾಡಬಹುದು ಎಂದು ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ. ಅದರಂತೆ ರಾಜ್ಯದಲ್ಲಿಯೂ ಸಹ ನಾಯಕ ಜಾತಿಯ ತಳವಾರ. ಮತ್ತು ಪರಿವಾರ ಜಾತಿಯವರಿಗೆ ಎಸ್.ಟಿ. ಪ್ರಮಾಣ ಪತ್ರ ನೀಡಬೇಕು ಎಂದು ಆದೇಶ ಮಾಡಲಾಗಿದೆ' ಎಂದು ಹೇಳಿದರು.

ರಾಜ್ಯದಲ್ಲಿ ಹಿಂದುಳಿದ ವರ್ಗದ ಪಟ್ಟಿಯ ಕ್ರಮ ಸಂಖ್ಯೆ ೮೮ಎಚ್ ತಳವಾರ ಜನಾಂಗದವರು ಅಂಬಿಗ, ಗಂಗಾಮತಸ್ಥ, ಕಬ್ಬಲಿಗ ಜಾತಿಗೆ ಸೇರಿದ್ದಾರೆ. ಇವರು ನಾಯಕ ತಳವಾತ ಜಾತಿಗೆ ಸೇರಿಲ್ಲ. ಇವರಿಗೆ ಪ್ರಮಾಣ ಪತ್ರ ನೀಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಈ ಕೂಡಲೇ ಜಿಲ್ಲೆಯಲ್ಲಿ ನೀಡಿದ ಎಸ್.ಟಿ. ನಾಯಕ, ನಾಯ್ಕಡ್ ತಳವಾರ, ಪರಿವಾರ ಜಾತಿ ಸಿಂಧುತ್ವ ಪ್ರಮಾಣ ಪತ್ರಗಳನ್ನು ರದ್ದು ಮಾಡಬೇಕು. ಜಾತಿ ಪ್ರಮಾಣ ಪತ್ರ ನೀಡಿದ ತಹಶೀಲ್ದಾರ್ ಅವರನ್ನು ವಜಾಮಾಡಿ ಕ್ರಿಮಿನಲ್ ಕೇಸ್ ದಾಖಲು ಮಾಡಬೇಕು ಎಂದು ಆಗ್ರಹಿಸಿದರು.

 ಗೌಡಪ್ಪಗೌಡ ಆಲ್ದಾಳ, ಶರಣು ಸುಬೇದಾರ, ಸಂದೀಪ ಭರಣಿ, ಬಾಬುರಾವ ಬಡಿಗೇರ ಇದ್ದರು