ನನ್ನಮ್ಮ
 
                                ಕವನದ ಶೀರ್ಷಿಕೆ ನನ್ನಮ್ಮ
ಹಾಲಗೆನ್ನೆ ಮೊಗದವಳು
ಸವಿಜೇನ ಹಾಗವಳು
ಹೋಲಿಕೆಗೆ ಸಿಗದವಳು
ಪ್ರಕೃತಿಯ ಚೆಲುವು ಹೋತ್ತವಳು.
ಶ್ರೀಗಂಧದ ಸೀರೆ ಉಟ್ಟವಳು
ಸೂರ್ಯನ ಬೆಳಕು ತಂದವಳು
ಕೆಂದಾವರೆಯ ಕಣ್ಣೀನವಳು
ಒಲವಿನ ಹೂದೋಟದವಳು
ಕರುನಾಡಿಗೆ ಜ್ಞಾನದೀಪ ಬೆಳಗಿದವಳು
ಅವಳೇ.....ಅವಳೇ.....
ನಮ್ಮೆಲ್ಲರ ಹೆಮ್ಮೆಯ ಕನ್ನಡಮ್ಮ
ಭಾಗ್ಯಶ್ರೀ ತಂದೆ ಮಲ್ಲಿಕಾರ್ಜುನ ಹೂಗಾರ
ಮು.ಹಳ್ಯಾಳ ತಾ.ಅಫಜಲಪೂರ ಜಿ.ಕಲಬುರಗಿ
 

 kkeditor
                                    kkeditor                                 
                    
                 
                    
                 
                    
                 
                    
                 
                    
                 
                    
                 
                    
                 
    
             
    
             
    
             
    
             
    
             
    
             
    
 
    
 
    
 
    
 
    
 
    
                                        
                                     
    
 
    
