ರೈಲ್ವೆ ಮತ್ತು ಜೀವ ಶಕ್ತಿ ರಾಜ್ಯ ಮಂತ್ರಿಗಳಾದ ಶ್ರೀ ಸೋಮಣ್ಣ ಅವರಿಗೆ ಕೆಳ ಸೇತುವೆ ಮಂಜೂರು ಮಾಡಲು ಒತ್ತಾಯ

ರೈಲ್ವೆ ಮತ್ತು ಜೀವ ಶಕ್ತಿ ರಾಜ್ಯ ಮಂತ್ರಿಗಳಾದ ಶ್ರೀ ಸೋಮಣ್ಣ ಅವರಿಗೆ ಕೆಳ ಸೇತುವೆ ಮಂಜೂರು ಮಾಡಲು ಒತ್ತಾಯ
ಕಮಲನಗರ : ಕಮಲನಗರ ಪಟ್ಟಣದ ದಾದ್ರಾ ಸೇತುವೆ ಬಳಿ ರೈಲು ಹಳಿಯಿಂದ ಕೆಳ ಸೇತುವೆ(ಅಂಡರ್ ಬೀಡ) ಮಂಜೂರು ಮಾಡುವಂತೆ ಕಮಲ್ ನಗರ ನೂತನ ತಾಲೂಕ ಹೋರಾಟ ಸಮಿತಿ ಅಧ್ಯಕ್ಷರಾದ ಬಾಲಾಜಿ ಒತ್ತಾಯ ಮಾಡಿದರು ಪಟ್ಟಣದ ದಾದರಾ ಸೇತುವೆ ಇರುವ ಪಕ್ಕದ ವಿಶ್ವಾಸನಗರ ಬಡಾವಣೆಯ ನಾಗರೀಕರಿಗೆ ಹಾಗೂ ಬಿಸಿಎಮ್ ಹಾಸ್ಟೇಲ್, ಮೇಟ್ರಿಕ ಪೂರ್ವ ಹಾಸ್ಟೇಲ್, ಬಸ ನಿಲ್ದಾಣ. ನೂತನ ತಹಶೀಲ ಕಚೇರಿ ಹಾಗೂ ನ್ಯಾಯಾಲಯ ಕಚೇರಿಗಳು ಇದ್ದು, ಸದರಿ ಕಚೇರಿಗಳಿಗೆ ಹೋಗಲು ದಾದರಾ ಸೇತುವೆ ಅಂದರೇ ರಾಷ್ಟ್ರೀಯ ಹೆದ್ದಾರಿ ಮೇಲಿಂದ ಸುಮಾರು 2 ಕಿ.ಮೀ. ಸಂಚರಿಸಿ ಹೋಗಬೇಕಾಗಿದೆ. ಅಲ್ಲದೆ ಆ ಬಡಾವಣೆಯ, ಕಚೇರಿಯ ನಾಗರೀಕರಿಗೆ ಹಾಗೂ ಹಾಸ್ಟೆಲ್‌ನ ಸುಮಾರು 300 ಕ್ಕೂ ಹೆಚ್ಚು ವಿದ್ಯಾರ್ಥಿಗಳಿ ಪ್ರತಿ ನಿತ್ಯ ಶಾಲಾ-ಕಾಲೇಜಿಗೆ ಬರಲು ರಾಷ್ಟ್ರೀಯ ಹೆದ್ದಾರಿ ದಾದರಾ ಸೇತುವೆಯಿಂದ ಬಂದರೆ ಸುಮಾರು ಕಿ.ಮೀ ಆಗುತ್ತದೆ. ಆದರೆ ದಿನನಿತ್ಯ ವಿದ್ಯಾರ್ಥಿಗಳು ದಾದರಾ ಸೇತುವೆ ಬಳಿಯ ರೈಲು ಹಳಿಯಿಂದ ಸಂಚರಿಸುತ್ತಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಸದರಿ ಸಾರ್ವಜನಿಕರಿಗಾಗಿ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರೈಲು ಹಳಿಯಿಂದ ಕೆಳ ಸೇತುವೆ ಮಂಜೂರು ಮಾಡಿಸಿ ಕೊಡುವುದರಿಂದ ಅನಾಹುತ ತಡೆಗಟ್ಟಬಹುದು ಎಂದು ಮನವಿ ಮಾಡಿಕೊಂಡಿದ್ದರು.
ಈ ಸಂದರ್ಭದಲ್ಲಿ ಕಮಲನಗರ ತಾಲೂಕಿನ ಬಾಲಾಜಿ ತೆಲಂಗೆ,ಎಸ್ ಎನ್ ಶಿವಣಕರ, ವೈಜಿನಾಥ ಗುಡಾ, ನಿವೃತ್ತ ಯೋಧರಾದ ಗುಂಡಪ್ಪ ದಾನ, ಸಂತೋಷ್ ಸುಲಕೆ ಪರಮೇಶ್ವರ ಬಿರಾದರ್ ಬಸವರಾಜ ಪಾಟೀಲ್, ರಾಜಹಂಶ ಸೆಟ್ಠಗಾರ, ದಯಾನಂದ ರಾಜೋಳೆ , ಉಪಸ್ಥಿತರಿದ್ದರು.