ರತ್ನಕಾಂತಿ

ರತ್ನಕಾಂತಿ
ಮನುಜರೂಪದಿ
ದೈವಿಪುರುಷನೊಬ್ಬ
ಉದಿಸಿ,
ರತ್ನಕಾಂತಿ ಯ ಭುವಿಯೆಲ್ಲಾ
ಹರಡಿದ.
ದೇಶಕೆ ಬಲುದೊಡ್ಡ
ಉದ್ಯಮಿಯಾಗಿದ್ದರೂ,
ಮಧ್ಯಮ ಬದುಕ
ತಾ ಸಾಗಿಸಿದ.
ದೇಶದೊಳಿತಿಗೆ
ಮಹಾದೇಣಿಗೆ ನೀಡಿ,
ಮಹಾಮಾನವನಾಗಿ
ಮಿನುಗಿದ.
ಆದರ್ಶಕೆ ಅರ್ಥವಾಗಿ
ಅನುದಿನವೂ ಜೀವಿಸಿ,
ಎಲ್ಲರೆದೆಯಲಿ
ಅಚ್ಚಾಗಿ ಉಳಿದ.
ಸರಳತೆಯ ಬೆರಳು
ಹಿಡಿದು ಅಂತಃಕರಣದ
ಹೆಜ್ಜೆ ಹಾಕಿದ,
ಭಾರತಮಾತೆಯ ಅಗ್ರಜ.
ನಿತ್ಯ ಹಲವರ ಹುಟ್ಟು
ಹಲವರ ಸಾವು,
*ಟಾಟಾ* ರವರು ಉಳಿದರು
ಮಿಕ್ಕವರು ಅಳಿದರು.
ಪರಮಪ್ರಭೆ