ಮಲ್ಲಿಕಾರ್ಜುನ್ ಮುತ್ಯನ ವಿರುದ್ಧ ಷಡ್ಯಂತರ. - ತಿರುಪತಿ ಹತ್ತಿಕಟಗಿ ಖಂಡನೆ

ಮಲ್ಲಿಕಾರ್ಜುನ್ ಮುತ್ಯನ ವಿರುದ್ಧ ಷಡ್ಯಂತರ. - ತಿರುಪತಿ ಹತ್ತಿಕಟಗಿ ಖಂಡನೆ

ಮಲ್ಲಿಕಾರ್ಜುನ್ ಮುತ್ಯನ ವಿರುದ್ಧ ಷಡ್ಯಂತರ. - ತಿರುಪತಿ ಹತ್ತಿಕಟಗಿ ಖಂಡನೆ

ಶಹಾಪುರ : ತಾಲೂಕಿನ ಮಹಲ್ ರೋಜಾ ಮಲ್ಲಿಕಾರ್ಜುನ್ ಮುತ್ಯಾನ ವಿರುದ್ಧ ಷಡ್ಯಂತರ ರೂಪಿಸಲಾಗಿದೆ, ಇದು ಪೂರ್ವ ನಿಯೋಜಿತ ಕೃತ್ಯವಾಗಿದೆ ಎಂದು ಬಿಜೆಪಿಯ ಯುವ ಮುಖಂಡ ತಿರುಪತಿಯ ಹತ್ತಿಕಟಗಿ ತೀವ್ರವಾಗಿ ಖಂಡಿಸಿದ್ದಾರೆ.

ಧಾರ್ಮಿಕವಾಗಿ,ಸಾಮಾಜಿಕವಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತ ಸಮಾಜಮುಖಿ ಕೆಲಸ ಮಾಡುತ್ತಿರುವ ಮಹಲ್ ರೋಜಾ ಮಲ್ಲಿಕಾರ್ಜುನ್ ಮುತ್ಯನ ವಿರುದ್ಧ ಸುಳ್ಳು ಕೇಸು ದಾಖಲಾಗಿ ಇರುವುದು ನಿಜಕ್ಕೂ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಲ್ಲಿಕಾರ್ಜುನ್ ಮುತ್ಯಾನ ಬೆಳವಣಿಗೆ ಸಹಿಸದ ಕೆಲವು ಕಿಡಿಗೇಡಿಗಳು ವ್ಯಾಪಕ ಪ್ರಚಾರ ಮಾಡಿ ಇದನ್ನು ದುರುದ್ದೇಶ ಪೂರಕವಾಗಿ ವಿಡಿಯೋ ತಿರುಚಲಾಗಿದೆ ಎಂದು ಹೇಳಿದರು.

ಪೋಕ್ಸೋ ಕೇಸ್ ದಾಖಲು ಆಗುವುದಕ್ಕಿಂತ ಮುಂಚಿತವಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್.ಪಿ ಅವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗಿತ್ತು,ಏಕಾಏಕಿ ಪ್ರಕರಣ ದಾಖಲ ಮಾಡಿರುವುದು ಸರಿಯಲ್ಲ ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತ ಕೆಲಸ ಆಗಿದೆ ಕೂಡಲೇ ಈ ಪ್ರಕರಣವನ್ನು ಕೈಬಿಡಬೇಕು ಎಂದು ಸರಕಾರಕ್ಕೆ ಆಗ್ರಹಿಸಿದ್ದಾರೆ.