ಕಲಬುರಗಿಯಲ್ಲಿ ಸೆ.28 ರಂದು ಕಲ್ಯಾಣ ಕರ್ನಾಟಕ ಕೋಗಿಲೆ ಸೀಸನ್ 3 ಆಡಿಷನ್

ಕಲಬುರಗಿಯಲ್ಲಿ ಸೆ.28 ರಂದು ಕಲ್ಯಾಣ ಕರ್ನಾಟಕ ಕೋಗಿಲೆ ಸೀಸನ್ 3 ಆಡಿಷನ್

ಕಲ್ಯಾಣ ಕರ್ನಾಟಕ ಕೋಗಿಲೆ ಸೀಸನ್ 3 ಆಡಿಷನ್ ಸೆ.28 ರಂದು

ಕಲಬುರಗಿ : ಕರ್ನಾಟಕ ಸಂಘಟನಾ ವೇದಿಕೆ ವತಿಯಿಂದ ಕಲ್ಯಾಣ ಕರ್ನಾಟಕ ಕೋಗಿಲೆ ಸೀಸನ್ 3 ರ ಆಡಿಷನ್ ಸೆಪ್ಟೆಂಬರ್ 28 ರಂದು ಮುಂಜಾನೆ 10.00 ಗಂಟೆಯಿಂದ ಸಂಜೆ 4.00 ಗಂಟೆಯವರೆಗೆ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಲ್ ಹತ್ತಿರದ ಕನ್ನಡ ಭವನದಲ್ಲಿ ನಡೆಯಲಿದೆ ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷ ಗುರು ಬಂಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅವರು ಮುಂದುವರಿದು ಮಾತನಾಡುತ್ತಾ, ಈ ಸಂಗೀತ ಕಾರ್ಯಕ್ರಮವು ಎರಡು ತಿಂಗಳ ಕಾಲ ನಡೆಯಲಿದ್ದು ಒಟ್ಟು ಐದು ಸುತ್ತುಗಳನ್ನು ಹೊಂದಿರುತ್ತದೆ. ನವೆಂಬರ್‌ನಲ್ಲಿ ಗ್ರಾಂಡ್ ಫಿನಾಲೆ ನಡೆಯಲಿದ್ದು, ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ.

ಮೊದಲ ಬಹುಮಾನ **₹51,000**, ದ್ವಿತೀಯ ಬಹುಮಾನ **₹21,000**, ತೃತೀಯ ಬಹುಮಾನ **₹11,000** ಸೇರಿದಂತೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ. ಸಂಗೀತಾಸಕ್ತರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಅವರು ಕೋರಿದರು.

ಹೆಚ್ಚಿನ ಮಾಹಿತಿಗಾಗಿ 9880962222, 8310403084 ಸಂಪರ್ಕಿಸಲು ತಿಳಿಸಿದ್ದಾರೆ.