ಸಾಮಾಜಿಕ ಬದಲಾವಣೆಗೆ ರಂಗಭೂಮಿ ಶಕ್ತಿಯ ಸಾಧನ: ಶಿವ ಅಷ್ಠಗಿ

ಸಾಮಾಜಿಕ ಬದಲಾವಣೆಗೆ ರಂಗಭೂಮಿ ಶಕ್ತಿಯ ಸಾಧನ: ಶಿವ ಅಷ್ಠಗಿ

ಸಾಮಾಜಿಕ ಪರಿವರ್ತನೆಗೆ ಕಲೆ ಮತ್ತು ಸಾಹಿತ್ಯದ ಪಾತ್ರ ಮಹತ್ವಿದೆ: ಶಿವ ಅಷ್ಠಗಿ

ಸಂವಹನದ ಶಕ್ತಿಶಾಲಿ ಮಾಧ್ಯಮವಾಗಿರುವ ರಂಗಭೂಮಿ ಕಲೆಯು ಮನರಂಜನೆಯ ಜೊತೆಜೊತೆಗೆ ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು *ಬಿಜೆಪಿ ಯುವ ಮುಖಂಡ, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಠಗಿ* ಹೇಳಿದರು. 

ಅವರು ಕಲಬುರಗಿ ತಾಲ್ಲೂಕಿನ ಹಾಗರಗುಂಡಗಿ ಗ್ರಾಮದಲ್ಲಿ ಶರಣಬಸವೇಶ್ವರರ ಜಾತ್ರಾ ಮಹೋತ್ಸವದ ನಿಮಿತ್ತವಾಗಿ ಏರ್ಪಡಿಸಿದ್ದ ಸಾಮಾಜಿಕ ನಾಟಕ "ಪ್ರಾಣ ಹೋದರು ಮಾನ ಬೇಕು ಅರ್ಥಾತ್‌ ದೇವ ಮಾನವ" ನಾಟಕದ ಜ್ಯೋತಿ ಬೆಳಗಿಸಿ ಮಾತನಾಡುತ್ತಿದ್ದರು.

ಸ್ನೇಹ-ಸಂಬಂಧ, ಕುಟುಂಬ, ಸಾಕ್ಷರತೆ, ಅಸ್ಪೃಶ್ಯತೆ ನಿವಾರಣೆ, ಕೋಮು ಸೌಹಾರ್ದತೆ ಸೇರಿದಂತೆ ಮುಂತಾದ ಸಾಮಾಜಿಕ ಸಂದೇಶಗಳನ್ನು ನಾಟಕ ಪ್ರದರ್ಶನ ಮೂಲಕ ಜನಮಾನಸಕ್ಕೆ ತಲುಪಿಸುವ ಸಾಕಷ್ಟು ಪ್ರಯತ್ನಗಳು ಹಿಂದಿನ ಕಾಲದಿಂದಲೂ ಆಗುತ್ತಿದ್ದವು, ಟಿವಿ ಮೊಬೈಲ್ಗಳ ಹಾವಳಿಗಳ ಮಧ್ಯೆಯೂ ಈಗಲೂ ಮುಂದುವರಿದಿದೆ.

ಈಗ ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್ ಫೋನ್ ಗಳಿವೆ ಆದರೂ ಈ ನಾಟಕ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಸೇರಿರುವುದು ನಾಟಕಗಳಿಗಿರುವ ಶಕ್ತಿ ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವೇಂದ್ರಪ್ಪ ಮರತೂರ ನೆರವೇರಿಸಿದರು.

ಸಾನಿಧ್ಯ ವಹಿಸಿದ ಕಲಬುರಗಿಯ ಮಕ್ತಂಪುರ-ಹಾಗರಗುಂಡಗಿ ವಿರಕ್ತಮಠದ ಶ್ರೀ ಮ.ನಿ.‌ಪ್ರ ಶಿವಾನಂದ ಮಹಾಸ್ವಾಮಿಗಳು ಮಾತನಾಡಿ ಮನುಷ್ಯ ಅಶಾಶ್ವತ, ಆದರೆ ಕಲೆ ಸಾಹಿತ್ಯ ಮತ್ತು ಸಂಗೀತ ಶಾಶ್ವತ ಅವುಗಳನ್ನು ಉಳಿಸಿ ಬೆಳೆಸಬೇಕಾದುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.

ಕಾರ್ಯಕ್ರಮದ ವೇದಿಕೆ ಮೇಲೆ ತಾಲ್ಲೂಕು ಪಂಚಾಯತ ಮಾಜಿ ಸದಸ್ಯ ಷಣ್ಮುಕಪ್ಪ ಸಿಬರಬಂಡಿ, ನಂದಿಕೂರ ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರಕಾಂತ ಪೂಜಾರಿ, ಕಾಂಗ್ರೆಸ್ ಮುಖಂಡರಾದ ಬಸವರಾಜ್ ವಾಲಿ, ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶರಣು ಮಂದರವಾಡ, ಮುಖಂಡರಾದ ಭೀಮಶಾ ಖನ್ನಾ, ಬಾಬುರಾವ ವೈಜಾಪುರ್, ಸೋಮಶೇಖರ ಸಜ್ಜನ್, ಗುರುಬಸಯ್ಯ ಹಿರೇಮಠ, ಪದ್ಮಾರಾಜ ನಂದ್ಯಾಳ, ಭೀಮಾಶಂಕರ ಮರತೂರ್, ಶಿವಕುಮಾರ್ ಕಾಳೆ, ಅರವಿಂದ ಹುಣಚಿಕೇರಿ, ಮಲ್ಲಿಕಾರ್ಜುನ ಗುಡಬಾ, ಬಸವರಾಜ್ ಕಂಠಿಕರ್, ಶೈಲೇಶ್, ನಿಂಗಣ್ಣ ಆಂದೇಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಭೀಮಶಾ ಖನ್ನಾ ಸ್ವಾಗತಿಸಿದರು, ಡಾ. ಬಾಬುರಾಯ ಪೂಜಾರಿ ನಿರೂಪಿಸಿದರು, ಬಾಬುರಾಯ ವೈಜಾಪುರ ವಂದಿಸಿದರು.