ಲಿಂ.ನಾಗಣ್ಣ ಗಣಜಲಖೇಡ ಪ್ರಥಮ ಪುಣ್ಯ ಸ್ಮರಣೆ ಸಾರ್ಥಕ ಜೀವನ ಲೋಕಾರ್ಪಣೆ: ಸೆ.೨೮ ರಂದು

ಲಿಂ.ನಾಗಣ್ಣ ಗಣಜಲಖೇಡ ಪ್ರಥಮ ಪುಣ್ಯ ಸ್ಮರಣೆ
ಸಾರ್ಥಕ ಜೀವನ ಲೋಕಾರ್ಪಣೆ: ಸೆ.೨೮ ರಂದು
ಕಲಬುರಗಿ: ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿಯಾಗಿ, ಅನೇಕ ಹೆಣ್ಣು ಮಕ್ಖಳಿಗೆ ಅಂಗನವಾಡಿ ಕಾರ್ಯಕರ್ತೆ, ಸಹಾಯಕರಾಗಿಸಿ ಸಾವಿರಾರು ಉದ್ಯೋಗ ನೀಡಿ ಮಹಿಳಾ ಸಬಲೀಕರಣಕ್ಜೆ ಮುಂದಾದವರು ಅವರ ಪ್ರಥಮ ಪುಣ್ಯ ಸ್ಮರಣೆಯನ್ನು ನೆನಪಿಗೆ ಹುಮನಾಬಾದ ಹಿರಿಯ ಸಾಹಿತಿ ಡಾ.ಎಚ್.ಕಾಶೀನಾಥ ರೆಡ್ಡಿ ಸಂಪಾದಿಸಿದ ಸಾರ್ಥಕ ಜೀವನ ಎಂಬ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಇದೇ ಸೆಪ್ಟೆಂಬರ್ ೨೮ ರಂದು ರವಿವಾರ ಬೆಳಗ್ಗೆ ೧೦-೩೦ ಗಂಟೆಗೆ ವೀರಶೈವ ಕಲ್ಯಾಣ ಮಂಟಪ ಖರ್ಗೆ ಪೆಟ್ರೋಲ್ ಬಂಕ್ ಹತ್ತರದ ಹುಮನಾಬಾದ ರಿಂಗ ರಸ್ತೆ ಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪರಿವಾರ ಡಾ.ಶರಣಬಸಪ್ಪ ಗಣಜಲಖೇಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರಂಗಧರ ಮಠ ಶ್ರೀಶೈಲ ಮತ್ತು ಸುಲಫಲ ಮಠ ಕಲಬುರಗಿ ಜಗದ್ಗುರು ಡಾ.ಸಾರಂಗಧರ ಮಹಾಸ್ವಾಮಿಗಳು ಮತ್ತು ಸೊನ್ನದ ಡಾ.ಸಿವಾನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿ ಗ್ರಂಥ ಲೋಕಾರ್ಪಣೆ ಮಾಡುವರು.ದಕ್ಷಿಣ ಮತ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಉದ್ಘಾಟಿಸುವರು ನಿಕಟಪೂರ್ವ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಅಪ್ಪಾರಾವ್ ಅಕ್ಕೋಣಿ ಅಧ್ಯಕ್ಷತೆ ವಹಿಸುವರು. ಗ್ರಂಥ ಸಂಪಾದಕ ಎಚ್‌ಕಾಶೀನಾಥರೆಡ್ಡಿ ಭಾಗವಹಿಸುವರು, ಅವರ ಪರಿವಾರ,ಬಂಧು ಮಿತ್ರರು, ಅಧಿಕಾರಿಗಳು, ಸಾಹಿತಿಗಳು,ಸಾಹಿತ್ಯಾಸಕ್ತರು,ಅಭಿಮಾನಿಗಳು,ಭಾಗವಹಿಸಲು ಸಾಹಿತಿ ಮತ್ತು ಸಂಚಾಲಕ ಡಾ.ಗವಿಸಿದ್ಧಪ್ಪ ಪಾಟೀಲ ಕೋರಿದ್ದಾರೆ.