"ಚಿನ್ಮಯಜ್ಞಾನಿ "ಪ್ರಶಸ್ತಿ ಪ್ರದಾನ ಸಮಾರಂಭ
"ಚಿನ್ಮಯಜ್ಞಾನಿ "ಪ್ರಶಸ್ತಿ ಪ್ರದಾನ ಸಮಾರಂಭ
ಕಮಲಾಪುರ :ಶರಣ ಸಾಹಿತ್ಯ ಪರಿಷತ್ತು ಕಮಲಾಪುರ ತಾಲೂಕ ಘಟಕದ ವತಿಯಿಂದ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಹಾಗೂ ಲಿಂ. ಚಿತoಬರರಾವ ವಡ್ಡನಕೇರಿ ಸ್ಮರಣಾರ್ಥ "ಚಿನ್ಮಯ ಜ್ಞಾನಿ"ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 1/9/2024 ರಂದು ನಾವದಗಿಯ ದೇಶಿಕೇಂದ್ರ ವಸತಿ ಶಾಲೆಯ ಸಾಂಸ್ಕೃತಿಕ ಲೋಕದಲ್ಲಿ ಹಮ್ಮಿಕೊಂಡಿದ್ದು ಡಾ. ಮಲ್ಲಿಕಾರ್ಜುನ ವಡ್ಡನಕೇರಿ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾoಸ್ಕೃತಿಕ ಲೋಕದ ಅಧ್ಯಕ್ಷರಾದ ಡಾ. ರಾಜೇಂದ್ರ ಯರನಾಳೆ ಅವರು ವಹಿಸಲಿದ್ದಾರೆ. ಶರಣ ಚಿಂತಕರಾದ ಶ್ರೀ ಬಸವರಾಜ ಮರಬದ ಅವರು 'ಕಾಯಕ ಮತ್ತು ದಾಸೋಹ 'ಮೇಲೆ ಅನುಭವ ನೀಡಲಿದ್ದು, ಕಾರ್ಯಕ್ರಮದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಗ್ರಂಥ ಪಾಲಕರಾದ ಡಾ.ಗಣಪತಿ ಶಿಂದೆ ಕಮಲಾಪುರ ತಾಲೂಕ ಕಾರ್ಯನೀರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಡಾ. ತೀರ್ಥಕುಮಾರ ಬಳಕೊಟಾ, ಕಮಲಾಪುರ ತಾಲೂಕ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಶರಣಬಸಪ್ಪ ವಡ್ಡನಕೇರಿ ದೇಶಿಕೇಂದ್ರ ವಸತಿ ಶಾಲೆಯ ವಸತಿ ಸಂಚಾಲಕರಾದ ಶ್ರೀ ಶಿವರಾಜ ಧಟ್ಟಿ ಹಾಗೂ ಶ್ರೀಮತಿ ಭುವನೇಶ್ವರಿ ಧಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರರಿದ್ದಾರೆ.
ಚಿನ್ಮಯ ಜ್ಞಾನಿ ಪ್ರಶಸ್ತಿ ಪುರಸ್ಕೃತರು
ಶ್ರೀಮತಿ ಕಸ್ತೂರಿಬಾಯಿ ಅಣ್ಣಪ್ಪ ಕವನಳ್ಳಿ (ಜಾನಪದ )ಶ್ರೀ ಮಲ್ಲಿಕಾರ್ಜುನ ಚಂದ್ರಪ್ಪ ಶೇರಿಕಾರ (ಶರಣ ಸಾಹಿತ್ಯ )ಶ್ರೀ ಅಯ್ಯಣ್ಣ ನಂದಿ ಬಳಬಟ್ಟಿ(ಶರಣ ಸಾಹಿತ್ಯ )ಡಾ. ಸುನಿತಾ ಪಾಟೀಲ(ಪತ್ರಿಕೋದ್ಯಮ ಮತ್ತು ಶಿಕ್ಷಣ )ಡಾ. ಶರಣು. ಬಿ ಹೊನ್ನಗೆಜ್ಜೆ (ಶಿಕ್ಷಣ )ಅವರಿಗೆ ಚಿನ್ಮಯಜ್ಞಾನಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿಗಳಾದ ಶ್ರೀ ಅಂಬಾರಾಯ ಮಡ್ಡೆ ತಿಳಿಸಿದ್ದಾರೆ.