ಕಲಬುರಗಿಯಲ್ಲಿ ಬೃಹತ್ ಮರ ಬಿದ್ದು ಸಂಚಾರ ಅಸ್ತವ್ಯಸ್ತ

ಕಲಬುರಗಿಯಲ್ಲಿ ಬೃಹತ್ ಮರ ಬಿದ್ದು ಸಂಚಾರ ಅಸ್ತವ್ಯಸ್ತ

ಕಲಬುರಗಿಯಲ್ಲಿ ಬೃಹತ್ ಮರ ಬಿದ್ದು ಸಂಚಾರ ಅಸ್ತವ್ಯಸ್ತ

ಕಲಬುರಗಿ: ನಗರದ ಶಹಾಬಜಾರ ಬಡಾವಣೆಯ ಶ್ರೀ ಮರಗಮ್ಮ ದೇವಿ ದೇವಸ್ಥಾನ ಹಾಗೂ ಸುಲಫಲ ಮಠದ ಸಮೀಪದಲ್ಲಿ ಇಂದು ಬೆಳಗಿನ ಜಾವ ಬೃಹತ್ ಗಾತ್ರದ ಮರ ಬುಡಸಮೇತ ಉರುಳಿ ಬಿದ್ದು ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ.

ಮರ ಬಿದ್ದುಬಂದ ಪರಿಣಾಮವಾಗಿ ರಸ್ತೆ ಸಂಪೂರ್ಣವಾಗಿ ಮುಚ್ಚಿಕೊಂಡಿದ್ದು, ಕೆಲವೊಂದು ವಾಹನಗಳಿಗೆ ಜಕಂ ಉಂಟಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆ ಸಮಯದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಸಾರ್ವಜನಿಕರ ಸಂಚಾರ ಪ್ರಾರಂಭವಾಗಿರಲಿಲ್ಲದ ಕಾರಣ ದೊಡ್ಡ ದುರಂತ ತಪ್ಪಿದೆ.

ಮಹಾನಗರ ಪಾಲಿಕೆಯ ವಾಹನದ ಮೇಲೆ ಮರ ಬಿದ್ದಿದ್ದೆ ಅದೃಷ್ಟ ವಶಾ ಆ ಸಂದರ್ಭದಲ್ಲಿ ಪೌರಕಾರ್ಮಿಕರು ಚಹಾ ಕುಡಿಯಲು ವಾಹನದಿಂದ ಕೆಳಗೆ ಹೋಗಿದ್ದ ಕಾರಣ ಅವರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ನಗರಸಭೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮರ ತೆರವುಗೊಳಿಸುವ ಕಾರ್ಯಕ್ಕೆ ಕೈಹಾಕಿದ್ದಾರೆ. ಸ್ಥಳೀಯ ಪೊಲೀಸರು ಸಂಚಾರ ನಿಯಂತ್ರಣ ಹಸ್ತಗೊಳಿಸಿಕೊಂಡಿದ್ದು, ವಾಹನಗಳನ್ನು ಬದಲಿ ಮಾರ್ಗಗಳ ಮೂಲಕ ಸಾಗಿಸಲಾಗುತ್ತಿದೆ.

ನಿತ್ಯ ಸಂಚಾರ ನಡೆಯುವ ಈ ಪ್ರಮುಖ ರಸ್ತೆಯಲ್ಲಿ ಮರ ಬಿದ್ದ ಪರಿಣಾಮ ಸ್ಥಳೀಯರು ಭೀತಿಗೊಳಗಾಗಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆಗೊಳಗಾಗದಂತೆ ಹಳೆಯ ಮರಗಳ ಸಮೀಕ್ಷೆ ನಡೆಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹ ವ್ಯಕ್ತಪಡಿಸಿದ್ದಾರೆ.