ವಿಶ್ವಪ್ರಸಿದ್ಧ ಮೈಸೂರು ದಸರಾ ಪ್ರಧಾನ ಕವಿಗೋಷ್ಠಿಗೆ ಸಾಹಿತಿ ಡಾ.ಉಬಾಮ ಆಯ್ಕೆ

ವಿಶ್ವಪ್ರಸಿದ್ಧ ಮೈಸೂರು ದಸರಾ ಪ್ರಧಾನ ಕವಿಗೋಷ್ಠಿಗೆ ಸಾಹಿತಿ ಡಾ.ಉಬಾಮ ಆಯ್ಕೆ
ಉಮೇಶ್ ಬಾಬು ಮಠದ್ ಇವರು ಮೂಲತಃ ವಿಜಯ ನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗಡಿ ಗ್ರಾಮದವರು
ಸದರಿಯವರು ಕಥೆ, ಕವನ, ಲೇಖನ, ಕಾದಂಬರಿ, ಪ್ರಬಂಧ, ಸಂಶೋಧನ ಲೇಖನ, ಆಧುನಿಕ ವಚನಗಳನ್ನು ಬರೆಯುತ್ತ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ವಿವಿಧ ಪದವಿಗಳನ್ನು ಮೂಡಿಗೆರಿಸಿಕೊಂಡು ಹಲವು ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸಿ ಸೈ ಎನ್ನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಇವರೊಬ್ಬ ಸಾಮಾಜಿಕ ಚಿಂತಕರು ಎಂದು ಇವರ ಬರವಣಿಗೆಗಳ ಮೂಲಕ ತಿಳಿದು ಬರುತ್ತದೆ. ಹಲವು ಪ್ರಕಾರಗಳ ಸಾಹಿತ್ಯದ ಮೂಲಕ ಈವರೆಗೂ ಎಂಟು ಮೌಲ್ಯಯುತ ಕೃತಿಗಳನ್ನು ಜನಾರ್ಪಣೆ ಮಾಡಿರುತ್ತಾರೆ.
ಇವರ ಕಾವ್ಯನಾಮ ಬಹು ವಿಭಿನ್ನವಾಗಿದ್ದು ಅಮೇರಿಕ ಮಾಜಿ ಅಧ್ಯಕ್ಷ ಒಬಾಮಾ ಅವರ ಹೆಸರಿಗೆ ಸಾಮ್ಯತೆ ಹೊಂದಿರುವಂತೆ "ಉಬಾಮ" ಎಂದು ಇರುತ್ತದೆ. ಇದರ ಪೂರ್ಣನಾಮ ಉಮೇಶ್ ಬಾಬು ಮಠದ್.
ಇವರ 200ಕ್ಕೂ ಅಧಿಕ ಆಧುನಿಕ ವಚನಗಳಲ್ಲಿ ಕಾಣುವ ಅಂಕಿತನಾಮ ಇನ್ನೂ ಎಲ್ಲರ ಗಮನ ಸೆಳೆಯುತ್ತದೆ. ಏಕೆಂದರೆ
"ಬಸವಕಾಂತರ ಕಂದ" ಇವರ ಅಂಕಿತನಾಮ.
ತನ್ನ ತಂದೆ ಹೆಸರು ಬಸಯ್ಯ ತಾಯಿ ಏಕಾಂತಮ್ಮ ಹೆತ್ತವರಿಬ್ಬರ ಹೆಸರಿನಿಂದ ಅರ್ಧ ಅಕ್ಷರಗಳನ್ನು ಪಡೆದು ಬಸವ+ಕಾಂತ+ಕಂದ= ಬಸವಕಾಂತರ ಕಂದ ಎನ್ನುವುದಾಗಿದೆ. ಬರೀ ಕಾವ್ಯ ನಾಮ ಮತ್ತು ಅಂಕಿತನಾಮ ಅಷ್ಟೇ ಅಲ್ಲ ಇವರ ಬರಹಗಳು ಕೂಡ ಅಷ್ಟೇ ಪರಿಣಾಕರಿಯಾಗಿರುತ್ತವೆ. ಉದಾಹರಣೆಗೆ ಇವರ ಪ್ರತಿ ಆಧುನಿಕ ವಚನಗಳು ವಿಭಿನ್ನವಾಗಿವೆ.
ಇದಕ್ಕೆ ಪೂರಕವೆಂಬಂತೆ
ಆಧುನಿಕ ವಚನ -156ರಲ್ಲಿ
ಹೀಗೆ ಹೇಳಿದ್ದಾರೆ.
ಬಿತ್ತಿ
ಬೆಳೆಯುವವರು
ಹತ್ತಿ ಕಾಳು
ಬಿಡಿಸುವವರು
ಎತ್ತು ಹಸುಗಳ
ಸಾಕುವವರು
ನಾಡ ಸಂಸ್ಕೃತಿ
ಉಳಿಸುವವರು
ನಗಣ್ಯಕ್ಕಾಗಿ
ನಗರ ಸೇರಿದರೆ
ಜನರ ಉದರ
ತುಂಬಿಸುವವರು
ಯಾರೆಂದ ನಮ್ಮ
ಬಸವಕಾಂತರ ಕಂದ.
ಹೀಗೆ ಇನ್ನೂ ಹತ್ತು ಹಲವು ಕ್ಷೇತ್ರಕ್ಕೆ ಸಂಬಂದಿಸಿದ ವಚನಗಳನ್ನು ಕಾಣಬಹುದು.
ಇವರ ಇನ್ನೊಂದು ಲೇಖನಗಳ ಕೃತಿಯು ವಿಶೇಷ ಶೀರ್ಷಿಕೆಯನ್ನು ಹೊಂದಿದ್ದು "ಬೇವರ್ಸಿ ಬದುಕಿನ ಬರಹಗಳು" ಕೃತಿಯಲ್ಲಿನ ಇಪ್ಪತ್ತಾರು ಲೇಖನಗಳು ಎಲ್ಲಾ ವರ್ಗದ ಜನರ ಮನ ಮುಟ್ಟುವಂತಿದೆ.
ಅದರಲ್ಲೂ ಅಂಕಗಳೇ ಅನ್ನದ ಬದುಕಲ್ಲ, ಕರಕೊಂಡು ಬನ್ನಿ ಹೊತ್ತುಕೊಂಡು ಹೋಗಿ. ಲೇಖನಗಳನ್ನು ಎಲ್ಲರೂ ಓದಲೇ ಬೇಕಾದವುಗಳೇ ಆಗಿವೆ. ಅನೇಕರು ಸರ್ಕಾರಿ ನೌಕರಿ ಸಿಕ್ಕರೆ ಸಾಕು ನೆಮ್ಮದಿಯಾಗಿ ಇದ್ದು ಬಿಡೋಣ ಎನ್ನುವವರ ಮದ್ಯದಲ್ಲಿ ನ್ಯಾಯಾಂಗ ಇಲಾಖೆಯ ನೌಕರರಾಗಿದ್ದುಕೊಂಡು ಸುದೀರ್ಘ ಎರಡು ದಶಕಕ್ಕೂ ಹೆಚ್ಚು ಸಮಯದಿಂದ ಸಾಹಿತ್ಯ ಕೃಷಿ ನಿರಂತರವಾಗಿ ಸಾಗುತ್ತಲೇ ಇದೆ. ಜೊತೆಗೆ ಹವ್ಯಾಸವಾಗಿ ಪ್ರವಾಸ, ವ್ಯವಸಾಯ, ಸಾಮಾಜಿಕ ಕಾರ್ಯಗಳು ಸಹ ಅಗಣಿತವಾಗಿರುವುದಕ್ಕೆ ಇವರು ಹೊಂದಿರುವ ಅಭಿಮಾನಿ ಬಳಗವೇ ಸಾಕ್ಷಿಕರಿಸುತ್ತದೆ.
ಇವರ ಸೇವೆಗೆ ನಲವತ್ತಕ್ಕೂ ಅಧಿಕ ಸಂಘ ಸಂಸ್ಥೆಗಳು ಗೌರವಿಸಿ ವಿವಿಧ ಪ್ರಶಸ್ತಿ, ಬಿರುದುಗಳನ್ನು ನೀಡಿ ಸನ್ಮಾಸಿವೆ. ಸರ್ಕಾರದ ವತಿಯಿಂದ ಸ್ವಾಮಿ ವಿವೇಕಾನಂದ ಜಿಲ್ಲಾ ಯುವ ಪ್ರಶಸ್ತಿ 2014, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ-2022
ಕನ್ನಡ ರಾಜ್ಯೋತ್ಸವದ ಅಂಗವಾಗಿ 2023ರಲ್ಲಿ ಕರ್ನಾಟಕ ಸರ್ಕಾರ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾದ ಕನ್ನಡ ಮಾತನಾಡುವ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.ಹಾಗೂ
ರಾಜ್ಯ ಮಟ್ಟದಲ್ಲಿ ಯುವ ವಿದ್ವಾಂಸರಿಗೆ ಕೊಡ ಮಾಡುವ ಕನಕ ಯುವ ಪುರಸ್ಕಾರ -2023ರ ಪ್ರಶಸ್ತಿಯನ್ನು ಪಡೆದಿದ್ದಾರೆ.
ಹೀಗೆ ಗಡಿ ಗ್ರಾಮದಿಂದ ಬಂದ ಇವರ ಸೇವೆಯನ್ನು ಪರಿಗಣಿಸಿ 2025 ನೇ ಸಾಲಿನಲ್ಲಿ ನಡೆಯುವ ವಿಶ್ವ ವಿಖ್ಯಾತ ಮೈಸೂರು ದಸರಾ ಪ್ರಧಾನ ಕವಿಗೋಷ್ಠಿಗೆ ವಿಜಯನಗರ ಜಿಲ್ಲೆಯಿಂದ ಆಯ್ಕೆಯಾಗಿರುತ್ತಾರೆ.
ಹಂಪಿ ನಾಡಿನ ಸಾಹಿತ್ಯ ಸವಿಯನ್ನು ಜಗದ್ವಿಖ್ಯಾತಿ ದಸರಾ ಕವಿಗೋಷ್ಠಿಯಲ್ಲಿ ಉಣಬಂದಿಸಲಿದ್ದಾರೆ
ಇವರ ನಾಡು ನುಡಿಯ ಸೇವೆ ಹೀಗೆ ಮುಂದುವರಿಯಲಿ ಎಂದು ನಾಟಕಕಾರ ಹಾಗೂ ರಂಗ ನಿರ್ದೇಶಕ ಕೆ. ಪಿ. ಎಂ ಗಣೇಶಯ್ಯ, ಖ್ಯಾತ ಸಾಹಿತಿ ಡಾ. ಗವಿಸಿದ್ದಪ್ಪ ಹೆಚ್ ಪಾಟೀಲ್, ಕೆ. ಎಂ. ಬಸಯ್ಯ ಸ್ವಾಮಿ, ವಿಜಯಕುಮಾರ್ ಬಿಳಿಗಿ, ರಘುರಾಮ್,
ವೀರಶೈವ ಮಹಾಸಭಾ ಚಿತ್ರದುರ್ಗ ಜಿಲ್ಲೆಯ ಉಪಾಧ್ಯಕ್ಷ ದಿನೇಶ್ ಮೈಲ, ಹಾಗೂ ನಹಳ್ಳಿ ಸಾಮಾಜಿಕ ಸಂಘಟಕ ದಯಾನಂದ ಹುಲಿಕೆರೆ , ಉಪನ್ಯಾಸಕ ಬಿ. ರವಿಕುಮಾರ್ ಶಾರ್ವರಿ, ಸಿದ್ದಾರ್ಥ್ ಮಠದ, ಚನ್ನವಿರಸ್ವಾಮಿ, ಬಸವರಾಜ್ ದಯಾಸಾಗರ, ಸಾಹಿತಿ ರಾಜು ಎಸ್ ಸೂಲೇನಹಳ್ಳಿ,
ಸಿ. ಕೃಷ್ಣಪ್ಪ, ಇಕ್ಬಾಲ್ ಆಹ್ಮದ್, ಮನೋಹರ್, ಬಸಪ್ಪಾಜಿ, ಮಾರುತಿ ಎಸ್ ಕರಡಿ, ಜಿ. ಡಿ ಮಧು, ಸದ್ಗುರು ಮೂರ್ತಿ, ಶ್ರೀಮತಿ ಲಕ್ಷ್ಮೀದೇವಿ, ಪರಿಪೂರ್ಣ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ವಿಜಯಕುಮಾರಿ,
ಜನಾರ್ಧನ್ ಗೌಡ, ಕೆ. ಎಂ. ಪರ್ವತಯ್ಯ, ಶಿಕ್ಷಕರಾದ ಗುರುಮೂರ್ತಿ ಮಾಸ್ಟರ್ ಹಾಗೂ ಮುಂತಾದವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.