ಸಂಗಮೇಶ್ವರ ಎಸ್ ಮುರ್ಕೆ ರಾಜ್ಯಮಟ್ಟದ ಕನ್ನಡ ಸೇವಾ ರತ್ನ ಪ್ರಶಸ್ತಿ
ಸಂಗಮೇಶ್ವರ ಎಸ್ ಮುರ್ಕೆ ರಾಜ್ಯಮಟ್ಟದ ಕನ್ನಡ ಸೇವಾ ರತ್ನ ಪ್ರಶಸ್ತಿ
ಶ್ರೀ ಕೇತಕಿ ಶೈಕ್ಷಣಿಕ ಸಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ(ರಿ)ಬೀದರ ಹಾಗೂ ಹಣ್ಮುಪಾಜಿ ಗೆಳೆಯರ ಬಳಗ ಬೀದರ, ೫೦ನೇ ವರ್ಷದ ಸಂಭ್ರಮದ ೬೯ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ರಾಜ್ಯಮಟ್ಟದ ಕನ್ನಡ ಸೇವಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ನನ್ನ ಅಲ್ಪ ಸಾಹಿತ್ಯ ಸೇವಾ ಕ್ಷೇತ್ರದಲ್ಲಿ ಗುರುತಿಸಿ ಸನ್ಮಾನಿಸಿರುವುದು ಎಂದು ಕಮಲನಗರ ತಾಲೂಕಿನ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಂಗಮೇಶ್ವರ ಎಸ್ ಮುರ್ಕೆ ಹಾಗೂ ಯುವ ಸಾಹಿತಿಗಳು ಸಂತಸ ತಂದಿದೆ ಎಂದು ಹೇಳಿದರು.
ಬೀದರ್ ಜಿಲ್ಲೆಯ ಯುವಕರನ್ನು ಗುರುತಿಸಿರುವ ಹಾಗೂ ಸಾಂಸ್ಕೃತಿಕ ಆಸಕ್ತಿ ಇರುವ ಅನೇಕ ಕಲೆಗಾರರನ್ನು ಗುರುತಿಸಿ ಅಂಥವರನ್ನು ಎಳೆತಂದು ಸನ್ಮಾನ ಮಾಡುತ್ತಿರುವದು ಹೀಗೆ ಮುಂದುವರೆಯಲಿ ಎಂದು ಹಣ್ಮುಪಾಜಿ ಗೆಳೆಯರ ಬಳಗ ಕನ್ನಡ ಸೇವಾ ಅಭಿಮಾನ ಉಳ್ಳವರಾಗಿದ್ದು ಈ ಆಸಕ್ತಿಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೂ ಅವರ ಬಳಗದವರಿಗೂ ಕೋಟಿ ಕೋಟಿ ನಮನಗಳನ್ನು ತುಂಬು ಹೃದಯದಿಂದ ಸಲ್ಲಿಸುತ್ತೇನೆ ಎಂದರು.