ಕಮಲಾಪುರ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ, ಸೊಂತನಲ್ಲಿ ನಡೆಯಲಿದೆ : ಸುರೇಶ್ ಲೇಂಗಟಿ

ಕಮಲಾಪುರ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ, ಸೊಂತನಲ್ಲಿ ನಡೆಯಲಿದೆ :  ಸುರೇಶ್ ಲೇಂಗಟಿ

  ಕಮಲಾಪುರ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ, ಸೊಂತನಲ್ಲಿ ನಡೆಯಲಿದೆ : ಸುರೇಶ್ ಲೇಂಗಟಿ 

ರವಿವಾರ ಕೆಂಬಾಳೆ ಖ್ಯಾತಿಯ ಕಮಲಾಪುರ ತಾಲೂಕಿನ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ತಾಲೂಕಿನ ಸೊಂತ್ ಗ್ರಾಮದಲ್ಲಿರುವ ಗುರುದತ್ತ ದಿಗಂಬರ ಶ್ರೀ ಮಾಣಿಕೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜರುಗಲಿದೆ ಎಂದು ಕಸಾಪ, ಕ.ತಾ.ಅಧ್ಯಕ್ಷ ಸುರೇಶ್ ಲೇಂಗಟಿ ತಿಳಿಸಿದರು.

ಕಾರ್ಯಕ್ರಮವು ಬೆಳಗ್ಗೆ 8:30 ಗಂಟೆಗೆ ಧ್ವಜಾರೋಹಣದೊಂದಿಗೆ ಆರಂಭಗೊಂಡು ಇಲ್ಲಿನ ಅನುಮಾನ ಮಂದಿರದಿಂದ ಶ್ರೀ ಮಾಣಿಕೇಶ್ವರ ದೇವಸ್ಥಾನದವರೆಗೂ ಸರೋಟಿನಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಶಿವರಾಜ ಶಾಸ್ತ್ರಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ನಾಡೋಜ ಮಹೇಶ್ ಜೋಶಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ವಿಜಯಕುಮಾರ್ ಪಾಟೀಲ್ ಅವರನ್ನು ಒಳಗೊಂಡು ಕಮಲಾಪುರದ ಶ್ರೀ ಶಾಂತಲಿಂಗ ದೇವರು, ಸೊಂತ ಶ್ರೀ ಶಿವಕುಮಾರ್ ಶಿವಾಚಾರ್ಯರು ಸಾನಿಧ್ಯ ವಹಿಸಲಿದ್ದು, ವಿವಿಧ ಕನ್ನಡಪರ ಸಂಘಟನೆಗಳು, ಇತರ ಸಂಘಟನೆಗಳು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಒಳಗೊಂಡು ಭವ್ಯವಾದ ಮೆರವಣಿಗೆ ಜರುಗಲಿದೆ ಎಂದು ಹೇಳಿದರು 

ಬೆಳಗ್ಗೆ 11 ಗಂಟೆಗೆ ಉದ್ಘಾಟನಾ ಸಮಾರಂಭ ಆರಂಭವಾಗಲಿದ್ದು ಸ್ವಂತ ಶ್ರೀ ಅಭಿನವ ಶರಣ ಶಂಕರಲಿಂಗ ಮಹಾರಾಜರು ದಿವ್ಯ ಸಾನಿಧ್ಯ ವಹಿಸಲಿದ್ದು ಮುತ್ಯಾನ ಬಬಲಾದ ಶ್ರೀ ಗುರುಪಾದಲಿಂಗ ಮಹಾಶಿವಯೋಗಿಗಳು ಸಮ್ಮುಖ ವಹಿಸಲಿದ್ದಾರೆ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ನಾಡೋಜ ಮಹೇಶ್ ಜೋಷಿ ಅವರು ಉದ್ಘಾಟಿಸಲಿದ್ದು ಕೆಂಬಾಳೆ ಕಣಜ ಎಂಬ ಸ್ಮರಣ ಸಂಚಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಬಿಡುಗಡೆ ಮಾಡಲಿದ್ದಾರೆ ಶಾಸಕ ಬಸವರಾಜ್ ಮತ್ತಿಮಡು ಅವರು ಭಾವಚಿತ್ರ ಪೂಜೆ ನೆರವೇರಿಸಲಿದ್ದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಆಸೆ ನುಡಿಗಳನ್ನು ಆಡಲಿದ್ದಾರೆ ಮಾಜಿ ಸಚಿವ ರೇವು ನಾಯಕ ಬೆಳಮಗಿ, ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್, ಕಮಲಾಪುರ್ ತಹಸೀಲ್ದಾರ್ ಮಹಮ್ಮದ್ ಮೋಹ ಸಿನ್, ಕಮಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಜನಾಥ ತಡಕಲ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಬಾಬುರಾವ್ ಯಡ್ರಾಮಿ, ಮಾಜಿ ಜಿಪಂ ಸದಸ್ಯ ಶಿವಶಕ್ತಿ ಪಾಟೀಲ್ , ಮಾಜಿ ಕಮಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿನಾಥ್ ಪಾಟೀಲ್ ಕಾಂಗ್ರೆಸ್ ಮುಖಂಡ ಗುರು ಮಾಟೂರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು 

ರಾಜ್ಯಸಭೆ ವಿರೋಧ ಪಕ್ಷದ ನಾಯಕರ ನಾಯಕರಾದ ಡಾ. ಮಲ್ಲಿಕಾರ್ಜುನ ಖರ್ಗೆ, ಕಲಬುರ್ಗಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಬೀದರ್ ಲೋಕಸಭಾ ಸದಸ್ಯ ಸಾಗರ್ ಖಂಡ್ರೆ ,ವಿಧಾನ ಪರಿಷತ್ ಸದಸ್ಯರಾದ ಬಿಜಿ ಪಾಟೀಲ್, ತಿಪ್ಪಣ್ಣ ಕಮಕೂರ್, ಚಂದ್ರಶೇಖರ್ ಪಾಟೀಲ್, ಶಶಿಲ್ ನಮೋಶಿ ,ಜಗದೇವ ಗುತ್ತೇದಾರ್, ಸುನಿಲ್ ವಲ್ಲಾಪುರೆ, ಸಾಯ್ಬಣ್ಣ ತಳವಾರ್ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.

ಮಧ್ಯಾಹ್ನ ಒಂದು ಗಂಟೆಗೆ ಉಪನ್ಯಾಸ ಗೋಷ್ಟಿ ಆರಂಭವಾಗಲಿದ್ದು ಕಮಲಾಪುರ ಪರಿಸರದ ಸಾಮರಸ್ಯ ಕುರಿತು ಹಿರಿಯ ಸಾಹಿತಿಗಳಾದ ಡಾಕ್ಟರ್ ಅಮೃತ ಕಟಕೆ, ಕಮಲಾಪುರ ಪರಿಸರದ ಸಾಹಿತ್ಯ ಕುರಿತು ಸಂಶೋಧಕಿ ಡಾ. ಗೀತಾಂಜಲಿ ವಾಲಿಕರ್, ಸಮ್ಮೇಳನ ಅಧ್ಯಕ್ಷರ ಬದುಕು ಬರಹ ಕುರಿತು ಶರಣಬಸವ ವಿವಿಯ ಕನ್ನಡ ವಿಭಾಗದ ಮುಖ್ಯಸ್ಥರಾದ ಕಲ್ಯಾಣ್ ರಾವ್ ಪಾಟೀಲ್ಉಪನ್ಯಾಸ ನೀಡಲಿದ್ದಾರೆ ಎಂದರು.

ಉಪನ್ಯಾಸಗೋಸ್ತಿಯ ಅಧ್ಯಕ್ಷತೆಯನ್ನು ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಪ್ರಾಧ್ಯಾಪಕರಾದ ಡಾ.ಅರುಣ್ ಕುಮಾರ್ ಲಗಶೆಟ್ಟಿ ವಹಿಸಲಿದ್ದು, ಹಿರಿಯ ಜೆಡಿಎಸ್ ಮುಖಂಡರಾದ ಬಸವರಾಜ್ ಬೀರಬಿಟ್ಟೆ , ಕಲ್ಬುರ್ಗಿ ಶ್ರೇಣಿ ಎರಡು ತಹಸಿಲ್ದಾರ್ ಗಂಗಾಧರ ಪಾಟೀಲ್ , ಹಿರಿಯ ಪತ್ರಕರ್ತರು ಸಾಹಿತಿ ಸುಭಾಷ್ ಬಣಗಾರ್, ಸಾಮಾಜಿಕ ಹೋರಾಟಗಾರ ಲಕ್ಷಪ್ಪ ಜಮಾದಾರ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಜಕುಮಾರ್ ಕಪನೂರ್ , ವಿ.ಸ.ನೌ ಸಂಘದ ಜಿಲ್ಲಾಧ್ಯಕ್ಷ ಸಂತೋಷ್ ದ್ಯಾಗೋಂಡ್, ಸಿದ್ದನಗೌಡ ಪಾಟೀಲ್ ,ಚನ್ನವೀರ ಸಲಗರ್ ,ಅಬ್ದುಲ್ ಸತ್ತರ್ ,ಮುರುಗೇಂದ್ರ ವೀರಶೆಟ್ಟಿ ,ಮಲ್ಲಿಕಾರ್ಜುನ ರಾಜಗಿರಿ, ಶಿವಕುಮಾರ್, ಮಹದೇವ ಬಬಲಾದ್, ಸೋಮನಗೌಡ ವಿಠಲಪುರ್ ,ಜೀವನ ರೆಡ್ಡಿ , ಶಾಂತಕುಮಾರ್ ಪುರದಾಳ್ ,ಝ ರಣಪ್ಪ ಚಿಂಚೋಳಿ, ಅಮಿತ್ ಕುಮಾರ್ ಕೊಳ್ಳದ ಗೌರವ ಅತಿಥಿಗಳಾಗಿ ಭಾಗವಹಿಸುವರು. 

ಮಧ್ಯಾಹ್ನ 3 ಗಂಟೆಗೆ ಕವಿಗೋಸ್ತಿ ಜರುಗಲಿದು ಕನ್ನಡ ಅಧ್ಯಯನ ವಿಭಾಗ ಕಲಬುರ್ಗಿಯ ಪ್ರಾಧ್ಯಾಪಕ ಡಾ.ಸುರೇಂದ್ರ ಕುಮಾರ್ ಕರಮಗಿ ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ ಪ್ರಾಧ್ಯಾಪಕ ಡಾ. ಲಕ್ಷ್ಮಿಕಾಂತ್ ಪಂಚಾಳನ್ನು ಆಡಲಿದ್ದಾರೆ, ಕಮಲಾಪುರ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಸವರಾಜ್ ಮಾಲಿ ಪಾಟೀಲ್ ,ಚಿಂಚನಸೂರ್ ಮಾಜಿ ಜೀಪಂ ಸದಸ್ಯ ಶರಣಗೌಡ ಪಾಟೀಲ್, ಕಾಂಗ್ರೆಸ್ ಮುಖಂಡ ಶರಣಬಸಪ್ಪ ಹಾದರಗಿ, ಉದಯ್ ಕುಮಾರ್ ಪಾಟೀಲ್, ಅರುಣ್ ಕುಮಾರ್, ವೀರೇಶ್ ವೀರಾದಾರ್ ,ಜಗದೇವಪ್ಪ ಅಂಕಲಗಿ ,ಸತೀಶ್ ಸೊರಡೆ , ದೀಪಕ್ ಹೊಡಲ , ಕಲ್ಲನಗೌಡ ಪಾಟೀಲ್, ಶಿವರಾಜ್ ಇಚಗೇರಿ , ನಿಂಗಪ್ಪ ಪ್ರಬುದ್ಧಕರ್, ಬಸವರಾಜ್ ಮಠಪತಿ ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.

ಸಾಯಂಕಾಲ 4:30 ಗಂಟೆಗೆ ಸಮಾರೋಪ ಮತ್ತು ಸತ್ಕಾರ ಸನ್ಮಾನ ಸಮಾರಂಭ ಜರುಗಲಿದ್ದು ಮಹಾಗವ್ ಕಳ್ಳಿ ಮಠದ ಶ್ರೀ ವಿರೂಪಾಕ್ಷ ದೇವರು ಸಾನಿಧ್ಯ ವಹಿಸಲಿದ್ದು, ಕಲ್ಬುರ್ಗಿ ಶಾಲಾ ಶಿಕ್ಷಣ ಇಲಾಖೆಯ ವಿಷಯ ಪರಿಕ್ಷಕ ನಾಗೇಂದ್ರಪ್ಪ ಅವರಾದಿ ಸಮಾರೋಪ ನುಡಿಗಳನ್ನು ಹಾಡಲಿದ್ದು, ಪ್ರಶಾಂತ್ ಮಾನಕರ್ ,ನಾಗಣ್ಣ ವಿಶ್ವಕರ್ಮ ನಿರ್ಣಯ ಮಂಡನೆ ಮಾಡಲಿದ್ದಾರೆ. 

ರಾಜಗೋಪಾಲ್ ರೆಡ್ಡಿ, ಶ್ಯಾಮ್ ನಾಟಿಕರ್, ರಾಜಕುಮಾರ ಕೋಟಿ, ಸಿ ಬಿ ಪಾಟೀಲ್ ಓಕಳಿ, ಸುನಿಲ್ ಮಾನಪಡೆ, ಪ್ರವೀಣ್ ಮುಚ್ಚಿಟ್ಟಿ, ,ಸಂತೋಷ್ ರಾಂಪುರ, ರಾಮಲಿಂಗ ಚಿಕ್ಕೇಗೌಡ ,ರವೀಂದ್ರ ಕೋರಿ, ಬಸವರಾಜ್ ಪಾಟೀಲ್ , ಗಿರೀಶ್ ಮಾಲಿಪಾಟೀಲ್ , ಶಿವಕುಮಾರ್ ಅಷ್ಟಗಿ, ರಾಜಕುಮಾರ್ ಮಂಠಾಳೆ, ಗುರುರಾಜ್ ಬೊಮ್ಮಣ್ಣ, ಅತಿಥಿಗಳಾಗಿ ಆಗಮಿಸಲಿದ್ದಾರೆಂದರು.

ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ಕಮಲಾಪುರ ತಾಲೂಕು ಹೋರಾಟಗಾರರನ್ನು, ಸಾಹಿತಿಗಳು, ಪತ್ರಕರ್ತರು, ವಿವಿಧ ಕ್ಷೇತ್ರದ ಸಾಧಕರನ ಗೌರವಿಸಿ ಸತ್ಕರಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರವೀಂದ್ರ ಬಿಕೆ (ಗೌರವ ಅಧ್ಯಕ್ಷರು) ಪ್ರಶಾಂತ್ ಮಾನಕರ್ ಗೌರವಾಧ್ಯಕ್ಷರು

 ಶ್ರೀಮತಿ ಕಸ್ತೂರಿಬಾಯಿ ರಾಜೇಶ್ವರ್ (ಮಹಿಳಾ ಪ್ರತಿನಿಧಿ )

ತುಳಸಿಬಾಯಿ ರಾಥೋಡ್ (ಮಹಿಳಾ ಪ್ರತಿನಿಧಿ )

, ಮಲ್ಲಿನಾಥ್ ಅಂಬಲಗಿ (ಪರಿಶಿಷ್ಟ ಜಾತಿ ಪ್ರತಿನಿಧಿ)

ಆನಂದ ವಾರಿಕ್ 

(ಸಹ ಕಾರ್ಯದರ್ಶಿ)

 ಸಂಜುಕುಮಾರ್ ನಾಟಿಕರ್ (ಹಿಂದುಳಿದ ವರ್ಗದ ಪ್ರತಿನಿಧಿ)

ಫಯಾಜ್ ಕಮಲಾಪುರ 

(ಅಲ್ಪಸಂಖ್ಯಾತ ಪ್ರತಿನಿಧಿ).

ಸ್ವಂತ ಕಸಾಪ ವಲಯ ಅಧ್ಯಕ್ಷ ಅನಂತ್ ಕುಮಾರ್ ಪಾಟೀಲ್ ಗೌರವಾಧ್ಯಕ್ಷ ರಾಘವೇಂದ್ರಗಾದ ಬಿಕೆ ಸಲಗರು ವಲಯ ಅಧ್ಯಕ್ಷ ಬಂಡಪ್ಪ ಚೀಲಿ ಮಹಗವಲಯ ಅಧ್ಯಕ್ಷ ಅಂಬರಾಯ ಮಡ್ಡಿ ಇತರರು ಭಾಗವಹಿಸಲಿದ್ದಾರೆ..

ಕೆಂಬಾಳೆ ನಾಡಿನ ಪ್ರಥಮ ಸಮ್ಮೇಳನ ಯಶಸ್ವಿಯಾಗಲಿದೆ ಕನ್ನಡ ಭಾಷೆ ನಮ್ಮೆಲ್ಲರ ತಾಯಿ ಭಾಷೆ ಪ್ರತಿನಿತ್ಯ ಕನ್ನಡನ ಮಾತನಾಡುವ ಮೂಲಕ ಕನ್ನಡ ಉಳಿಸಿ ಬೆಳೆಸಲು ಸಹಕರಿಸಬೇಕು ಸಮ್ಮೇಳನಕ್ಕೆ ಎಲ್ಲಾ ಭಕ್ತಾದಿಗಳು ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಶ್ರೀ ಶರಣ ಶಂಕರಲಿಂಗ ಮಹಾರಾಜರು, ಸೊಂತ/ಕಲಮೂಡ ಕರೆ ನೀಡಿದರು 

ಕಮಲಾಪುರ್ ತಾಲೂಕಿನ ಪ್ರಥಮ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ ಅಗತ್ಯ ಎಲ್ಲಾ ಸಿದ್ಧತೆ ಪೂರ್ಣಗೊಂಡಿದೆ, ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಮೊದಲ ಬಾರಿಗೆ ದಿವ್ಯಂಗ ಚೇತನ ಚೇತನರನ್ನ ಸರ್ವಾಧ್ಯಕ್ಷ ಮಾಡಲಾಗಿದೆ, ಎಲ್ಲರೂ ಆಗಮಿಸಿ, ಯಶಸ್ವಿಗೊಳಿಸಬೇಕೆಂದು ತಾಲೂಕ ಅಧ್ಯಕ್ಷ ಸುರೇಶ ಲೇಂಗಟಿ ತಿಳಿಸಿದರು.