ಪುಸ್ತಕ ಸಂಸ್ಕೃತಿ ಹೆಚ್ಚಿಸಲು ಡಾ. ಪದ್ಮಿನಿ ನಾಗರಾಜು ಕರೆ

ಪುಸ್ತಕ ಸಂಸ್ಕೃತಿ ಹೆಚ್ಚಿಸಲು ಡಾ. ಪದ್ಮಿನಿ ನಾಗರಾಜು ಕರೆ

ಪುಸ್ತಕ ಸಂಸ್ಕೃತಿ ಹೆಚ್ಚಿಸಲು ಡಾ. ಪದ್ಮಿನಿ ನಾಗರಾಜು ಕರೆ

ವಿದ್ಯಾರ್ಥಿಗಳಲ್ಲಿ ಹೆಚ್ಚು ಹೆಚ್ಚು ಓದುವ ಹವ್ಯಾಸ ಬೆಳೆಸುವುದರೊಂದಿಗೆ ಪುಸ್ತಕ ಸಂಸ್ಕೃತಿ ಬೆಳೆಸುವುಸುದು ಇಂದು ಅನಿವಾರ್ಯವಾಗಿದೆ ಎಂದು ಡಾ. ಪದ್ಮಿನಿ ನಾಗರಾಜು ಅಭಿಪ್ರಾಯ ಪಟ್ಟರು.

ನಗರದ ವಿಶ್ವನಾಥರೆಡ್ಡಿ ಮುದ್ನಾಳ್ ಪದವಿ ಮಹಾವಿದ್ಯಾಲಯ ಹಾಗೂ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡ ಡಾ.ಪ್ರೇಮಾ ಅಪಚಂದ ಅವರು ರಚಿಸಿದ ಪ್ರತಿಬಿಂಬ ಮತ್ತು ಮಾನಿನಿ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

ಸರಸ್ವತಿಯನ್ನು ಪುಸ್ತಕ ವಾಣಿ ಎಂದು ಕವಿಗಳು ವರ್ಣಿಸಿದ್ದಾರೆ .' ಪುಸ್ತಕಂ ಹಸ್ತ ಭೂಷಣಂ ' ಎಂದರೆ ಪುಸ್ತಕ ವಿದ್ಯಾರ್ಥಿಗಳ ಹಸ್ತ ಭೂಷಣ ಎಂದರು ಸುಭಾಷಿತಕಾರರು. ಒಂದು ಒಳ್ಳೆಯ ಪುಸ್ತಕವೆಂದರೆ ಜನಾಂಗದಿಂದ ಜನಾಂಗಕ್ಕೆ ಸಾಗಿಸಲ್ಪಟ್ಟ ಮಹಾ ಮೇಧಾವಿಯ ಜೀವನ ಸರ್ವಸ್ವ ಎಂದ ಮಿಲ್ಟನ್ -ಇಂಗ್ಲಿಷ್ನ ಒಂದು ಸೂಕ್ತಿಯಲ್ಲಿ. ಅಂದರೆ , 'ಉಡುಗೆ ತೊಡುಗೆಗಳಿಗೆ ಅಷ್ಟಾಗಿ ಗಮನ ಕೊಡದಿದ್ದರೂ ಚಿಂತೆಯಿಲ್ಲ . ಪುಸ್ತಕಗಳನ್ನು ಕೊಳ್ಳಬೇಕು , ಓದಬೇಕು , ಜ್ಞಾನದ ದಿಗಂತವನ್ನು ವಿಸ್ಥತಿಸಿಕೊಲ್ಲಬೇಕು 'ಎಂದು ಈ ಸೂಕ್ತಿ ಹೇಳುತ್ತದೆ . ಹಿಂದೆ ಸಂಸ್ಕ್ರತಿವಂತರ ಮನೆಯಲ್ಲಿ ಚಿಕ್ಕದೊಂದು ಗ್ರಂಥಭಂಡಾರವೇ ಇರುತಿತ್ತು . ಗ್ರಂಥದಾನ ಮಹಾ ಪುಣ್ಯಕರವಾದ ಕೆಲಸವೆಂದು ಭಾವಿಸಿದ್ದಾರೆ . ಕನ್ನಡನಾಡಿನ ಸ್ತ್ರೀ ರತ್ನವಾದ ದಾನ ಚಿಂತಾಮಣಿ ಅತ್ತಿಮಬ್ಬೆ ಪೊನ್ನ ಮಹಾಕವಿಯ ಶಾಂತಿ ಪುರಾಣವನ್ನು ಒಂದು ಸಾವಿರ ಪ್ರತಿ ಮಾಡಿಸಿ , ಗ್ರಂಥದಾನ ಮಾಡಿ ಖ್ಯಾತಳಾದ ವಿಷಯ ಕನ್ನಡನಾಡಿನ ಹೆಮ್ಮೆಯ ಸಂಗತಿ. ಪುಸ್ತಕಗಳ ಬಗೆಗೆ ನಮ್ಮ ತಾತ್ಸಾರ , ನಮ್ಮ ರಾಷ್ಟ್ರೀಯ ದೌರ್ಬಲ್ಯ .ಶ್ರೀಮಂತರು ಹೃದಯ ಶ್ರೀಮಂತರೆಂದು ತೋರಿಸಲು ನಾಗರಿಕರು ಸಂಸ್ಕ್ರತಿಹೀನರಲ್ಲ ಎಂದು ಸಮರ್ಥಿಸಲು ವಿದ್ಯಾವಂತರು ಕೇವಲ ಅಕ್ಷರಸ್ಥರಲ್ಲ ಎಂಬುದನ್ನು ರುಜುವಾತು ಪಡಿಸಲು ಒಳ್ಳೆಯ ಪುಸ್ತಕಗಳು ತಮ್ಮ ಮನೆಯ ಸಂಪತ್ತು ಎಂಬ ಭಾವನೆ ಬೆಳೆದು ನಾಡಿನಾದ್ಯಂತ ಪುಸ್ತಕ ಸಂಸ್ಕ್ರತಿ ವ್ಯಾಪಿಸಬೇಕು ಎಂದರು.

ಪುಸ್ತಕ ಕುರಿತು ಪತ್ರಗಾರ ಇಲಾಖೆ ಹಿರಿಯ ನಿರ್ದೇಶಕರಾದ ಡಾ. ವೀರಶೆಟ್ಟಿ ಅವರು ಮಾತನಾಡಿ ಮಾನಿನಿ ಕೃತಿಯು ಸ್ತ್ರೀವಾದ ನೆಲೆಯಲ್ಲಿ ರಚನೆಗೊಂಡಿದ್ದು,ಸ್ತ್ರೀಯನ್ನು ಮುಖ್ಯ ಭೂಮಿಕೆಯಲ್ಲಿ ಇಟ್ಟುಕೊಂಡು ವಿದ್ಯಾರ್ಥಿಗಳಿಂದ ರಚಿಸಿದ ಲೇಖನಗಳು ತುಂಬಾ ಅದ್ಬುತವಾಗಿದ್ದು, ಉತ್ತಮ ವೇದಿಕೆ ಕಲ್ಪಿಸಿದಂತಾಗಿದೆ ಅಲ್ಲದೆ ಪ್ರತಿಬಿಂಬ ಕೃತಿಯು ಡಾ. ಪ್ರೇಮಾ ಅವರ ಸಂಶೋಧನಾತ್ಮಕ ನೆಲೆಯಲ್ಲಿ ರೂಪಗೊಂಡ ಅದ್ಭುತ ವಿಷಯಗಳನ್ನು ಒಳಗೊಂಡ ಒಂದು ಆಕಾರ ಗ್ರಂಥವಾಗಿದೆ ಎಂದರು. ಕಾರ್ಯಕ್ರಮದ ವೇದಿಕೆ ಮೇಲೆ ಡಾ. ಶರಣಬಸಪ್ಪ ವಡ್ಡನಕೇರಿ ವಿ.ವಿ ಸಂಘದ ಸದಸ್ಯರಾದ ವೈಜನಾಥ ಕೋಳಾರ ಅಧ್ಯಕ್ಷತೆ ವಹಿಸಿದರೇ, ಶ್ರೀ ನಿಜಗುಣಿ ಎಸ್. ಡಿ., ವಿಜಯಕುಮಾರ್ ಹುಲಿ, ಪಿ. ಎಂ. ಚೌಧರಿ, ಶಿವಾನಂದ್ ಬಿ. ಎನ್, ಡಾ. ಬಸವರಾಜ ಮಠಪತಿ, ಉಪನ್ಯಾಸ ವೃಂದ ಹಾಗೂ ಲೇಖಕಿ ಡಾ. ಪ್ರೇಮಾ ಅಪಚಂದ ಉಪಸಿತರಿದ್ದರು.

 ಇದೇ ಸಂದರ್ಭದಲ್ಲಿ ಸಾಧನೆ ಮಾಡಿದ ಉಪನ್ಯಾಸಕರನ್ನು ಹಾಗೂ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಡಾ. ಬಸವರಾಜ ಮಠಪತಿಯವರು ಕಾರ್ಯಕ್ರಮ ನಿರೂಪಿಸಿದರೆ ಡಾ.ಶರಣಬಸಪ್ಪ ವಡ್ಡನಕೇರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳ ನಾಡಿದರು. ಉಪನ್ಯಾಸಕರಾದ ನಾಗೇಶ ಅವರು ವಂದಿಸಿದರು.