ಇಂದು "ಕೆಂಪು ಬಸ್ಸಿನ ಸುಂದ್ರಿ"ಕೃತಿ ಲೋಕಾರ್ಪಣೆ.
ಇಂದು "ಕೆಂಪು ಬಸ್ಸಿನ ಸುಂದ್ರಿ"ಕೃತಿ ಲೋಕಾರ್ಪಣೆ.
ಶಹಾಪುರ : ಸಗರನಾಡಿನ ಸೃಜನಶೀಲ ಬರಹಗಾರ,ಯುವ ವಾಗ್ಮಿ,ಚಿಂತಕ,ಬಸವರಾಜ ವನದುರ್ಗ ರಚಿಸಿದ ಕೆಂಪು ಬಸ್ಸಿನ ಸುಂದ್ರಿ ಕೃತಿಯನ್ನು ನಗರದ ಶುಭಶ್ರೀ ಫಂಕ್ಷನ್ ಹಾಲ್ ನಲ್ಲಿ ನವಂಬರ್ 26 ರಂದು ಬೆಳಗ್ಗೆ 10.30 ಕ್ಕೆ ಲೋಕಾರ್ಪಣೆ ಗೊಳ್ಳಲಿದೆ ಹಾಗೂ ಇದೆ ಸಂದರ್ಭದಲ್ಲಿ ನಾಡಿನ ಸಾಧಕರಿಗೆ ಅಪ್ಪ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಪ್ರಕಟಣೆಗೆ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಗೋಲಪಲ್ಲಿಯ ಮಹರ್ಷಿ ವಾಲ್ಮೀಕಿ ಆಶ್ರಮದ ಶ್ರೀಗಳಾದ ವರದಾನೇಶ್ವರ ಮಹಾಸ್ವಾಮಿಗಳು ಹಾಗೂ ಮುಡಬೂಳದ ರಂಗಲಿಂಗೇಶ್ವರ ಪುಣ್ಯಾಶ್ರಮದ ಶ್ರೀಗಳಾದ ತ್ರಿಶೂಲಪ್ಪ ಶರಣರು ದಿವ್ಯ ಸಾನಿಧ್ಯ ವಹಿಸುವರು,
ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಪುರ ಕಾರ್ಯಕ್ರಮವನ್ನು ಉದ್ಘಾಟಿಸುವರು,ಸುರಪುರದ ಮಾಜಿ ಸಚಿವರಾದ ನರಸಿಂಹ ನಾಯಕ ರಾಜುಗೌಡರ ಪುಸ್ತಕ ಬಿಡುಗಡೆಗೊಳಿಸುವರು, ದೇವದುರ್ಗದ ಶಾಸಕಿ ಕರಿಯಮ್ಮ ಜಿ,ನಾಯಕ ಜ್ಯೋತಿ ಬೆಳಗಿಸುವರು, ಮಹರ್ಷಿ ವಾಲ್ಮೀಕಿ ಸಂಘದ ಜಿಲ್ಲಾಧ್ಯಕ್ಷರಾದ ಗೌಡಪ್ಪಗೌಡ ಆಲ್ದಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳುವರು.ಕೃತಿ ಕುರಿತು
ಜೇವರ್ಗಿಯ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಸಮಾಜಶಾಸ್ತ್ರದ ಉಪನ್ಯಾಸಕರಾದ ಡಾ: ಈರಣ್ಣ ಹವಾಲ್ದಾರ್ ಮಾತನಾಡುವರು.
ಈ ಕಾರ್ಯಕ್ರಮದಲ್ಲಿ ಬಿಜೆಪಿಯ ಯುವ ಮುಖಂಡ ಅಮಿನರೆಡ್ಡಿ ಪಾಟೀಲ್,ಕನ್ನಡಪರ ಹೋರಾಟಗಾರ ಡಾ:ಶರಣು ಬಿ.ಗದ್ದುಗೆ,ಪ್ರಥಮ ದರ್ಜೆ ಗುತ್ತಿಗೆದಾರರಾದ ಹನುಮಗೌಡ ಬೀರನಕಲ್,ದೇವೇಂದ್ರಪ್ಪಗೌಡ ಗೌಡಗೇರಾ,ರವಿ ಪಾಟೀಲ್ ರಾಯಚೂರು,ಹನುಮಗೌಡ ಮರಕಲ್,ತಿಮ್ಮಯ್ಯ ಪುರ್ಲೆ ಡಾ: ಭೀಮಣ್ಣ ಮೇಟಿ,ಕಸಾಪ ಅಧ್ಯಕ್ಷ ಡಾ: ರವೀಂದ್ರ ಹೊಸಮನಿ,ಹಿರಿಯ ಸಾಹಿತಿಗಳಾದ ಡಾ.ಅಬ್ದುಲ್ ಕರೀಂ ಕನ್ಯಾಕೊಳ್ಳೂರ,ಸಂಧ್ಯಾ ಸಾಹಿತ್ಯ ವೇದಿಕೆಯ ಅಧ್ಯಕ್ಷ ರವಿ ಹಿರೇಮಠ, ಡಾ: ಎಂ.ಎಸ್.ಶಿರವಾಳ,ಡಾ. ಗೋವಿಂದರಾಜ್ ಆಲ್ದಾಳ,ಪತ್ರಕರ್ತ ಪ್ರಕಾಶ್ ದೊರೆ,ಕವಯತ್ರಿ ಭಾಗ್ಯ ದೊರೆ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುವವು
