ಮಾಜಿ ಸಚಿವನ ಪುತ್ರ ಅನಿಲಕುಮಾರ ಜಮಾದಾರ ಅವರಿಗೆ ಕಲಬುರಗಿ ತೊಗರಿ ಬೋರ್ಡ್ ನ ಅಧ್ಯಕ್ಷರಾಗಿ ಆಯ್ಕೆಗೊಳಿಸಿರುವ ಎಐಸಿಸಿ ಸರಕಾರದಿಂದ ಅಧಿಕೃತ ಆದೇಶ ಹೊರಬೀಳುವುದೊಂದೇ ಬಾಕಿ

ಮಾಜಿ ಸಚಿವನ ಪುತ್ರ ಅನಿಲಕುಮಾರ ಜಮಾದಾರ ಅವರಿಗೆ ಕಲಬುರಗಿ ತೊಗರಿ ಬೋರ್ಡ್ ನ ಅಧ್ಯಕ್ಷರಾಗಿ ಆಯ್ಕೆಗೊಳಿಸಿರುವ ಎಐಸಿಸಿ ಸರಕಾರದಿಂದ ಅಧಿಕೃತ ಆದೇಶ ಹೊರಬೀಳುವುದೊಂದೇ ಬಾಕಿ

ಮಾಜಿ ಸಚಿವನ ಪುತ್ರ ಅನಿಲಕುಮಾರ ಜಮಾದಾರ ಅವರಿಗೆ ಕಲಬುರಗಿ ತೊಗರಿ ಬೋರ್ಡ್ ನ ಅಧ್ಯಕ್ಷರಾಗಿ ಆಯ್ಕೆಗೊಳಿಸಿರುವ ಎಐಸಿಸಿ

ಸರಕಾರದಿಂದ ಅಧಿಕೃತ ಆದೇಶ ಹೊರಬೀಳುವುದೊಂದೇ ಬಾಕಿ 

ಚಿಂಚೋಳಿ : ಮಾಜಿ ಸಚಿವ ದಿವಂಗತ ದೇವೀಂದ್ರಪ್ಪ ಘಾಳಪ್ಪ ಜಮಾದಾರ ಅವರ ಸುಪುತ್ರ ಅನಿಲಕುಮಾರ ದೇವೀಂದ್ರಪ್ಪ ಜಮಾದಾರ ಅವರಿಗೆ ಅಖಿಲ ಭಾರತ ಕಾಂಗ್ರೆಸ್ ಕಮಿಟಿ ನವದೆಹಲಿ ಅವರು ವಿವಿಧ ನಿಗಮ ಮತ್ತು ಬೋರ್ಡ್ ಗಳ 39 ಜನರ ಅಧ್ಯಕ್ಷ ಸ್ಥಾನದ ಆಯ್ಕೆ ಪಟ್ಟಿ ಸಿದ್ದಪಡಿಸಿರುವ ಪಟ್ಟಿಯಲ್ಲಿ ತೊಗರಿ ನಾಡು ಕಲಬುರಗಿ ಜಿಲ್ಲೆಯ ಕರ್ನಾಟಕ ತೊಗರಿ ಬೋರ್ಡ್ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಅನಿಲಕುಮಾರ ಜಮಾದಾರ ಅವರ ಹೆಸರನ್ನು ಸೂಚಿಸಿರುವ ಪಟ್ಟಿ ಎಐಸಿಸಿ ರಾಜ್ಯ ಸರಕಾರಕ್ಕೆ ರವಾನಿಸಿದ್ದು, ನಿಷ್ಠಾವಂತ ಕಾರ್ಯಕರ್ತ ಅನಿಲಕುಮಾರ ಜಮಾದಾರರನ್ನು ತಡವಾಗಿ ಗುರುತಿಸಿದರು ಒಳ್ಳೆಯ ಸ್ಥಾನ ಕೊಡುತ್ತಿರುವುದಕ್ಕೆ ಕಾಂಗ್ರೆಸ್ ಪಕ್ಷದ ಕೇಂದ್ರ ಮತ್ತು ರಾಜ್ಯದ ನಾಯಕರುಗಳಿಗೆ, ಸಚಿವರಿಗೆ ಕಾರ್ಯಕರ್ತರು, ಅಭಿಮಾನಿಗಳು ಅಭಿನಂದನೆಗಳ ಹರ್ಷ ವ್ಯಕ್ತವಾಗುತ್ತಿವೆ.

ಅನಿಲಕುಮಾರ ಜಮಾದಾರ ಅವರು ತಂದೆ ಅವರು ನಿಧನದ ಬಳಿಕ ಕಾಂಗ್ರೆಸ್ ಪಕ್ಷವನ್ನು ತೊರೆಯದೆ ಪಕ್ಷಕ್ಕೆ ನಿಷ್ಠಾರಾಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸ್ಥಳೀಯ ಸಂಸ್ಥೆಗಳ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ವಿಧಾನ ಸಭೆ ಚುನಾವಣೆ ಗಳು ನಡೆಸಿ ಅಭ್ಯರ್ಥಿ ಗಳ ಗೆಲುವಿಗೆ ಶ್ರಮಿಸಿದರು. ಆದರೆ ಕಳೆದ 35 ವರ್ಷಗಳಿಂದ ಪಕ್ಷಕ್ಕೆ ನಿಷ್ಠಾವಂತರಾಗಿ ದುಡಿದರುವ ವ್ಯಕ್ತಿ ಯನ್ನು ಪಕ್ಷ ಗುರುತಿಸುವ ಕೆಲಸ ಮಾಡಿರಲಿಲ್ಲ. ಆದರೆ ಗುರುತಿಸುವಲ್ಲಿ ತಡವಾಗಿದರೂ ಒಳ್ಳೆಯ ಸ್ಥಾನಕ್ಕೆ ಗುರುತಿಸಿ ಸೂಚಿಸಿರುವುದು ತಳಮಟ್ಟದ ಕಾರ್ಯಕರ್ತರಿಗೆ ಪಕ್ಷದ ಮೇಲೆ ಇನ್ನೂ ಗೌರವ ಹೆಚ್ಚಿಸುವಂತೆ ಮಾಡಿದೆ ಎಂದು ಮುಖಂಡರಾದ ಲಕ್ಷ್ಮಣ ಆವಂಟಿ, ನಾಗೇಶ ಗುಣಾಜಿ, ಶರಣು ಪಾಟೀಲ್ ಮೋತಕಪಳ್ಳಿ, ಅಬ್ದುಲ್ ಬಾಶೀದ್, ಜಗನ್ನಾಥ ಗುತ್ತೇದಾರ, ಅನಿಲಕುಮಾರ ಹುಡದಳ್ಳಿ, ರಾಮಲು ಶಾದಿಪೂರ, ಸೋಮು ಕಾರಕಟ್ಟಿ, ಶುಭಾಶಚಂದ್ರ ಪಾಟೀಲ್ ಯಂಪಳ್ಳಿ, ಶಿವರಾಜ ಪಾಟೀಲ್, ರಾಜು ನವಲೆ, ಹೀರಾಸಿಂಗ್, ಮಹೇಶ ಘಾಲಿ, ವಿಜಯಕುಮಾರ ಮಾನಕರ್, ವಿಶ್ವನಾಥ ಹೊಡೆಬಿರನಳ್ಳಿ, ಸೈಯದ್ ಶಬ್ಬೀರ್, ನರಸಿಮುಲು ಸವಾರಿ ಜನಸರ್ಧನ್, ನರಸಿಮುಲು ಕುಂಬಾರ, ಜಗನಾಥ ಕಲ್ಲೂರ್, ವೀರಶೆಟ್ಟಿ ಪಾಟೀಲ್, ಶಬ್ಬೀರಮಿಯಾ ಕೊಡ್ಲಿ, ಶರಣು ಹಲಚೇರಿ, ಮಹೇಶ ಹಲಚೇರಿ, ರಘು ಹಲಚೇರಿ, ಜಗನಾಥ ಪೂಜಾರಿ ಅವರು ಜಮಾದಾರ ಅವರ ಆಯ್ಕೆಗೆ ಹರ್ಷ ವ್ಯಕ್ತಪಡಿಸಿ, ಆಯ್ಕೆಗೊಳಿಸಿದ ಪಕ್ಷದ ನಾಯಕರುಗಳಿಗೆ ಅಭಿನಂದನೆಗಳು ಸಲ್ಲಿಸಿದ್ದಾರೆ.