ಕರುನಾಡು ಶ್ರೇಷ್ಠ ಜನನಾಯಕ ಶ್ರೀ ಬಿ ಎಲ್ ಶಂಕರ : ಸಂಗಮೇಶ ಎನ್ ಜವಾದಿ.

ಕರುನಾಡು ಶ್ರೇಷ್ಠ ಜನನಾಯಕ ಶ್ರೀ ಬಿ ಎಲ್ ಶಂಕರ : ಸಂಗಮೇಶ ಎನ್ ಜವಾದಿ.
ಕರುನಾಡು ಕಂಡ ಶ್ರೇಷ್ಠ ರಾಜಕೀಯ ಧುರೀಣರು, ನೇರ ನುಡಿಯ ಚಿಂತಕರು, ಹೋರಾಟಗಾರರು, ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ನಾಡಿನ ಸೇವೆಗೈಯುತ್ತಿರುವ ಸನ್ಮಾನ್ಯ ಶ್ರೀ ಬಿ ಎಲ್ ಶಂಕರ ಸರ್ ರವರು.
ಅನೇಕ ಜವಾಬ್ದಾರಿಗಳು ನಿರ್ವಹಣೆ ಮಾಡಿಕೊಂಡು ಜನಪರ ಕಾರ್ಯಕ್ರಮಗಳನ್ನು ನಾಡಿನಾದ್ಯಂತ ಪ್ರಚುರಪಡಿಸುತ್ತಿರುವ ಶ್ರೀಯುತರ ಸೇವಾ ಕೈಂಕರ್ಯಗಳು ಅಪಾರ ಮತ್ತು ಅನನ್ಯವಾಗಿವೆ ಎಂದು ಪ್ರಗತಿಪರ ಚಿಂತಕರಾದ ಸಂಗಮೇಶ ಎನ್ ಜವಾದಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶ್ರೀ ಬಿ ಎಲ್ ಶಂಕರ ಸರ್ ರವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಇಂದಿನ ರಾಜ್ಯ ಸರ್ಕಾರವು ಇವರನ್ನು ಮಂತ್ರಿಗಳಾಗಿ ಮಾಡಬೇಕಾಗಿತ್ತು. ದುರಂತವೆಂದರೆ ಇವರ ನಿಸ್ವಾರ್ಥ ಸೇವೆ ಹಾಗೂ ಜನಪರ ಕಾಳಜಿ ಸೇವೆಯನ್ನು ಗುರುತಿಸುವಲ್ಲಿ ಇಂದಿನ ಕಾಂಗ್ರೆಸ್ ಹೈಕಮಾಂಡ್ ವಿಫಲವಾಗಿದೆ ಎಂದೇ ಹೇಳಲೇಬೇಕಾಗುತ್ತದೆ ಎಂದರು.
ಕಾಂಗ್ರೆಸ್ ಸಂಘಟನೆ ಮಾಡುವಲ್ಲಿ ಇವರ ಸೇವೆ ದೂಡ್ಡದು, ಸದಾ ಕಾಲ
ಮುಂಚೂಣಿಯಲ್ಲಿ ನಿಂತುಕೊಂಡು ಪಕ್ಷವನ್ನು ಕೆಳಹಂತದಿಂದ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಬಿ ಎಲ್ ಶಂಕರ ಸರ್ ರವರು ಪ್ರಾಮಾಣಿಕ ಸೇವೆ ಮಾಡುತ್ತಿರುವುದು ನಾಡಿಗೆ ಗೊತ್ತಿರುವ ಸಂಗತಿಯೇ ಆಗಿದೆ.
ಈಗಲಾದರೂ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಕಾಂಗ್ರೆಸ್ ಪಕ್ಷ ಹೋಗಬೇಕಾಗಿರುವುದು ಅದರ ಆದ್ಯ ಕರ್ತವ್ಯವಾಗಿದೆ.
ಈ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಚಿಂತನೆ ಮಾಡಬೇಕಾಗಿರುವುದು ಸಹ ಕಾಂಗ್ರೆಸ್ ಮುಖಂಡರ ಜವಾಬ್ದಾರಿ ಆಗಿದೆ ಎಂದು ಹೇಳಿದರು.
ಕಾರಣ ಖಾಲಿ ಇರುವ ನಾಲ್ಕು ಎಂಎಲ್‌ಸಿ ಸ್ಥಾನಗಳಿಗೆ ಶೀಘ್ರದಲ್ಲೇ ನೇಮಕಾತಿ ನಡೆಯಲಿದೆ. ಇದರಲ್ಲಿ ಒಂದು ಸ್ಥಾನಕ್ಕೆ ಸನ್ಮಾನ್ಯ ಶ್ರೀ ಬಿ ಎಲ್ ಶಂಕರ ರವರ ನಿಸ್ವಾರ್ಥ ಸೇವೆ ಹಾಗೂ ಪಕ್ಷದ ಸೇವೆಯನ್ನು ಪರಿಗಣಿಸಿ, ವಿಧಾನ ಪರಿಷತ್ತಿಗೆ ನೇಮಕಾತಿ ಮಾಡಬೇಕು.
ಜೊತೆಗೆ ನೇಮಕಾತಿ ಮಾಡುವ ಮುಖಾಂತರ ಸಚಿವ ಸ್ಥಾನಕ್ಕೂ ಪರಿಗಣಿಸಲು ಈ ಮೂಲಕ ಮಾನ್ಯ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ರವರಿಗೂ ಅದೇ ರೀತಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ರವರು, ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು, ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ರವರಿಗೂ ವಿನಂತಿಯ ಪೂರ್ವಕವಾಗಿ ಸಂಗಮೇಶ ಎನ್ ಜವಾದಿ ರವರು ಒತ್ತಾಯಿಸಿದ್ದಾರೆ.