ಬೆಲೆ ಏರಿಕೆ ಖಂಡಿಸಿ ಚಿಂಚೋಳಿಯಲ್ಲಿ ಬಿಜೆಪಿ ಪ್ರತಿಭಟನೆ : ಭ್ರಷ್ಟ ಆಡಳಿತ ಕಿತ್ತೋಗಿಯಲು ಒಂದಾಗಿ : ಡಾ. ಜಾಧವ
ಬೆಲೆ ಏರಿಕೆ ಖಂಡಿಸಿ ಚಿಂಚೋಳಿಯಲ್ಲಿ ಬಿಜೆಪಿ ಪ್ರತಿಭಟನೆ :
ಭ್ರಷ್ಟ ಆಡಳಿತ ಕಿತ್ತೋಗಿಯಲು ಒಂದಾಗಿ : ಡಾ. ಜಾಧವ
ಚಿಂಚೋಳಿ : ಸಂವಿಧಾನದ ಬಗ್ಗೆ ಮಾತನಾಡುವವರೇ ಭ್ರಷ್ಟಚಾರ ಆಡಳಿತ ನಡೆಸುತ್ತಿದ್ದಾರೆ. ಗ್ಯಾರೆಂಟಿ ಹೆಸರಲಿ ಅಭಿವೃದ್ಧಿಗೆ ಕೊಡ್ಲಿ ಪೆಟ್ಟು ಹಾಕಿದೆ ಎಂದು ಡಾ. ಅವಿನಾಶ ಜಾಧವ್ ಆರೋಪಿಸಿದ್ದರು.
ಬೆಲೆ ಏರಿಕೆ ಖಂಡಿಸಿ, ರಾಜ್ಯ ಆಡಳಿತ ವಿರುದ್ದ ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಿಂದ ಬಸ್ ಡಿಪೋ ವರೆಗೆ ಪ್ರತಿಭಟನೆ ಕೈಗೊಂಡು, ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ಗ್ಯಾರೆಂಟಿಗಳಿಂದ ಅಭಿವೃದ್ಧಿ ಕುಂಟಿತಗೊಂಡಿದೆ. ಡೀಸೆಲ್, ಆರೋಗ್ಯ ಚಿಕಿತ್ಸೆ ವೆಚ್ಚ, ಸ್ಟ್ಯಾಂಪ್ ಡ್ಯೂಟಿ ತೇರಿಗೆ, ಬಸ್ ಟಿಕೇಟ್ ದರ, ಹಾಲಿನ ಬೆಲೆ ಹೆಚ್ಚಳ, ಅಡುಗೆ ಎಣ್ಣೆ ಬೆಲೆ ಹೆಚ್ಚಳಗೊಳಿಸಿ ಜನರ ಜೇಬಿಗೆ ಕತ್ರಿ ಹಾಕುತ್ತಿದೆ. ಇಂತಹ ಭ್ರಷ್ಟಾಚಾರದ ಆಡಳಿತವನ್ನು ಕಿತ್ತು ಹಾಕಲು ಎಲ್ಲರೂ ಒಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ವಕ್ತಾರ ಶ್ರೀಮಂತ ಕಟ್ಟಿಮನಿ, ವಿಜಯಕುಮಾರ ಚೆಂಗಟೆ, ಗೌತಮ್ ಪಾಟೀಲ್, ಗೋಪಾಲರಾವ ಕಟ್ಟಿಮನಿ, ಕೆ. ಎಂ. ಬಾರಿ, ಭೀಮಶೆಟ್ಟಿ ಮುರುಡಾ, ಗಿರಿರಾಜ ನಾಟಿಕಾರ, ನಾರಾಯಣ ನಾಟಿಕಾರ, ಶಾಂತರೆಡ್ಡಿ ನರನಾಳ, ರಾಮರೆಡ್ಡಿ ಪಾಟೀಲ್, ರಾಜು ಪವಾರ, ಉಮಾ ಪಾಟೀಲ್, ಶಂಕರ ಶಿವಪೂರಿ, ಸಂತೋಷ ಗಡಂತಿ ಅವರು ಇದ್ದರು.
• ಶಾಸಕರ ಕರೆಗೆ ಕಿವಿ ಕೊಡದ ಕಾರ್ಯಕರ್ತರು :
ಬೆಲೆ ಏರಿಕೆ ಖಂಡಿಸಿ ರಾಜ್ಯ ಆಡಳಿತ ವಿರುದ್ದ ಇಡೀ ರಾಜ್ಯಾದ್ಯಾಂತ ಪ್ರತಿಭಟನೆ ನಡೆಸಲು ಕರೆ ಕೊಟ್ಟಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜೇಂದ್ರ ಅವರ ಸೂಚನೆ ಮೇರೆಗೆ ಶಾಸಕ ಡಾ. ಅವಿನಾಶ ಜಾಧವ್ ಅವರ ನೇತೃತ್ವದಲ್ಲಿ ಚಿಂಚೋಳಿಯಲ್ಲಿ ಪ್ರತಿಭಟನೆ ಕೈಗೊಳಲಾಗಿತ್ತು. ಈ ಪ್ರತಿಭಟನೆಗೆ ಪಕ್ಷದ ಸಕ್ರಿಯ ಕಾರ್ಯಕರ್ತರು ಹಾಗೂ ಅಭಿಮಾನಿಗಳು, ಮುಖಂಡರು, ಚುನಾಯಿತ ಪ್ರತಿನಿಧಿಗಳು ಹಾಗೂ ವಿವಿಧ ಘಟಕಗಳ ಮುಂಚೂಣಿ ನಾಯಕರು ತಮ್ಮ ತಮ್ಮ ಗ್ರಾಮದ ಯುವಕರನ್ನು ಕಾರ್ಯಕರ್ತರನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಸಂಖ್ಯೆಯಲ್ಲಿ ಕರೆದುಕೊಂಡು ಬರಬೇಕೆಂದು ಸೋಶಿಯಲ್ ಮೇಡಿಯಾಗಳ ಮುಖಾಂತರ ಮನವಿ ಮಾಡಿಕೊಳಲಾಗಿತ್ತು. ಆದರೆ ಶಾಸಕರ ಮತ್ತು ಆಪ್ತ ಸಹಾಯಕರ ಮನವಿಗೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಕಾಣಿಸಿಕೊಳ್ಳದೆ ದೂರ ಉಳಿದರು. ಸಂಖ್ಯೆ ಬಲ ಕುಸಿತದಿಂದ ನಿರೀಕ್ಷೆಗೆ ಕಾರ್ಯಕರ್ತರು ನಿರಾಸೆ ಮೂಡಿಸಿದರು.
ಸಮರ್ಥಸಿ ಕೊಂಡ ಶಾಸಕರು :
ಪಕ್ಷದ ರಾಜ್ಯ ಅಧ್ಯಕ್ಷರ ಆದೇಶದ ಮೇರೆಗೆ ಜನರಿಗಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಒಬ್ಬ ಕಾರ್ಯಕರ್ತ ಆದರೂ ಸೈ 100 ಕಾರ್ಯಕರ್ತರಿದ್ದರು ಸೈ ನಾನು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದೆ. ಕಾರ್ಯಕರ್ತರು ಭಾಗವಹಿಸಬೇಕೆಂಬ ಕಡ್ಡಾಯವಿಲ್ಲ ಎಂದು ಸುದ್ಧಿಗಾರರೊಂದಿಗೆ ಮಾತನಾಡಿ ತಿಳಿಸಿದರು.