ಅಂಬವ್ವ ರಾಜಾಪೂರ ಪಟ್ಟಣ ಅವರು 349 ಮತಗಳು ಪಡೆದು ಐತಿಹಾಸಿಕ ಗೆಲವು

ಅಂಬವ್ವ ರಾಜಾಪೂರ ಪಟ್ಟಣ ಅವರು 349 ಮತಗಳು ಪಡೆದು ಐತಿಹಾಸಿಕ ಗೆಲವು
ಕರ್ನಾಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾ ಘಟಕ ಹಾಗೂ ಕಾಳಗಿ ತಾಲೂಕ ಘಟಕ ವತಿಯಿಂದ ಅಂಬವ್ವ ರಾಜಾಪೂರ ಪಟ್ಟಣ ಅವರಿಗೆ ಸನ್ಮಾನಿಸಿ ವಿಜಯೋತ್ಸವ ಆಚರಣೆ
ಕಲಬುರಗಿ: ಕಾಳಗಿ ತಹಸಿಲ್ದಾರರು ತಳವಾರ ಜಾತಿ ಪ್ರಮಾಣ ಪತ್ರ ನಿಡಿ ಆ ನಂತರ ಹಿಂಪಡೆದು ರದ್ದು ಪಡಿಸಿದ್ದರಿಂದ ಕಲಬುರಗಿ ಜಿಲ್ಲೆಯ ಕಾಳಗಿ ಪಟ್ಟಣ ಪಂಚಾಯತ ಚುನಾವಣಾಧಿಕಾರಿಗಳು ನಾಮಪತ್ರ ತಿರಸ್ಕರಿಸಿದ್ದರು.
ತಳವಾರ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ಹಾಗೂ ಕಾಳಗಿ ಪಟ್ಟಣ ಪಂಚಾಯತ ಚುನಾವಣೆಯ ನಾಮಪತ್ರ ತಿರಸ್ಕರಿಸಿರುವದನ್ನು ಖಂಡಿಸಿ ಕರ್ನಾಟಕ ರಾಜ್ಯ ತಳವಾರ ಮಹಾಸಭಾ ವತಿಯಿಂದ ಕಾಳಗಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಮಾಡಿ ಸಂವಿಧಾನ ರಕ್ಷಣೆಗಾಗಿ ಕಾನೂನಾತ್ಮಕ ಹೋರಾಟ ಮಾಡಲು ಉಚ್ಚ ನ್ಯಾಯಾಲಯ ಕಲಬುರಗಿಯಲ್ಲಿ ದಾವೆ ಹೊಡಲಾಗಿತ್ತು ಎಲ್ಲಾ ದಾಖಲೆಗಳು ಪರಿಸಿಲಿಸಿ ಚುನಾವಣೆ ಗೆ ಸ್ಪರ್ದಿಸಲು ಅವಕಾಶ ಮಾಡಿಕೋಟ್ಟ ಉಚ್ಚ ನ್ಯಾಯಾಲಯದ ಆದೇಶದಂತೆ ಚುನಾವಣೆ ನಡೆದು ಅಂತಿಮವಾಗಿ ಬುಧವಾರ ನಡೆದ ಮತ ಎಣಿಕೆಯಲ್ಲಿ ಶ್ರೀಮತಿ ಅಂಬವ್ವ ಗಂಡ ಕಾಳಪ್ಪ ರಾಜಾಪೂರ ಅವರು ಪಟ್ಟಣ ಪಂಚಾಯತ ಕಾಳಗಿ ವಾರ್ಡ ನಂ 4 ರಲ್ಲಿ ತಳವಾರ ಪರಿಶಿಷ್ಟ ಪಂಗಡದ ಮಿಸಲಾತಿ ಅಭ್ಯರ್ಥಿಯಾಗಿ 349 ಮತಗಳು ಪಡೆದು ಐತಿಹಾಸಿಕ ಗೆಲವು ಸಾಧಿಸಿದ್ದಾರೆ.
ಕರ್ನಾಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾ ಘಟಕ ಹಾಗೂ ಕಾಳಗಿ ತಾಲೂಕ ಘಟಕ ವತಿಯಿಂದ ಶ್ರೀಮತಿ ಅಂಬವ್ವ ಗಂಡ ಕಾಳಪ್ಪ ರಾಜಾಪೂರ ಪಟ್ಟಣ ಪಂಚಾಯತ ಸದಸ್ಯರು ಕಾಳಗಿ ಅವರಿಗೆ ತುಂಬು ಹೃದಯದ ಅಭಿನಂದನೆಗಳು ಸಲ್ಲಿಸಿ ಸಿಹಿ ತಿನಿಸಿ ಸನ್ಮಾನಿಸಿ ವಿಜಯೋತ್ಸವ ಆಚರಿಸಲಾಯಿತು.
ಈ ಐತಿಹಾಸಿಕ ಗೆಲುವಿಗೆ ಕಾರಣರಾದ ನಾಯಕರಿಗೂ ಮತದಾರರಿಗೂ ಹಾಗೂ ಕರ್ನಾಟಕ ರಾಜ್ಯ ತಳವಾರ ಮಹಾಸಭಾದ ಎಲ್ಲಾ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸದಸ್ಯರಿಗೂ ಮತ್ತು ಪ್ರತಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಸಲ್ಲಿಸಿ ಬರಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ತಳವಾರ ಮಹಾಸಭಾ ಬೆಂಗಳೂರು ನಿದೇ9ಶಕ ಪೃತ್ವಿರಾಜ ನಾಮದಾರ, ತಳವಾರ ಮಹಾಸಭಾ ಕಾಳಗಿ ತಾಲೂಕ ಅಧ್ಯಕ್ಷ ಈರಣ್ಣ ದಂಡೋತಿ, ತಳವಾರ ಮಹಾಸಭಾ ಕಾಳಗಿ ತಾಲೂಕ ಘಟಕ ಉಪಾಧ್ಯಕ್ಷ ಕಿರಣ್ ನಾಮದಾರ್, ಹಾಗೂ ಸುನೀತಾ ತಳವಾರ, ಸಿದ್ದು ಜಮಾದಾರ, ಸಂತೋಷ ತಳವಾರ, ರಮೇಶ್ ಮತ್ತಿಮೋಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.