ಜನಪರ ಬಜೆಟ್ - ತಿರುಪತಿ ಹತ್ತಿಕಟಗಿ ಹರ್ಷ

ಜನಪರ ಬಜೆಟ್ - ತಿರುಪತಿ ಹತ್ತಿಕಟಗಿ ಹರ್ಷ

ಜನಪರ ಬಜೆಟ್ - ತಿರುಪತಿ ಹತ್ತಿಕಟಗಿ ಹರ್ಷ

ಶಹಪುರ : ದೇಶದ ಜನರ ಬಡತನ ನಿರ್ಮೂಲನೆ,ಆರೋಗ್ಯ, ಗ್ರಾಮೀಣ ಅಭಿವೃದ್ಧಿ ಹಾಗೂ ಮೂಲ ಸೌಕರ್ಯಗಳಿಗೆ ಅತಿ ಹೆಚ್ಚಿನ ಒತ್ತು ನೀಡಿದ ಜನಪರ ಬಜೆಟ್ ಇದಾಗಿದೆ ಎಂದು ಬಿಜೆಪಿ ಯುವ ಮುಖಂಡ ತಿರುಪತಿ ಹತ್ತಿಕಟಗಿ ಹರ್ಷ ವ್ಯಕ್ತಪಡಿಸಿದ್ದಾರೆ,

ಕೇಂದ್ರ ಸರಕಾರದ ಈ ಬಾರಿ ಬಜೆಟನಲ್ಲಿ ಕೃಷಿ,ಪ್ರವಾಸೋದ್ಯಮ ಗಳಿಗೆ ಹೆಚ್ಚಿನ ಆದ್ಯತೆ ನೀಡಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಟ್ಟಿದೆ,ಅಲ್ಲದೆ 12 ಲಕ್ಷಗಳವರೆಗಿನ ಆದಾಯಕ್ಕೆ ಶೂನ್ಯ ತೆರಿಗೆ ವಿಧಿಸುವ ಮೂಲಕ ಸ್ವಾತಂತ್ರ್ಯ ನಂತರದಲ್ಲಿ ಮಧ್ಯಮ ವರ್ಗಕ್ಕೆ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ ಎಂದು ಹೇಳಿದರು.

ಅಲ್ಲದೆ 10 ಸಾವಿರ ಹೊಸ ವೈದ್ಯಕೀಯ ಸೀಟು 6, ಹೊಸ ಐಐಟಿ ಸೀಟು ಒದಗಿಸಲು ಮುಂದಾಗಿರುವುದು ಕೇಂದ್ರ ಸರ್ಕಾರದ ಕಾರ್ಯ ಶ್ಲಾಘನೀಯವಾದದ್ದು, ಮುಂಬರುವ ದಿನಗಳಲ್ಲಿ ಮೋದಿ ಆಡಳಿತ ಭಾರತ ವಿಶ್ವದ ಶಕ್ತಿಶಾಲಿ ರಾಷ್ಟ್ರವಾಗಲಿದೆ ಎಂದು ನುಡಿದರು.