ರಸ್ತೆ ಅಪಘಾತದಲ್ಲಿ ಜಿಂಕೆ ಗಾಯ:ಡಾ. ಅಚ್ಚುತ ಅವರಿಂದ ಪ್ರಥಮ ಚಿಕಿತ್ಸೆ

ರಸ್ತೆ ಅಪಘಾತದಲ್ಲಿ ಜಿಂಕೆ ಗಾಯ:ಡಾ. ಅಚ್ಚುತ ಅವರಿಂದ ಪ್ರಥಮ ಚಿಕಿತ್ಸೆ
ಕಮಲನಗರ: ಬೀದರ ನಾಂಡೆದ ರಾಷ್ಟೀಯ ಹೆದ್ದಾರಿ ಹೊಂದಿಕೊಂಡಿರುವ ಹೊಳಸಮುದ್ರ-ಡಿಗ್ಗಿ
ರಸ್ತೆ ಮೆಲೆ ಅಪರಿಚಿತ ವಾಹನ ಒಂದು ಜಿಂಕೆ ರಸ್ತೆ ಹಾದು ಹೋಗುವಾಗ ಅಪಘಾತ ಸಂಭವಿಸಿದೆ.
ಅಪಘಾತದಿಂದ ಜಿಂಕೆಯ ಹಿಂಬದಿಯ ಎರಡೂ ಕಾಲುಗಳಗೆ ತೀವ್ರ ಗಾಯವಾಗಿದ್ದು, ಸ್ಥಳಕ್ಕೆ
ಧಾವಿಸಿದ ಸ್ಥಳೀಯರು ಸಂಬಂಧಪಟ್ಟ ಅರಣ್ಯ ಅಧಿಕಾರಗಳಿಗೆ ಮಾಹಿತಿ ತಿಳಿಸಿದರು,
ಬೀದರ ಕಡೆ ಹೋಗಿದ ವಾಹನ ಬರಲು ಎರಡೂ ಗಂಟೆ ಸಮಯ ಬೇಕಾಗುತ್ತದೆ ಎಂದಾಗ,
ಅಲ್ಲೆ ನೆರದಿದ ಪತ್ರಕರ್ತರಾದ ಪರಮೇಶ ರಾಂಪುರೆ ಅವರು ಹೊಳಸಮುದ್ರ ಮೂಲದ
ಪಶು ವೈದ್ಯ
ಡಾ. ಅಚ್ಚುತ ಬಿರಾದಾರ
ಅವರಿಂದ ಪ್ರಥಮ ಚಿಕಿತ್ಸೆ ಮಾಡಿಸಿ, ಸಂಜೆ ರಾತ್ರಿ ವರೆಗೂ ಕಾದಿ ಸಂತಪುರ ವಲಯ ಅರಣ್ಯ ಅಧಿಕಾರಿಗಳ ವಾಹನದಲ್ಲಿ ಜಿಂಕೆಯನ್ನು ಕಳಿಸಿದ್ದಾರೆ.
ಸಂತಪುರ ಅರಣ್ಯ ಕಚೇರಿಯಲ್ಲಿ ರಾತ್ರಿ ಚಿಕಿತ್ಸೆ ಮಾಡಿ,ಸೋಮವಾರ ಹೆಚ್ಚಿನ ಚಿಕಿತ್ಸೆಗಾಗಿ ಕಂಠಾಣ ಪಶು ಆಸ್ಪತ್ರೆಗೆ ಕಳುಹಿಸಿದ್ದೇವೆ ಎಂದು ಅರಣ್ಯ ಸಿಬ್ಬಂದಿ ವೈಜೀನಾಥ ಮೆಹತ್ರೆ ತಿಳಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತ ಪರಮೇಶ ರಾಂಪುರೆ, ಸಂಗಮೇಶ ಮುರ್ಕೆ, ಹೊಳಸಮುದ್ರ ಗ್ರಾಮದ ಪಶು ವೈದ್ಯ ಡಾ. ಅಚ್ಚುತ ಬಿರಾದಾರ,ನಿಲೇಶ ಪಾಟೀಲ, ನಾಗರಾಜ ರಾಂಪುರೆ, ಅಂಕೋಶ, ಅರಣ್ಯ ಸಿಬ್ಬಂದಿ ಬಬನ ಜಾಧವ ಎಲ್ಲರೂ ಸೇರಿ ಜಿಂಕೆ ಜೀವ ಬದುಕಿಸಿ ಸಾರ್ಥಕತೆ ಮೆರೆದಿದ್ದಾರೆ.