ಗುಲಬರ್ಗಾ ವಿಶ್ವವಿದ್ಯಾಲಯದ ಸಮಗ್ರ ಅಭಿವೃದ್ಧಿಗೆ ಬದ್ದತೆ ಪ್ರದರ್ಶಿಸಲು ನೂತನ ಕುಲಪತಿಗಳಿಗೆ ಸಮಿತಿಯ ಆಗ್ರಹ.

ಗುಲಬರ್ಗಾ ವಿಶ್ವವಿದ್ಯಾಲಯದ ಸಮಗ್ರ ಅಭಿವೃದ್ಧಿಗೆ ಬದ್ದತೆ ಪ್ರದರ್ಶಿಸಲು ನೂತನ ಕುಲಪತಿಗಳಿಗೆ ಸಮಿತಿಯ ಆಗ್ರಹ.
ಕಲಬುರಗಿ:ದಿನಾಂಕ.24.9.25 :ಗುಲಬರ್ಗಾ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ನೇಮಕವಾದ ಪ್ರೊ ಶಶೀಕಾಂತ.ಎಸ್. ಉಡಿಕೇರಿರವರಿಗೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಪ್ರಮುಖರು ವಿಶ್ವವಿದ್ಯಾಲಯಕ್ಕೆ ಭೇಟಿ ಮಾಡಿ ಶೈಕ್ಷಣಿಕವಾಗಿ ಮತ್ತು ಆಡಳಿತಾತ್ಮಕವಾಗಿ ಶ್ರೀಮಂತ ಇತಿಹಾಸದಿಂದ ಮೆರೆದ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಹಿಂದಿನಂತೆ ಘನತೆ ಹೆಚ್ಚಿಸಿ ಸರ್ವಾಂಗೀಣ ಅಭಿವೃದ್ಧಿಗೆ ಬದ್ದತೆ ಪ್ರದರ್ಶಿಸಲು ನೂತನ ಕುಲಪತಿಗಳಿಗೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಆಗ್ರಹಿಸಿದೆ.ಗುಲರ್ಗಾ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ರಮೇಶ ಲಂಡನಕರ್ ರವರ ಉಪಸ್ಥಿತಿಯಲ್ಲಿ
ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಲಕ್ಮಣ ದಸ್ತಿ , ಸಮಿತಿಯ ಪರಿಣಿತ ತಜ್ಘರು ಮತ್ತು ಪ್ರಮುಖರಾದ ಪ್ರೊ.ಆರ್.ಕೆ.ಹುಡಗಿ ,ಪ್ರೊ.ಬಸವರಾಜ ಕುಮ್ನುರ್,ಡಾ.ಮಾಜಿದ ದಾಗಿ, ಮನೀಷ್ ಜಾಜು.ರೌಫ ಖಾದ್ರಿ,ರಾಜು ಜೈನ ಸೇರಿದಂತೆ ಅನೇಕರು ನೂತನ ಕುಲಪತಿಗಳಿಗೆ,ಕುಲಸಚಿವರಿಗೆ ಗೌರವಿಸಿ ವಿಶ್ವವಿದ್ಯಾಲಯದ ಗಂಭೀರ ಸಮಸ್ಯೆಗಳ ನಿವಾರಣೆ ಬಗ್ಗೆ ಚರ್ಚೀಸಿದರು.
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಶಿಕ್ಷಕರ ಮತ್ತು ಶಿಕ್ಷಕೇತರ ಹುದ್ದೆಗಳ ಭರ್ತಿ ಮಾಡಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ದಿಟ್ಟತನದ ಧೋರಣೆ ಅನುಸರಿಸಲು ಸಮಿತಿಯ ಮುಖಂಡರು ಕುಲಪತಿಗಳಿಗೆ ಆಗ್ರಹಿಸಿದರು.ಅಷ್ಟೇ ಅಲ್ಲದೆ ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ ಕಲಬುರಗಿಯ ಜನಮಾನಸ ನೂತನ ಕುಲಪತಿಗಳ ಮೇಲೆ ಬಲವಾದ ಭರವಸೆ ಇಟ್ಟುಕೊಂಡಿದೆ ಎಂದು ಸಮಿತಿಯ ಅಧ್ಯಕ್ಷರು ಒತ್ತಿ ಹೇಳಿದರು.ಸಮಿತಿಯ ಮುಖಂಡರ ಮಾತಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಎಲ್ಲರ ಸಂಯೋಗದಿಂದ ಗುಲಬರ್ಗಾ ವಿಶ್ವವಿದ್ಯಾಲಯದ ಸಮಗ್ರ ಅಭಿವೃದ್ಧಿ ಮತ್ತು ಘನತೆ ಹೆಚ್ಚಿಸುವ ನಿಟ್ಟಿನಲ್ಲಿ ತಾವು ಬದ್ದತೆ ಪ್ರದರ್ಶಿಸುವುದಾಗಿ ಕುಲಪತಿಗಳು ಸಮಿತಿಯ ನಿಯೋಗಕ್ಕೆ ಭರವಸೆ ನೀಡಿದರು.