ಕಲಬುರಗಿಯಲ್ಲಿ ಅಂತಾರಾಷ್ಟ್ರೀಯ ಕ್ರೀಕೆಟ ಕ್ರೀಡಾಂಗಣ ಹಾಗೂ ಕ್ರೀಡಾ ಗ್ರಾಮ ನಿರ್ಮಾಣಕ್ಕೆ ಮನವಿ

ಕಲಬುರಗಿಯಲ್ಲಿ ಅಂತಾರಾಷ್ಟ್ರೀಯ ಕ್ರೀಕೆಟ ಕ್ರೀಡಾಂಗಣ ಹಾಗೂ ಕ್ರೀಡಾ ಗ್ರಾಮ ನಿರ್ಮಾಣಕ್ಕೆ ಮನವಿ

ಕಲಬುರಗಿಯಲ್ಲಿ ಅಂತಾರಾಷ್ಟ್ರೀಯ ಕ್ರೀಕೆಟ ಕ್ರೀಡಾಂಗಣ ಹಾಗೂ ಕ್ರೀಡಾ ಗ್ರಾಮ ನಿರ್ಮಾಣಕ್ಕೆ ಮನವಿ

ಕಲಬುರಗಿ: ಕಲ್ಯಾಣ ನಾಡು ವಿಕಾಸ ವೇದಿಕೆಯ ವತಿಯಿಂದ ಕಲಬುರಗಿಯಲ್ಲಿ ಅಂತಾರಾಷ್ಟ್ರೀಯ ಕ್ರೀಕೆಟ ಕ್ರೀಡಾಂಗಣ ಹಾಗೂ ಎಲ್ಲ ರೀತಿಯ ಕ್ರೀಡೆಗಳಿಗಾಗಿ ಕ್ರೀಡಾ ಗ್ರಾಮ ನಿರ್ಮಾಣ ಮಾಡಬೇಕೆಂದು ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ. ಅಜಯ ಧರ್ಮಸಿಂಗ್ ಅವರಿಗೆ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ವಿಭಾಗ ಹಾಗೂ ಕಲಬುರಗಿ ಜಿಲ್ಲೆಯು ಕ್ರೀಡಾ ಕ್ಷೇತ್ರದಲ್ಲಿಯೂ ಹಿಂದುಳಿದಿದ್ದು, ಸರ್ಕಾರವು ಮಲತಾಯಿ ಧೋರಣೆ ತೋರದೆ ತಕ್ಷಣವೇ ಅಂತಾರಾಷ್ಟ್ರೀಯ ಕ್ರೀಕೆಟ ಕ್ರೀಡಾಂಗಣ ಮತ್ತು ಕ್ರೀಡಾ ಗ್ರಾಮ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.

ಕಲಬುರಗಿಯಲ್ಲಿನ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದ ಸೌಲಭ್ಯ ತುಂಬಾ ಹಳೆಯದು, ಕ್ರೀಡಾಪಟುಗಳಿಗೆ ಅಗತ್ಯವಾದ ಮೈದಾನ, ತರಬೇತಿದಾರರು ಹಾಗೂ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ರಾಜ್ಯದ ಇತರೆ ನಗರಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣವಾಗಿರುವಾಗಲೂ ಕಲಬುರಗಿಯಲ್ಲಿ ಮಾತ್ರ ಪ್ರತ್ಯೇಕ ಕ್ರೀಕೆಟ ಮೈದಾನವಿಲ್ಲದಿರುವುದು ಅಸಮತೋಲನಕ್ಕೆ ಕಾರಣವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಕೆಎಸಿಸಿಎ ವತಿಯಿಂದ ರಾಜ್ಯದ ಹಲವು ನಗರಗಳಲ್ಲಿ ಕ್ರೀಡಾಂಗಣಗಳು ನಿರ್ಮಾಣವಾಗಿದ್ದು, ಕಲಬುರಗಿಗೂ ಜಮೀನು ನೀಡಿದರೆ ಸಂಸ್ಥೆಯೇ ಕ್ರೀಡಾಂಗಣ ನಿರ್ಮಿಸಲು ಸಿದ್ಧವಿದೆ. ಇದಕ್ಕಾಗಿ ಮೊದಲು ಅಫಜಲಪುರ ರಸ್ತೆಯ ಶರಣ ಸಿರಸಗಿಯ 24 ಎಕರೆ ಜಮೀನು ಹಾಗೂ ನಂತರ ಗುಲಬರ್ಗಾ ವಿಶ್ವವಿದ್ಯಾಲಯದ 50 ಎಕರೆ ಪ್ರದೇಶವನ್ನು ಕ್ರೀಡಾ ಗ್ರಾಮಕ್ಕಾಗಿ ಮೀಸಲಿಡುವಂತೆ ನಿರ್ಧಾರ ಕೈಗೊಂಡಿದ್ದ ವಿಷಯವನ್ನು ಕೂಡ ಮನವಿಯಲ್ಲಿ ನೆನಪಿಸಲಾಗಿದೆ.

ಆಗಿರುವುದು:

* ಗುಲಬರ್ಗಾ ವಿಶ್ವವಿದ್ಯಾಲಯ ಜಮೀನು ನೀಡಲು ಒಪ್ಪಿಗೆ ನೀಡಿದೆ.

* ಕೆಕೆಆರ್‌ಡಿಬಿ ಹಣ ನೀಡಲು ಒಪ್ಪಿಗೆ ನೀಡಿದ್ದು, ಯೋಜನೆಯ ಡಿಪಿಆರ್ ಸಿದ್ಧವಾಗಿದೆ.

ಆಗಬೇಕಾಗಿರುವುದು:

1. ಯೋಜನೆಗೆ ತುರ್ತಾಗಿ ಚಾಲನೆ ನೀಡಬೇಕು.

2. ಅಂತಾರಾಷ್ಟ್ರೀಯ ಕ್ರೀಕೆಟ ಕ್ರೀಡಾಂಗಣ ನಿರ್ಮಿಸಿ ಅದರ ಜವಾಬ್ದಾರಿಯನ್ನು ಕೆಎಸಿಸಿಎಗೆ ನೀಡಬೇಕು.

3. ಇತರೆ ಕ್ರೀಡೆಗಳಿಗಾಗಿ ಕ್ರೀಡಾ ಸಂಕೀರ್ಣ/ಕ್ರೀಡಾ ಗ್ರಾಮ ನಿರ್ಮಿಸಿ ಅದರ ನಿರ್ವಹಣೆಯನ್ನು ಕ್ರೀಡಾ ಇಲಾಖೆಗೆ ನೀಡಬೇಕು.

4. ಭವಿಷ್ಯದಲ್ಲಿ ರಾಷ್ಟ್ರೀಯ ಕ್ರೀಡಾಕೂಟ ಆಯೋಜಿಸಲು ಕಲಬುರಗಿಯಲ್ಲಿ ವಿಶ್ವದರ್ಜೆಯ ಕ್ರೀಡಾ ಗ್ರಾಮ ನಿರ್ಮಿಸಬೇಕು.

5. ಉತ್ತಮ ತರಬೇತುದಾರರನ್ನು ನೇಮಕ ಮಾಡಿ ಜಿಲ್ಲೆಯ ಆಟಗಾರರು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕು.

ಮನವಿ ಸಲ್ಲಿಕೆಯಲ್ಲಿ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್. ನಡಗೇರಿ, ಮುಖಂಡರಾದ ಜೈಭೀಮ ಮಾಳಗೆ, ಮೋಹನ ಸಾಗರ, ಮಲ್ಲು ಸಂಕನ, ದೇವು ದೊರೆ, ದತ್ತು ಜಮಾದಾರ, ರೋಹನ ನಿಂಬಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.