ದಿ. ಚಂದ್ರಶೇಖರ ಪಾಟೀಲ ರೇವೂರ ಅವರ ಜನ್ಮದಿನದ ನಿಮಿತ್ಯ ವಿವಿಧ ಕಾರ್ಯಕ್ರಮಕ್ಕೆ ಶ್ರೀ ದೊಡ್ಡಪ್ಪಾ ಅಪ್ಪಾ ಚಾಲನೆ
ದಿ. ಚಂದ್ರಶೇಖರ ಪಾಟೀಲ ರೇವೂರ ಅವರ ಜನ್ಮದಿನದ ನಿಮಿತ್ಯ ವಿವಿಧ ಕಾರ್ಯಕ್ರಮಕ್ಕೆ ಶ್ರೀ ದೊಡ್ಡಪ್ಪಾ ಅಪ್ಪಾ ಚಾಲನೆ
ಕಲಬುರಗಿ ಕಲಬುರಗಿ : ನಗರದ ಶ್ರೀ ಚಂದ್ರಶೇಖರ ಪಾಟೀಲ ರೇವೂರ ಔಷಧ ಭವನದಲ್ಲಿ ದಕ್ಷಿಣ ಮತಕ್ಷೇತ್ರದ ಮಾಜಿ ಶಾಸಕರು ಹಾಗೂ ನಾಯಕರಾಗಿದ್ದ ದಿ. ಶ್ರೀ ಚಂದ್ರಶೇಖರ ಪಾಟೀಲ ರೇವೂರವರ ೬೯ನೇ ಜನ್ಮದಿನದ ನಿಮಿತ್ಯ ಶ್ರೀ ಚಂದ್ರಶೇಖರ ಪಾಟೀಲ ರೇವೂರ ಫೌಂಡೇಶನ್ ಕಲಬುರಗಿ ವತಿಯಿಂದ ಶ್ರೀ ಚಂದ್ರಶೇಖರ ಪಾಟೀಲ ರೇವೂರ ಅವರ ಪುತ್ಥಳಿಗೆ ಪುಷ್ಪನಮನ, ರಕ್ತದಾನ ಶಿಬಿರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರೀ ಶರಣಬಸವೇಶ್ವರ ಮಹಾಸಂಸ್ಥಾನದ ಪೀಠಾಧೀಪತಿಗಳಾದ ಶ್ರೀ ದೊಡ್ಡಪ್ಪಾ ಅಪ್ಪಾ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀ ಜಗದ್ಗುರು ಸಾರಂಗಧರ ಮಹಾಸ್ವಾಮಿಗಳು ಶ್ರೀಶೈಲಂ, ಶ್ರೀನಿವಾಸ ಸರಡಗಿ ಪೂಜ್ಯರು, ಚವದಾಪೂರಿ ಶ್ರೀಗಳು, ಸ್ಟೇಷನ ಬಬಲಾದ, ದೇವಾಪೂರ ಶ್ರೀಗಳು, ಶಿವಾನಂದ ಮಹಾಸ್ವಾಮಿಗಳು ಮಕ್ತಂಪೂರ,ಸಾವಳಗಿ ಶ್ರೀ ಶಿವಲಿಂಗೇಶ್ವರ ಶ್ರೀಗಳು, ಮಾಜಿ ಸಂಸದರಾದ ಡಾ. ಉಮೇಶ ಜಾಧವ, ಮಾಜಿ ಶಾಸಕರಾದ ದತ್ತಾತ್ರೇಯ ಸಿ.ಪಾಟೀಲ ರೇವೂರ, ಅಮರನಾಥ ಪಾಟೀಲ, ಮುಖಂಡರಾದ ದಿಲೀಪ ಪಾಟೀಲ, ಶರಣಪ್ಪಾ ತಳವಾರ, ವಿದ್ಯಾಸಾಗರ ಶಾಬಾದಿ, ಧರ್ಮಣ್ಣಾ ಇಟ್ಟಗಾ, ದಯಾಘನ ಧಾರವಾಡಕರ, ಅವಿನಾಶ ಕುಲಕರ್ಣಿ, ವಿಶಾಲ ದರ್ಗಿ, ರಾಜು ವಾಡೇಕರ, ಸಿದ್ದಾಜಿ ಪಾಟೀಲ, ರವೀಂದ್ರ ಜೋಶಿ,ರವಿ ಬಿರಾದಾರ, ವಿಜಯಲಕ್ಷ್ಮೀ ಗೊಬ್ಬೂರಕರ, ಪೌಂಡೇಶನ ಅಧ್ಯಕ್ಷರಾದ ಅಪ್ಪು ಕಣಕಿ ಹಾಗೂ ಸದ್ಯಸರು, ಪಾಲಿಕೆ ಸದ್ಯಸರು, ಅಭಿಮಾನಿಗಳು ಉಪಸ್ಥಿತರಿದರು. ಈ ಸಂದರ್ಭದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ೧೦೦ ಕ್ಕೂ ಹೆಚ್ಚು ರಕ್ತದಾನ ಮಾಡಿದರು. ಕಲಬುರಗಿ ದಕ್ಷಿಣದ ಮಾಜಿ ಶಾಸಕರಾದ ದಿ.ಶ್ರೀ ಚಂದ್ರಶೇಖರ ಪಾಟೀಲ ರೇವೂರವರ ೬೯ನೇ ಜನ್ಮದಿನದ ಪ್ರಯುಕ್ತ ಆದರ್ಶ ಆಸ್ಪತ್ರೆಯಿಂದ ಉಚಿತ ಎಲ್ಬೋ ಹಾಗೂ ಕೀಳು, ನರರೋಗ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರವನ್ನು ಡಾ. ಅಲೋಕ ಪಾಟೀಲ ರೇವೂರ ಹಾಗೂ ಡಾ. ಶ್ವೇತಾ ಅಲೋಕ ಪಾಟೀಲ ರೇವೂರರು ಮುನ್ನಡೆಸಿದರು. ಈ ತರಹದ ಆರೋಗ್ಯ ಸೇವೆಗಳು ಪ್ರಾದೇಶಿಕ ಸಮುದಾಯಕ್ಕೆ ಮಹತ್ವವನ್ನು ನೀಡಿದ್ದು, ಜನರ ಆರೋಗ್ಯ ಮತ್ತು ಕಲ್ಯಾಣವನ್ನು ಉತ್ತೇಜಿಸಲು ಅತ್ಯಂತ ಸೂಕ್ತವಾಗಿದೆ.
