ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿ ತೀರದ ಗ್ರಾಮಗಳ ಜನರು ಎಚ್ಚರ
(ಮುಂಜಾಗ್ರತೆಗಾಗಿ ಎಚ್ಚರಿಕೆ)
ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ
(ನದಿ ನೀರಿನ ಒಳ ಮತ್ತು ಹೊರ ಹರಿವಿನ ಪ್ರಮಾಣ)
ಕೊಯ್ನಾ ಡ್ಯಾಮ್ ನಿಂದ ಇಂದು 42,100 ಕ್ಯೂಸೆಕ್, ರಾಜಾಪುರ್ ಬ್ಯಾರೇಜ್ ನಿಂದ ಎರಡು ಲಕ್ಷ 44,ಸಾವಿರದ 757, ಕ್ಯೂಸೆಕ್
ದೂಧಗಂಗಾ ನದಿಯಿಂದ 45,050 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ಒಟ್ಟು ಚಿಕ್ಕೋಡಿಯ ಕಲ್ಲೋಳ ಬ್ಯಾರೇಜ್ ಹತ್ತಿರ ಎರಡು ಲಕ್ಷ 89 ಸಾವಿರ 807 ಕ್ಯೂಸೆಕ್ ಹರಿವಿನ ಪ್ರಮಾಣ ದಾಖಲಾಗಿದೆ.(ಸಂಜೆಯ ವೇಳೆಗೆ ಹರಿವಿನ ಪ್ರಮಾಣ ಅಂದಾಜು ಹತ್ತು ಸಾವಿರ ಕ್ಯೂಸೆಕ್ ಹೆಚ್ಚಾಗುವ ಸಾಧ್ಯತೆ ಇದೆ)
ಹಿಪ್ಪರಗಿ ಬ್ಯಾರೇಜ್ ನಿಂದ ಎರಡು ಲಕ್ಷ 90 ಸಾವಿರದ 947 ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ.
ಕೃಷ್ಣಾ ನದಿ ತೀರದಲ್ಲಿ ಇರುವ ತಾಲೂಕುಗಳಾದ ಚಿಕ್ಕೋಡಿ, ಕಾಗವಾಡ, ಅಥಣಿ, ರಾಯಭಾಗ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿಯ ಆತಂಕ ಎದುರಾಗಿದೆ.
(ಸ್ಥಳಾಂತರವಾದ ಕುಟುಂಬಗಳ ಸಂಖ್ಯೆ)
ನಿಪ್ಪಾಣಿ ತಾಲೂಕಿನ* ಬಾರವಾಡ ಗ್ರಾಮದ 10 ಕುಟುಂಬಗಳು
ಮಾಣಕಾಪುರ ಗ್ರಾಮದ 18 ಕುಟುಂಬಗಳು ಸಿದ್ನಾಳ ಗ್ರಾಮದ 13 ಕುಟುಂಬಗಳು ಹುನ್ನರಗಿ ಗ್ರಾಮದ 51 ಕುಟುಂಬಗಳು, ಕುನ್ನೂರು ಗ್ರಾಮದ 27 ಕುಟುಂಬಗಳು ಮಮದಾಪುರ ಗ್ರಾಮದ 06 ಕುಟುಂಬಗಳು ಹಾಗೂ
ಅಥಣಿ ತಾಲೂಕಿನ ಹುಲಗಬಾಳ ಗ್ರಾಮದ ಮಾಂಗ ವ ಸತಿಯ 170 ಕುಟುಂಬಗಳು ಸಪ್ತಸಾಗರ ಗ್ರಾಮದ ತೋಟದ ವಸತಿಯ 78 ಮತ್ತು 34 ಕುಟುಂಬಗಳು ನಾಗನೂರು ಪಿಕೆ ಗ್ರಾಮದ 12 ಕುಟುಂಬಗಳು ,ನದಿ ಇಂಗಳಗಾಂವ ಗ್ರಾಮದ 35 ಸತ್ತಿ ಗ್ರಾಮದಲ್ಲಿ 80 ಮತ್ತು ಆರ್ ಸಿ ಕೇಂದ್ರದಲ್ಲಿ 62 ಕುಟುಂಬಗಳು ಅವರಕೋಡ ಗ್ರಾಮದಲ್ಲಿ 28 ಕುಟುಂಬಗಳು ಮತ್ತು ಸರ್ಕಾರಿ ಶಾಲೆಯಲ್ಲಿ 25 ಕುಟುಂಬಗಳು ಮಹೇಶವಾಡಗಿ ಗ್ರಾಮದ 98 ಕುಟುಂಬಗಳು ಜುಂಜರವಾಡ ಗ್ರಾಮದ 61 ಕುಟುಂಬಗಳು ಸವದಿ ಗ್ರಾಮದ 35 ಕುಟುಂಬಗಳು
ಕಾಗವಾಡ ತಾಲೂಕಿನ ಶಹಾಪುರ ಕಮತೇ ತೋಟದ 82 ಕುಟುಂಬಗಳು, ಬನಜವಾಡ ತೋಟದ 48 ಕುಟುಂಬಗಳು, ಕೃಷ್ಣಾಕಿತ್ತೂರು ಗ್ರಾಮದ 130 ಕುಟುಂಬಗಳು ಕಾತ್ರಾಳ ಗ್ರಾಮದ 28 ಕುಟುಂಬಗಳು
ಚಿಕ್ಕೋಡಿ ತಾಲೂಕಿನ ಕಲ್ಲೋಳ ತೋಟದ ವಸತಿಯ 30 ಕುಟುಂಬಗಳು ಇಂಗಳಿ-ದಾನವಾಡಿ ಭಾಗದ ಅರವತ್ತು ಯಡೂರ ಡೋಣೆ ತೋಟದ 38 ಕುಟುಂಬ ಜನವಾಡ 35 ಕುಟುಂಬ ಹಾಗೂ ರಾಯಬಾಗ್ ತಾಲೂಕಿನ ಕುಡಚಿ 32 ಭಾವನ ಸವದತ್ತಿಯ 08 ಎಂಟು ಕುಟುಂಬ ಖೆಮಲಾಪುರ್ ಗ್ರಾಮ 45 ಕುಟುಂಬಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡಿವೆ.
(ಕಾಳಜಿ ಕೇಂದ್ರಗಳ ವಿವರ)
ನಿಪ್ಪಾಣಿ ತಾಲೂಕಿನ ಮಾನಕಾಪೂರ್ ಪ್ರಾಥಮಿಕ ಶಾಲೆ ಬಾರವಾಡದ ಮರಾಠಿ ಶಾಲೆ, ಸಿದ್ನಾಳ ಗ್ರಾಮದ ಮರಾಠಿ ಶಾಲೆ ಹುನ್ನರಗಿಯ ಸರ್ಕಾರಿ ಕನ್ನಡ ಶಾಲೆ, ಕುನ್ನೂರು ಗ್ರಾಮದ ಮರಾಠಿ ಶಾಲೆ, ಮಮದಾಪುರ ಕೆ ಎಲ್ ಗ್ರಾಮದ ಮರಾಠಿ ಶಾಲೆ,
ಅಥಣಿ ತಾಲೂಕಿನ
ಹುಲಗಬಾಳಿ ಸರ್ಕಾರಿ ಪ್ರಾಥಮಿಕ ಶಾಲೆ, ಸಪ್ತಸಾಗರ ಹೈ ಸ್ಕೂಲ್ ಸಪ್ತಸಾಗರ ಕನ್ನಡ ಶಾಲೆ, ನದಿ ಇಂಗಳಗಾಂವ ಬಸವನಗರ ಪ್ರಾಥಮಿಕ ಶಾಲೆ, ರಡ್ಡೆರಟ್ಟಿ ಗ್ರಾಮದ ಆರ್ ಸಿ ಸೆಂಟರ್, ಸತ್ತಿ ಗ್ರಾಮದ ಪ್ರೈಮರಿ ಶಾಲೆ, ಜನವಾಡದ ಜೀರೋ ಪಾಯಿಂಟ್ ಹತ್ತಿರ, ಅವರಕೋಡ ಗ್ರಾಮದ ಸರ್ಕಾರಿ ಹೈ ಸ್ಕೂಲ್ ಮತ್ತು ರಾಷ್ಟ್ರೋತ್ಥಾನ ಕನ್ನಡ ಶಾಲೆ ಮಹೇಶವಾಡಗಿ ಗ್ರಾಮದ ಪ್ರಾಥಮಿಕ ಶಾಲೆ, ಮತ್ತು ಆರ್‌ಸಿ ಸೆಂಟರ್ ಜುಂಜರವಾಡ್ ಸವದಿ ಗ್ರಾಮದ ಚಿಪ್ಪಾಡಿ ತೋಟ...
ಕಾಗವಾಡ ತಾಲೂಕಿನ
ಶಹಪುರ್ ಪ್ರಾಥಮಿಕ ಶಾಲೆ,ಬನಜವಾಡದ ಸರ್ಕಾರಿ ಹೈಸ್ಕೂಲ್, ಕಾತ್ರಾಳ ಗ್ರಾಮದ ಸರ್ಕಾರಿ ಹೈಸ್ಕೂಲ್,
ಚಿಕ್ಕೋಡಿ ತಾಲೂಕಿನ
ಇಂಗಳಿ ಪ್ರಾಥಮಿಕ ಶಾಲೆ, ಜನವಾಡ ಪ್ರಾಥಮಿಕ ಶಾಲೆ,
ರಾಯಬಾಗ ತಾಲೂಕಿನ ಕುಡುಚಿ ಉರ್ದು ಪ್ರಾಥಮಿಕ ಶಾಲೆ, ಭಾವನ ಸೌಂದತ್ತಿಯ ಪ್ರಾಥಮಿಕ ಶಾಲೆ, ಖೆಮಲಾಪುರ ಪ್ರಾಥಮಿಕ ಶಾಲೆ, ಸೇರಿದಂತೆ ಹಲವು ಕಡೆ ಕಾಳಜಿ ಕೇಂದ್ರಗಳನ್ನು ಜಿಲ್ಲಾಡಳಿತ ತೆರೆದಿದೆ.
(ಹೆಚ್ಚುವರಿ ಕಾಳಜಿ ಕೇಂದ್ರಗಳು)
ನಿಪ್ಪಾಣಿ ತಾಲೂಕಿನಲ್ಲಿ ಒಟ್ಟು 45 ಕಾಳಜಿ ಕೇಂದ್ರಗಳು *ಅಥಣಿ ತಾಲೂಕಿನಲ್ಲಿ* 22 ಕಾಳಜಿ ಕೇಂದ್ರಗಳು *ಕಾಗವಾಡ ತಾಲೂಕಿನಲ್ಲಿ* 16 ಕಾಳಜಿ ಕೇಂದ್ರಗಳು *ಚಿಕ್ಕೋಡಿ ತಾಲೂಕಿನಲ್ಲಿ* 14 ಕಾಳಜಿ ಕೇಂದ್ರಗಳು, *ರಾಯಬಾಗ್ ತಾಲೂಕಿನಲ್ಲಿ* 40 ಕಾಳಜಿ ಕೇಂದ್ರಗಳನ್ನು ಜಿಲ್ಲಾಡಳಿತ ಸನ್ನದ್ಧವಾಗಿ ಇರಿಸಿದೆ.
(ಪರ್ಯಾಯ ಮಾರ್ಗಗಳು)
ನಿಪ್ಪಾಣಿ ತಾಲೂಕಿನ ಕುನ್ನೂರ್ -ಮಾಂಗನೂರ್,
ಜತ್ರಾಟ-ಭಿವಸಿ,
ಬೋರ್ಗಾಂವ್- ಸದಲಗಾ
ಅಥಣಿ ತಾಲೂಕಿನ ಕವಟಕೊಪ್ಪ-ಶೇಗುಣಸಿ ಕವಟಕೊಪ್ಪ-ದರೂರ
ಚಿಕ್ಕೋಡಿ ತಾಲೂಕಿನ ಮಲಿಕವಾಡ-ದತ್ತವಾಡ,
ಯಕ್ಸಂಬಾ-ದತ್ತವಾಡ ಸದಲಗಾ-ಬೋರ್ಗಾಂವ್....
ಕಾಗವಾಡ ತಾಲೂಕು ಉಗಾರ-ಕುಡಚಿ, ಮಳವಾಡ-ಇಂಗಳಿ ಕಾತ್ರಾಳ-ಬನಜವಾಡ
ರಾಯಬಾಗ ತಾಲೂಕಿನ ಮಾಂಜರಿ-ಸವದತ್ತಿ ಹಾಲಳ್ಳಿ-ಚಿಂಚಲಿ ಗ್ರಾಮಗಳ ಜನರು ಪರ್ಯಾಯ ಮಾರ್ಗಗಳಿಂದ ಸಂಚರಿಸುತ್ತಿದ್ದಾರೆ.
ಸಾರ್ವಜನಿಕರು ದಯವಿಟ್ಟು ಅಧಿಕಾರಿಗಳ ಆದೇಶವನ್ನು ಜನಪ್ರತಿನಿಧಿಗಳ ಸಲಹೆಯನ್ನು ಪಾಲಿಸಿ.ಸುರಕ್ಷಿತ ಸ್ಥಳಗಳಿಗೆ ತೆರಳುವದಕ್ಕೆ ಹಿಂದೇಟು ಹಾಕಬೇಡಿ.ಪ್ರತಿಯೊಬ್ಬರ ಜೀವಗಳು ಅತ್ಯಮೂಲ್ಯ.
ಜನ ಜಾನುವಾರುಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿ ತೀರದತ್ತ ತೆರಳದಂತೆ ಗಮನಹರಿಸಿ.
ದೀಪಕ ಶಿಂಧೇ (ಪ್ರಜಾ ಟಿವಿ ವರದಿಗಾರ ಚಿಕ್ಕೋಡಿ)
9482766018