ಕಲಬುರಗಿ,ಸೌಹಾರ್ದತೆಗೆ ಸಾಕ್ಷಿಯಾದ ರಂಜಾನ್ ಹಬ್ಬ

ಕಲಬುರಗಿ,ಸೌಹಾರ್ದತೆಗೆ ಸಾಕ್ಷಿಯಾದ ರಂಜಾನ್ ಹಬ್ಬ
ಕಲಬುರಗಿ: ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ನಗರದ ರಾಜಾಪೂರ ಬಡಾವಣೆಯ ಈದ್ಗಾ ಮೈದಾನದಲ್ಲಿ ಸೋಮವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸಾವಿರಾರು ಮುಸ್ಲಿಂ ಭಕ್ತರು ಸೇರಿ ಶಾಂತಿ, ಸೌಹಾರ್ದತೆ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು.
ಸಾಂಪ್ರದಾಯಿಕ ಉಡುಗೆಧಾರಣೆ, ಬಿಳಿ ಕುಫಿ ಮತ್ತು ಪಾಯ್ಜಾಮಾವನ್ನು ಧರಿಸಿದ ಭಕ್ತರು ಪರಸ್ಪರ ಆಲಿಂಗನ ಗೈದು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಅಲ್ಲದೇ ಹಬ್ಬದ ಆಚರಣೆಯು ಎಲ್ಲ ಧರ್ಮದವರ ನಡುವಿನ ಸ್ನೇಹ ಹಾಗೂ ಬಾಂಧವ್ಯವನ್ನು ಪ್ರತಿಬಿಂಬಿಸುವಂತೆ ಕಂಡುಬಂತು.
ಪ್ರಾರ್ಥನೆಯ ಬಳಿಕ ಬಡವರಿಗೆ ಜಕಾತ್ (ಧಾರ್ಮಿಕ ದಾನ) ನೀಡುವ ಮೂಲಕ ಮಾನವೀಯತೆ ಮೆರೆದರು. ಮಕ್ಕಳಿಗೆ ವಿಶೇಷ ಉಡುಗೊರೆಗಳೊಂದಿಗೆ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳಲಾಯಿತು.
(ಛಾಯಾಚಿತ್ರ: ಮಂಜುನಾಥ್ ಜಮಾದಾರ್)