ಒಳಮೀಸಲಾತಿ ಎತ್ತಿ ಹಿಡಿದ ಸುಪ್ರೀಂಕೋರ್ಟ್, ಸಾಮಾಜಿಕ ನ್ಯಾಯದ ಗೆಲುವು: ಡಾ.ಅಂಬಾರಾಯ ಅಷ್ಠಗಿ

ಒಳಮೀಸಲಾತಿ ಎತ್ತಿ ಹಿಡಿದ ಸುಪ್ರೀಂಕೋರ್ಟ್, ಸಾಮಾಜಿಕ ನ್ಯಾಯದ ಗೆಲುವು: ಡಾ.ಅಂಬಾರಾಯ ಅಷ್ಠಗಿ

ಕಲಬುರಗಿ : ೨ನೇ ಆಗಸ್ಟ್,

ಒಳ ಮೀಸಲಾತಿಯನ್ನು ಎತ್ತಿ ಹಿಡಿಯುವ ಮೂಲಕ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದೂ, ಸಾಮಾಜಿಕ ನ್ಯಾಯಕ್ಕೆ ಹೊಸ ಶಕ್ತಿ ಹಾಗೂ ಭಾರತೀಯ ಸಂವಿಧಾನದ ಆಶಯಕ್ಕೆ ಹೆಚ್ಚಿನ ಬಲ ನೀಡಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಡಾ ಅಂಬಾರಾಯ ಅಷ್ಠಗಿ ತೀರ್ಪುನ್ನು ಸ್ವಾಗತಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ಸಪ್ತ ನ್ಯಾಯಾಧೀಶರ ಪೀಠವು ಚಿನ್ನಯ್ಯ ತೀರ್ಪನ್ನು ರದ್ದುಗೊಳಿಸಿದ್ದು, ದೇವೀಂದ್ರ ಸಿಂಗ ಪ್ರಕರಣದ ತೀರ್ಪನ್ನು ಎತ್ತಿಹಿಡಿದಿದೆ. 

ಅಂದರೆ ಭಾರತದ ಸಂವಿಧಾನವು ಪರಿಶಿಷ್ಟ ಜಾತಿ/ ಪಂಗಡಗಳಲ್ಲಿ ಆಂತರಿಕ ಮೀಸಲಾತಿಯನ್ನು ಅನುಮತಿಸುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿರುವುದು ನಿಜಕ್ಕೂ ಹೆಮ್ಮೆ ಪಡುವ ಸಂಗತಿ ಎಂದಿದ್ದಾರೆ.

 ಒಳ ಮೀಸಲಾತಿಯನ್ನು ರಾಜ್ಯಗಳೆ ಜಾರಿಗೆ ತರಲು ಸುಪ್ರೀಂಕೋರ್ಟ್ ಅನುಮತಿಸಿದೆ.  

ಒಳ ಮೀಸಲಾತಿಗೆ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿಯಂತೆ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಯವರು ಒಳಮೀಸಲಾತಿ ಜಾರಿಗೊಳಿಸಿ ಪರಿಶಿಷ್ಟ ಜಾತಿಯ ೧೫% ದಲ್ಲಿ 

ಬಲಗೈ ಸಮುದಾಯಕ್ಕೆ ೫%

ಎಡಗೈ ಸಮುದಾಯಕ್ಕೆ ೬% 

ಸ್ಪರ್ಶ ಪರಿಶಿಷ್ಟ ಜಾತಿಗೆ ೩%

ಇತರೆ ಪರಿಶಿಷ್ಟ ಜಾತಿಗೆ ೧%

ಒಟ್ಟು ೧೫% ಪ್ರತಿಶತ ಮೀಸಲಾತಿಯನ್ನು ಜಾರಿಗೊಳಿಸಿ

ಐತಿಹಾಸಿಕ ಹೆಜ್ಜೆ ಇಟ್ಟಿದ್ದರು.

 ಈ ದಿಟ್ಟ ಕಾರ್ಯಕ್ಕೆ ಆರ್ ಎಸ್ ಎಸ್ ಹಾಗೂ ಸಂಘ - ಪರಿವಾರದ ಪ್ರಮುಖರ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಸ್ಯರಾದ ಗೋವಿಂದ ಕಾರಜೋಳ, ಮಾಜಿ ಕೇಂದ್ರ ಸಚಿವ ಎ ನಾರಾಯಣ ಸ್ವಾಮಿ, ವಿಪಕ್ಷ ನಾಯಕರೂಗಳಾದ ಆರ್ ಅಶೋಕ್, ಛಲವಾದಿ ನಾರಾಯಣ ಸ್ವಾಮಿ ಸೇರಿದಂತೆ ಬಿಜೆಪಿಯ ವರಿಷ್ಠರು ಈ ಒಳ ಮೀಸಲಾತಿ ವರ್ಗಿಕರಣಕ್ಕೆ ಸಹಕರಿಸಿದ್ದನ್ನು ಡಾ ಅಷ್ಠಗಿ ಸ್ಮರಿಸಿದ್ದಾರೆ.

 ಭಾರತೀಯ ಜನತಾ ಪಕ್ಷ ಯಾವತ್ತೂ ಒಳ ಮೀಸಲಾತಿಗೆ ಬೆಂಬಲ ನೀಡಿರುವುದು ಗಮನಾರ್ಹವಾಗಿದೆ ಎಂದಿದ್ದಾರೆ.

ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಸಮರ್ಥನೀಯ ಎಂದು ಒಳಮೀಸಲಾತಿ ಪರ ತೀರ್ಪು ಪ್ರಕಟಿಸಿದ ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಿಂದಾಗಿ ಒಳಮೀಸಲಾತಿಗೆ ಒತ್ತಾಯಿಸಿ ಕಳೆದ 30 ವರ್ಷಗಳಿಂದ ನಡೆದ ನಿರಂತರ ಹೋರಾಟಕ್ಕೆ ದಿಗ್ವಿಜಯ ದೊರಕಿದೆ.

ಈ ಕೂಡಲೇ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಒಳಮೀಸಲಾತಿ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ಹಾಗೂ 

ಈಗಾಗಲೇ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಿರುವುದನ್ನು ರದ್ದುಗೊಳಿಸಿ, ಅತಿ ಶೀಘ್ರದಲ್ಲಿ ಒಳಮೀಸಲಾತಿ ವರ್ಗೀಕರಣಗೋಳಿಸಿ, ಬಳಿಕ ಅರ್ಜಿ ಆಹ್ವಾನಿಸಬೇಕು ಎಂದು ಬಿಜೆಪಿ ಎಸ್ಸಿ ಮೋರ್ಚಾ ನಾಯಕರು ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.

ಈ ಹೋರಾಟದಲ್ಲಿ ಭಾಗಿಯಾಗಿರುವ ಕರ್ನಾಟಕ , ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಪ್ರತಿಯೊಬ್ಬ ಒಳ ಮೀಸಲಾತಿ ಪರ ಹೋರಾಟಗಾರರನ್ನು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕರು ಅಭಿನಂದಿಸಿದ್ದಾರೆ.

೧) ಡಾ ಅಂಬಾರಾಯ ಅಷ್ಠಗಿ ರಾಜ್ಯ ಉಪಾಧ್ಯಕ್ಷರು, ಬಿಜೆಪಿ ಎಸ್ಸಿ ಮೋರ್ಚಾ,೨) ರವಿಚಂದ್ರ ಕಾಂತಿಕರ್ ಬಿಜೆಪಿ ಮುಖಂಡರು, ಕಲಬುರಗಿ ೩) ಗಣೇಶ ವಳಕೇರಿ,ಮಾಜಿ ಮಹಾನಗರ ಪಾಲಿಕೆ ಸದಸ್ಯರು೪) ಎಸ್ ಜಿ ಭಾರತಿ ಮಾಜಿ ಸಿಂಡಿಕೇಟ್ ಸದಸ್ಯರು, ಗುಲ್ಬರ್ಗಾ ವಿಶ್ವವಿದ್ಯಾಲಯ ೫) ಮಹೇಂದ್ರ ಪುಜಾರಿ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಚಿಂಚೋಳಿ ಮಂಡಲ ೬) ಗುಂಡಪ್ಪ ಶಿರಡೋಣ ಬಿಜೆಪಿ ಮುಖಂಡರು, ಕಲಬುರಗಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು