31 ರಂದು ವಿಶ್ವ ಜಾನಪದ ದಿನಾಚರಣೆ : ಸಿ.ಎಸ್.ಮಾಲಿ ಪಾಟೀಲ

31 ರಂದು ವಿಶ್ವ ಜಾನಪದ ದಿನಾಚರಣೆ : ಸಿ.ಎಸ್.ಮಾಲಿ ಪಾಟೀಲ

31 ರಂದು ವಿಶ್ವ ಜಾನಪದ ದಿನಾಚರಣೆ ಸಿ.ಎಸ್.ಮಾಲಿ ಪಾಟೀಲ 

ಕಲಬುರಗಿ: ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ಕಲಬುರಗಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಲಬುರಗಿ ಇವರ ಸಹಯೋಗದಲ್ಲಿ ದಿನಾಂಕ 31 ಆಗಸ್ಟ್ 24 ರಂದು ಸಾಯಂಕಾಲ 4-15 ಕ್ಕೆ ಕಲಬುರಗಿ ನಗರದ ಸರದಾರ ವಲ್ಲಭಾಯಿ ಪಟೇಲ್ ವೃತ್ತ ಬಳಿ ಕನ್ನಡ ಭವನದಲ್ಲಿ ವಿಶ್ವ ಜಾನಪದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ,

ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಂಪ್ರಭು ಪಾಟೀಲ್ ಅವರು ಕಾರ್ಯಕ್ರಮ ಉದ್ಘಾಟಿಸುವರು, ಉಪನ್ಯಾಸ ಎಂ.ಕೆ. ರಾಮೇಶ್ವರವರು ನಿಡಲಿದ್ದಿರೆ, ಕಲಬುರಗಿ ಜಿಲ್ಲಾಧಿಕಾರಿಗಳಾದ ಬಿ. ಫೌಜೀಯಾ ತರನ್ನೂಮ ಅವರು ಸಾಧಕರಿಗೆ ಗೌರವಿಸಲಿದ್ದಾರೆ.

 ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಶರಣಪ್ಪ ಇವರಿಗೆ ವಿಶೇಷ ಗೌರವ ಸನ್ಮಾನ ನಡೆಯಲಿದೆ.

,ಕಸಾಪ ಅಧ್ಯಕ್ಷ ವಿಜಯಕುಮಾರ್ ಪಾಟೀಲ ತೇಗಲತಿಪ್ಪಿ, ಹಾಗೂ ಹಿರಿಯ ಸಾಹಿತಿಗಳನ್ನು ವಿಶಾಲಕ್ಷಿ ಕರೆಡ್ಡಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾನಪದ ಪರಿಷತ್ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷರಾದ ಸಿ.ಎಸ್.ಮಾಲಿ ಪಾಟೀಲ್ ವ್ಯಯಿಸುವರು.

ಕಾರ್ಯಕ್ರಮದಲ್ಲಿ ಡಾ. ಸಿದ್ರಾಮಪ್ಪ ಪೋಲಿಸ ಪಾಟೀಲ - ಶ್ರೀಮತಿ ಶರಣಮ್ಮ ಪಿ. ಸಜ್ಜನ ಶ್ರೀ ಗುಂಡಪ್ಪ ಗುಡ್ಡಾ ಕೊಲ್ಲೂರು - ಶ್ರೀ ರಾಮಲಿಂಗಪ್ಪ ಪ್ಯಾಟಿ ಕೊಲ್ಲೂರು ಶ್ರೀ ಹಣಮಂತರಾಯ ಮಂಗಾಣೆ ಇವರಿಗೆ ಗೌರವ ಸನ್ಮಾನ ನಡೆಯಲಿದೆ,

ಡಿ.ಪಿ. ಸಜ್ಜನ,ಡಾ. ಹಣಮಂತರಾಯ ರಾಂಪುರೆ - ಶ್ರೀಮತಿ ರೇಣುಕಾ ಎಸ್,ಶಿವರಾಜ ಅಂಡಗಿ,ಧರ್ಮಣ್ಣ ಎಚ್. ಧನ್ನಿ,ಶರಣರಾಜ ಛಪ್ಪರಬಂದಿ ಹಾಗೂ ಜಾನಪದ ಪರಿಷತ್ತಿನ ಪದಾಧಿಕಾರಿಗಳು ಸ್ವಾಗತ ಕೋರುವರು,

ಜಾನಪದ ಪರಿಷತ್ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷರಾದ ಸಿ.ಎಸ್.ಮಾಲಿ ಪಾಟೀಲ್ ತಿಳಿಸಿದರು