ಕಲಬುರಗಿ ನಗರದಲ್ಲಿ ಆದಿಶಕ್ತಿ ಅಂಬಾಭವಾನಿ ಘಟಸ್ತಾಪನೆ – ಭಕ್ತರ ಭರಾಟೆ

ಕಲಬುರಗಿ ನಗರದಲ್ಲಿ ಆದಿಶಕ್ತಿ ಅಂಬಾಭವಾನಿ ಘಟಸ್ತಾಪನೆ – ಭಕ್ತರ ಭರಾಟೆ
ಕಲಬುರಗಿ: ನಗರದ ವಿವಿಧ ಬಡಾವಣೆಗಳಲ್ಲಿ ಆದಿಶಕ್ತಿ ಅಂಬಾಭವಾನಿಯವರ ಪ್ರಥಮ ಘಟಸ್ತಾಪನೆಯಿಂದ ನಗರವೇ ಭಕ್ತಿ ಸಂಭ್ರಮದಿಂದ ಕಂಗೊಳಿಸಿದೆ. ಎರಡನೇ ದಿನದ ದೇವಿ ದರ್ಶನಕ್ಕಾಗಿ ಭಕ್ತರು ಬಗೆಬಗೆಯ ಬಣ್ಣದ ಉಡುಪುಗಳನ್ನು ಧರಿಸಿ ದೇವಸ್ಥಾನಗಳಿಗೆ ಧಾವಿಸಿದರು. ಮಹಿಳೆಯರು ಸಾಂಪ್ರದಾಯಿಕ ವಸ್ತ್ರಗಳಲ್ಲಿ, ಯುವತಿಯರು ನವೀನ ಶೈಲಿಯ ವೇಷಭೂಷಣಗಳಲ್ಲಿ ಹಾಗೂ ಪುರುಷರು ಧಾರ್ಮಿಕ ಉಡುಪಿನಲ್ಲಿ ಕಾಣಿಸಿಕೊಂಡರು.
ದೇವಿ ಅಲಂಕಾರವು ವಿಶೇಷ ಆಕರ್ಷಣೆಯಾಗಿ, ಹೂವಿನ ಸಿಂಗಾರ, ವಿದ್ಯುತ್ ದೀಪಾಲಂಕಾರ ಹಾಗೂ ಧ್ವನಿ–ಬೆಳಕಿನ ಸಜ್ಜಿಕೆಯಿಂದ ಭಕ್ತರನ್ನು ಆಕರ್ಷಿಸಿತು. ಭಕ್ತರು ಭಕ್ತಿಗೀತೆಗಳ ಗಾಯನ, ಶಕ್ತಿ ಸ್ತೋತ್ರ ಪಾರಾಯಣ, ಭಜನ-ಕೀರ್ತನೆಗಳ ಮೂಲಕ ದೇವಿಗೆ ತಮ್ಮ ಭಕ್ತಿಯನ್ನು ಅರ್ಪಿಸಿದರು.
ನಗರದ ಪ್ರಮುಖ ಬಡಾವಣೆಗಳಾದ , ಕೊಟ್ನೂರ್ ಡಿ, ಸಂತೋಷ್ ಕಾಲೊನಿ, ದೇವರಿಗೆ ಕ್ರಾಸ್ ಸಿಂದಗಿ ಅಂಬಾ ಭವಾನಿ, ದೇವಸ್ಥಾನದಲ್ಲಿ
ನಡೆದ ಈ ಘಟಸ್ತಾಪನೆಗೆ ಮಹಿಳಾ ಮಂಗಲಗೌರಿ ಮಂಟಪ, ಧಾರ್ಮಿಕ ಸಂಘಟನೆಗಳು ಹಾಗೂ ಸ್ಥಳೀಯ ಯುವಕ ಮಂಡಳಿಗಳು ಸಕ್ರಿಯವಾಗಿ ಪಾಲ್ಗೊಂಡಿವೆ. ಮಕ್ಕಳು, ವೃದ್ಧರು ಸೇರಿದಂತೆ ಸಾವಿರಾರು ಭಕ್ತರು ದೇವಿ ದರ್ಶನ ಪಡೆದು ಶ್ರೀಮಾತೆಯ ಆಶೀರ್ವಾದ ಪಡೆದರು.
ಮುಂದಿನ ದಿನಗಳಲ್ಲಿ ವಿಭಿನ್ನ ಧಾರ್ಮಿಕ–ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಉಪನ್ಯಾಸಗಳು, ಕೀರ್ಥನೆ–ಭಜನೆ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ದಸರಾ ಹಬ್ಬದ ಹಬ್ಬೋತ್ಸಾಹಕ್ಕೆ ಇನ್ನಷ್ಟು ಮೆರುಗು ತುಂಬಲಿವೆ.
ಜೇವರ್ಗಿ ಕ್ರಾಸ್ ಸಿಂದಗಿ ಅಂಬಾಭವಾನಿ
ಸಂತೋಷ ಕಾಲೋನಿ ದೇವಿ
ಕೊಟನೂರ ಡಿ ದೇವಿ