ಕ್ಲಬ್ ಘಟಕಗಳು ಹಾಗೂ ವಿವಿಧ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಚಾಲನೆ

ಕ್ಲಬ್ ಘಟಕಗಳು ಹಾಗೂ ವಿವಿಧ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಚಾಲನೆ

ಕ್ಲಬ್ ಘಟಕಗಳು ಹಾಗೂ ವಿವಿಧ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಚಾಲನೆ

 ಕಲಬುರಗಿ : ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ)ಯಲ್ಲಿ ೨೦೨೪-೨೫ ನೇಯ ಶೈಕ್ಷಣಿಕ ಸಾಲಿನ ಭಾರತ ರತ್ನ ಡಾ. ಬಿ. ಆರ್ ಅಂಬೇಡ್ಕರ್ ಸ್ಮರಣಾರ್ಥ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ಎನ್ ಎಸ್ ಎಸ್, ಎನ್ ಸಿಸಿ, ರೇಂಜರ್ಸ್ ಮತ್ತು ರೋವರ್ಸ್, ರೆಡ್ಕ್ರಾಸ್, ರೆಡ್ ರಿಬ್ಬನ್ ಕ್ಲಬ್ ಘಟಕಗಳು ಹಾಗೂ ವಿವಿಧ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಗೂರು ಶ್ರೀರಾಮುಲು ಅವರು ವಿದ್ಯಾರ್ಥಿಗಳ ಜೀವನ ವಿಕಸನವಾಗಬೇಕಾದರೆ ಸತತ ಅಭ್ಯಾಸಿಯಾಗಿರಬೇಕು ಮತ್ತು ಸತತ ಪ್ರಯತ್ನದಿಂದ ಯಶಸ್ಸನ್ನು ಪಡೆಯಬೇಕೆಂದರು.

ಈ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ ಕೊಡ್ಲಾದ ಉರಿಲಿಂಗಪೆದ್ದಿ ಮಠದ ಪೀಠಾಧಿಪತಿಗಳಾದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿಯವರು ಮಾತನಾಡಿ ಇಂದಿನ ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ತತ್ವಗಳನ್ನು ಪಾಲಿಸಿಕೊಂಡು ಜೀವನದಲ್ಲಿ ಶಿಕ್ಷಣದ ಮಹತ್ವವನ್ನು ಅರಿತು ಏನಾದರೂ ಸಾಧನೆಯನ್ನು ಮಾಡಲು ಪ್ರಯತ್ನಿಸಬೇಕು.ಹಾಗೂ ಪ್ರತಿಯೊಬ್ಬರೂ ಸ್ವಾಭಿಮಾನದಿಂದ ಬದುಕಬೇಕೆಂದರು.

ಮುಖ್ಯ ಅತಿಥಿಗಳಾಗಿ ಕಲ್ಬುರ್ಗಿ ನಗರದ ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಚಂದ್ರಶೇಖರ್ ಜಿ ರವರು ಮಾತನಾಡಿ ವಿದ್ಯಾರ್ಥಿಗಳು ಜ್ಞಾನ ಮತ್ತು ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಹಾಗೂ ಧೈರ್ಯದಿಂದ ಸಮಸ್ಯೆಗಳನ್ನು ಎದುರಿಸಿ ಮುಂದೆ ಬರಲು ಪ್ರಯತ್ನಿಸಬೇಕು ಮತ್ತು ವಚನಕಾರರು ಮತ್ತು ತತ್ವಪದಕಾರರ ಅರಿವು ಆಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸತತ ಅಧ್ಯಯನದಿಂದ ಜ್ಞಾನ ವೃದ್ಧಿ ಮಾಡಿಕೊಳ್ಳುವುದಲ್ಲದೆ ದುಷ್ಟಟಗಳಿಂದ ದೂರ ಇರಬೇಕೆಂದರು.

 ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸವಿತಾ ತಿವಾರಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಡಾ. ಮಲ್ಲೇಶಪ್ಪ ಎಸ್ ಕುಂಬಾರ, ಡಾ.ವಿಜಯಕುಮಾರ ಸಾಲಿಮನಿ ಡಾ. ರಾಜಕುಮಾರ ಸಲಗರ, ಡಾ. ದವಲಪ್ಪ ಹೆಚ್ ,ಡಾ. ಅರುಣಕುಮಾರ ಸಲಗರ, ಡಾ. ರಾಜಶೇಖರ್ ಮಡಿವಾಳ , ಡಾ.ಶ್ರೀಮಂತ ಹೋಳಕರ, ಡಾ. ವಿಶ್ವನಾಥ್ ಬೆನ್ನೂರ, ಡಾ.ಸುರೇಶ ಎಸ್ ಮಾಳೇಗಾಂವ ,ಡಾ. ಬಲಭೀಮ ಸಾಂಗ್ಲಿ ,ಡಾ. ನಾಗಪ್ಪ ಟಿ ಗೋಗಿ, ಡಾ.ಶಿವಲಿಂಗಪ್ಪ ಪಾಟೀಲ, ಡಾ.ಬಸಂತ ಸಾಗರ, ಡಾ.ರವಿ ಬೌದ್ದೆ , ಪ್ರೊ.ರಹಮಾನ ಮಹ್ಮದ ಸಾಬ, ಡಾ. ವಿಜಯಕುಮಾರ ಗೋಪಾಳೆ, ಪ್ರೊ .ದಿನೇಶ್ ಮೇತ್ರೆ ಡಾ. ವಿಜಯಲಕ್ಷ್ಮಿ ಪಾಟೀಲ, ಡಾ.ವಿಜಯಾನಂದ ವಿಠಲರಾವ, ಡಾ.ಮೀನಾಕ್ಷಿ , ಡಾ. ನಶೀಮ ಫಾತಿಮಾ,ಡಾ.ನಾಗಜ್ಯೋತಿ , ಡಾ. ಶ್ಯಾಮಲಾ ಸ್ವಾಮಿ ,ಡಾ. ಸುಜಾತಾ ದೊಡ್ಡಮನಿ, ಡಾ.ಭಾಗ್ಯಲಕ್ಷ್ಮಿ, ಡಾ. ರಬಿಯಾ ಇಫತ್,ಡಾ.ಗೌಶಿಯಾ ಬೇಗಂ ಹಾಗೂ ಶ್ರೀ ಅಜಯ್ ಸಿಂಗ್ ತಿವಾರಿ , ಶ್ರೀ ಶಿವಾನಂದ ಸ್ವಾಮಿ ಮತ್ತು ಕಾಲೇಜಿನ ಬೋಧಕ - ಬೋಧಕೇತರ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿ - ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಪೂಜಾ ಚವ್ಹಾಣ , ಸಪ್ನಾ ರೆಡ್ಡಿ ,ಅರ್ಜುನ, ಪಲ್ಲವಿ, ಧರ್ಮರಾಜ ಈ ವಿದ್ಯಾರ್ಥಿಗಳಿಗೆ ಅತಿಥಿ ಗಣ್ಯರಿಂದ ಸನ್ಮಾನ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಡಾ. ಶ್ಯಾಮಲಾ ಸ್ವಾಮಿಯವರು ಪ್ರಾರ್ಥಿಸಿದರು. ಡಾ.ವಿಜಯಕುಮಾರ ಸಾಲಿಮನಿ ಸ್ವಾಗತಿಸಿದರು. ಡಾ.ಶ್ರೀಮಂತ ಹೋಳಕರ ಪ್ರಾಸ್ತಾವಿಕ ಮಾತನಾಡಿದರು. ಡಾ. ಸುರೇಶ ಎಸ್ ಮಾಳೆಗಾಂವ ವಂದಿಸಿದರು. ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಡಾ.ಬಲಭೀಮ ಸಾಂಗ್ಲಿಯವರು ನಿರೂಪಿಸಿದರು ಕಾರ್ಯಕ್ರಮವು ವಿಜೃಂಭಣೆಯಿAದ ನೆರವೇರಿತು.