ವಾತ್ಸಲ್ಯ ಕಿಟ್ಟ ವಿತರಣೆ.

ವಾತ್ಸಲ್ಯ ಕಿಟ್ಟ ವಿತರಣೆ.
ಚಿಟಗುಪ್ಪಾ : ಅತಿ ಕಡು ಬಡತನದಲ್ಲಿ ಜೀವನ ಸಾಗಿಸುತ್ತಿರುವವರಿಗೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮ ಅಡಿಯಲ್ಲಿ ವಾತ್ಸಲ್ಯ ಕಿಟ್ ಗಳು ವಿತರಿಸಲಾಯಿತು.
ತಾಲೂಕಿನ ಎಲ್ಲಾ ಹಳ್ಳಿಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನರನ್ನು ಗುರುತಿಸಿ
ಒಟ್ಟು 47 ಜನ ಮಾಶಾಸನ ಪಲಾನುಭವಿಗಳಿಗೆ ಬಟ್ಟೆ ಕಿಟ್ಟ , ಪಾತ್ರೆ ಕಿಟ್ಟು, ಅಡುಗೆ ಸಾಮಾನುಗಳ ಕಿಟ್ ವಿತರಣೆ
ಮಾಡಿದ್ದೇವೆ ಎಂದು ತಾಲೂಕಿನ ಯೋಜನಾಧಿಕಾರಿ ಬಸವರಾಜ ರವರು ತಿಳಿಸಿದರು.
ಈ ಸಂದರ್ಭದಲ್ಲಿ ಜನ ಜಾಗೃತಿ ವೇದಿಕೆಯ ಸದಸ್ಯರಾದ ಸರಸಪ್ಪ ಪತ್ಮಾಪೂರ, ರಾಜು ಹಡಪದ, ಸಂಗಮೇಶ ಎನ್ ಜವಾದಿ ಸೇರಿದಂತೆ ವಿವಿಧ ಗ್ರಾಮಗಳ
ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು, ಊರಿನ ಗಣ್ಯರು ಸೇರಿದಂತೆ ತಾಲೂಕಿನ ಸಮನ್ವಯಧಿಕಾರಿ ಶೋಭಾ, ಕೃಷಿ ಅಧಿಕಾರಿ ಸಿದ್ದು ಪೂಜಾರಿ, ಮೇಲ್ವಿಚಾರಕರು, ವಲಯದ ಮೇಲ್ವಿಚಾರಕರು ಸೇವಾಪ್ರತಿನಿಗಳು, ಸಂಘದ ಸದಸ್ಯರು ಉಪಸ್ಥಿತರಿದ್ದರು.