ನಗರದಲ್ಲಿ 207ನೇ ಭೀಮಾ ಕೋರೆಗಾಂವ್ ವಿಜಯೋತ್ಸವ
ನಗರದಲ್ಲಿ 207ನೇ ಭೀಮಾ ಕೋರೆಗಾಂವ್ ವಿಜಯೋತ್ಸವ
ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಮಹಾನಾಯಕ ಬ್ರಿಗೇಡ್ (ರಿ) ವತಿಯಿಂದ ದಿ.ಶ್ರೀಮತಿ ಬಾಯಮ್ಮಾ ಲಕ್ಷ್ಮಣರಾವ್ ಶರ್ಮಾ ಅವರ ವೇದಿಕೆಯಲ್ಲಿ 207ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮವನ್ನು ಲೋಕಪಯೋಗಿ ಇಲಾಖೆ ವೃತ್ತ ಅಧಿಕ ಅಭಿಯಂತರಾದ ಡಾ. ಸುರೇಶ್ ಶರ್ಮಾ ಅವರು ಉದ್ಘಾಟಿಸಿ ಬಡವರಿಗೆ ಸೀರೆಗಳನ್ನು ವಿತರಿಸಿದರು. ನ್ಯಾಯವಾದಿ ಹಣಮಂತ ಯಳಸಂಗಿ, ಮಹಾನಾಯಕ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಬಚ್ಚನ್, ರಾಜೇಂದ್ರ ಎಸ್. ರಾಠೋಡ್, ಯಂಕಪ್ಪ (ಅಕ್ಷಯ), ಯುವರಾಜ್ ಗುತ್ತೇದಾರ್, ಯಶವಂತ್ ಮಾಲಿ ಪಾಟೀಲ್ ಸೇರಿದಂತೆ ಇತರರು ಇದ್ದರು.