ಉಪಚುನಾವಣೆ ಫಲಿತಾಂಶ ಸಿದ್ಧರಾಮಯ್ಯ ಸರಕಾರಕ್ಕೆ ಜನತೆ ಸರ್ಟಿಫಿಕೇಟ್ ನೀಡಿದೆ ಸಚಿವ ಶರಣಪ್ರಕಾಶ್ ಪಾಟೀಲ
ಉಪಚುನಾವಣೆ ಫಲಿತಾಂಶ ಸಿದ್ಧರಾಮಯ್ಯ ಸರಕಾರಕ್ಕೆ ಜನತೆ ಸರ್ಟಿಫಿಕೇಟ್ ನೀಡಿದೆ ಸಚಿವ ಶರಣಪ್ರಕಾಶ್ ಪಾಟೀಲ
ಚಿಂಚೋಳಿ ರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಜನತೆ ಕಾಂಗ್ರೇಸ್ ಪರ ಕೊಟ್ಟು ರಾಜ್ಯಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರಕಾರ ಬಡವರ ಪರ ಇರುವ ಸರಕಾರವಿದೆ ಎಂದು ಎದುರಾಳಿಗೆ ಜನತೆ ಸಂದೇಶ ಕೊಟ್ಟಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ ತಿಳಿಸಿದವರು, ಕಾಂಗ್ರೇಸ್ ಸರಕಾರದ ಜನಪರ ಗ್ಯಾರೆಂಟಿಗಳ ಮುಂದೆ ರಾಜ್ಯದ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ತಮ್ಮ ಕ್ಷೇತ್ರಗಳನ್ನು ಉಳಿಸಿಕೊಂಡು ತಮ್ಮ ಪುತ್ರರರಿಗೆ ಗೆಲ್ಲಿಸಲ್ಲಿಕೆ ಸಾಧ್ಯವಾಗಲಿಲ್ಲ ಎಂದು ಕುಟಿಕಿದರಲ್ಲದೆ, ಈ ಫಲಿತಾಂಶ ಭದ್ರ ಸರಕಾರಕ್ಕೆ ಜನತೆ ಸರ್ಟಿಫಿಕೆಟ್ ನೀಡಿದ್ದಾರೆ ಎಂದರು. ರಾಜ್ಯ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಗಾದಿಗೆ ನಾನು ಆಸಕ್ತನಲ್ಲ ಎಂದು ತಿಳಿಸಿದರು.