ಶಾಸಕ ಡಾ. ಅವಿನಾಶ ಜಾಧವ ಅವರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೇಸ್ ಮುಖಂಡರಿಗ ಇಲ್ಲ : ವಿಜಯಕುಮಾರ

ಶಾಸಕ ಡಾ. ಅವಿನಾಶ ಜಾಧವ ಅವರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೇಸ್ ಮುಖಂಡರಿಗ ಇಲ್ಲ : ವಿಜಯಕುಮಾರ

ಶಾಸಕ ಡಾ. ಅವಿನಾಶ ಜಾಧವ ಅವರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೇಸ್ ಮುಖಂಡರಿಗ ಇಲ್ಲ : ವಿಜಯಕುಮಾರ 

ಚಿಂಚೋಳಿ : ಶಾಸಕ ಡಾ. ಅವಿನಾಶ ಜಾಧವ ಅವರ ಬಗ್ಗೆ ಮಾತನಾಡುವ ಚಿಂಚೋಳಿ ಕ್ಷೇತ್ರದ ಕಾಂಗ್ರೇಸ್ ಮುಖಂಡರು ರಾಜ್ಯದಲ್ಲಿ ತಮದೇ ಸರಕಾರ ಆಡಳಿತ ನಡೆಸುತ್ತಿದೆ. ರೈತಾಪಿ ವರ್ಗದ ಬಗ್ಗೆ ನೀಜವಾದ ಕಾಳಜಿ ಇದ್ದರೇ ಸಚಿವರುಗಳಿಗೆ ಜಿಲ್ಲೆಗೆ ಕರೆಸಿ ಅತಿವೃಷ್ಠಿ ಬಗ್ಗೆ ಸಮೀಕ್ಷೆ ನಡೆಸಿ ಉದ್ದು, ಹೆಸರು ಕಳೆದುಕೊಂಡ ರೈತರಿಗೆ ಎಕರೆಗೆ 25 ಸಾವಿರ ಪರಿಹಾರ ಕೊಡಿಸುವ ಕೆಲಸ ಮಾಡಲಿ ಎಂದು ಬಿಜೆಪಿ ಮಂಡಲ ಅಧ್ಯಕ್ಷ ವಿಜಯಕುಮಾರ ಚೆಂಗಟೆ ತಿರುಗೇಟು ನೀಡಿದ್ದಾರೆ. 

ಶಾಸಕರು ಕೆವಲ ಕಾಟಾಚಾರಕ್ಕೆ ಫೋಟೋ ಶೂಟಿಗೆ ಭೇಟಿ ನೀಡಿದ್ದಾರೆ. ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂಬ ಹೇಳಿಕೆ ನೀಡಿರುವ ಚಿಂಚೋಳಿ ಕಾಂಗ್ರೇಸ್ ಮುಖಂಡರು ನೀಡಿರುವ ಹೇಳಿಕೆಗೆ ತಿರುಗೇಟಿ ನೀಡಿರುವ ಅವರು, ಕಳೆದ 25 ದಿನಗಳಿಂದ ಸತತವಾಗಿ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದೆ. ಯಾರೊಬ್ಬ ಕಾಂಗ್ರೇಸ್ ಮುಖಂಡರು ರೈತರ ಹೊಲಗಳಿಗೆ ಭೇಟಿ ನೀಡಿ, ಅವರದೇ ಸರಕಾರ ಇರುವ ಸರಕಾರಕ್ಕೆ ರೈತರಿಗೆ ಪರಿಹಾರ ಕೊಡಿಸುವ ಪ್ರಯತ್ನಿಸದ ಮುಖಂಡರು ಶಾಸಕ ಡಾ. ಅವಿನಾಶ ಜಾಧವ ಅವರ ಬಗ್ಗೆ ಟಿಕಿಸುವ ಯಾವ ನೈತಿಕ ಹಕ್ಕು ಅವರಿಗೆ ಇಲ್ಲ. ಚಿಂಚೋಳಿ ಕಾಂಗ್ರೇಸ್ ಮುಖಂಡರಿಗೆ ನೀಜವಾಗಿ ರೈತರ ಬಗ್ಗೆ ಕಾಳಜಿ ಇದ್ದರೆ, ಖಾಲಿ ಕೂತ್ತು ಉದ್ರಿ ಭಾಷಣ ಮಾಡದೇ, ಸರಕಾರದ ಸಚಿವರನ್ನು ಕ್ಷೇತ್ರಕ್ಕೆ ಕರೆಸಿ ಸಮೀಕ್ಷೆ ನಡೆಸಿ ರೈತರಿಗೆ ಎಕರೆಗೆ 25 ಸಾವಿರ ಪರಿಹಾರಿ ಕೊಡಿಸುವ ಪ್ರಯತ್ನ ಮಾಡಲಿ ಎಂದು ಪ್ರಕಟಣೆ ಮೂಲಕ ವಿಜಯಕುಮಾರ ಚೆಂಗಟೆ ಸವಾಲ್ ಹಾಕಿ, ತಿರುಗೇಟು ನೀಡಿದ್ದಾರೆ.