ಎಸ್ಸಿ, ಎಸ್ಟಿ ಅನುದಾನ ಗ್ಯಾರಂಟಿಗೆ ಬಳಸಬೇಡಿ

ಎಸ್ಸಿ, ಎಸ್ಟಿ ಅನುದಾನ ಗ್ಯಾರಂಟಿಗೆ ಬಳಸಬೇಡಿ

ಎಸ್ಸಿ, ಎಸ್ಟಿ ಅನುದಾನ ಗ್ಯಾರಂಟಿಗೆ ಬಳಸಬೇಡಿ

ಕಲಬುರಗಿ: ಪರಿಶಿಷ್ಟ ಜಾತಿ, ಪಂಗಡಗಳ ಉಪ ಯೋಜನೆ ನಿಧಿಯನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಬಾರದು ಎಂದು ಬಿಜೆಪಿ ಮುಖಂಡ ಶರಣಕುಮಾರ ಹಾಗರಗುಂಡಗಿ ಅವರು ಒತ್ತಾಯಿಸಿದ್ದಾರೆ.

                     ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಸಿದ್ದರಾಮಯ್ಯ ಪರಿಶಿಷ್ಟರಿಗೆ ಮೀಸಲಿಟ್ಟ ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಹಣವನು ಗ್ಯಾರಂಟಿ ಯೋಜನೆಗೆ‌ ಬಳಸಿದ್ದಾರೆ.ಈ ಬಾರಿ ಮೀಸಲಿಡುವ ಹಣವನ್ನು ಯಾವುದೇ ಕಾರಣಕ್ಕೂ ಗ್ಯಾರಂಟಿಗಳಿಗೆ ಬಳಸಬಾರದು ಎಂದು ಮಾ.7ರಂದು ನಡೆಯಲಿರುವ ಬಜೆಟ್‌ನಲ್ಲಿ ಸ್ಪಷ್ಟ ಭರವಸೆ ನೀಡಬೇಕು ಎಂದರು.

   202-2025ನೇ ಹಾಗೂ 2023-24ನೇ ಸಾಲಿನಲ್ಲಿ ಎಸ್ಇಪಿ,ಟಿಎಸ್ ಪಿ ಯೋಜನೆಗಳಿಗಾಗಿ ವಿವಿಧ ಸರಕಾರಗಳ ಇಲಾಖೆಗಳಿಗೆ ಮೀಸಲಾಗಿಟ್ಟ ಬಜೆಟ್ ಅನುದಾನದಲ್ಲಿ ಈ ಅನುದಾನವನ್ನು ಬೇರೆ ಕಡೆ ವರ್ಗಾಯಿಸಿ ಸುಮಾರು 25 ಸಾವಿರ ಕೋಟಿಯನ್ನು ಅಧಿಕಾರಕ್ಕಾಗಿ ಬಳಕೆ ಮಾಡಲಾಗಿದೆ.

    ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ದಲಿತರ ಉದ್ದಾರ ಹಾಗೂ ಯೋಜನೆಗಳು ಅನುದಾನದ ಮಾಹಿತಿಯನ್ನು ಘೋಷಣೆ ಮಾಡಿರುವುದಕ್ಕೆ ಸರಕಾರವು ದಲಿತರ ಅಭಿವೃದ್ಧಿಯ ಸೂಕ್ತ ಜಾಹಿರಾತುಗಳು ಯೋಜನೆಗಳಿಂದ ರಾಜ್ಯದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಿರುವಂತೆ ಬಿಂಬಿಸುತ್ತಾ ದಲಿತರ ಮತಗಳ ಕ್ರೋಢೀಕರಣದಿಂದ ಅಧಿಕಾರ ಚುಕ್ಕಾಣಿ ಹಿಡಿಯುತ್ತಾ ಬರುತ್ತಿದ್ದು ಪರಿಶಿಷ್ಟ ಜಾತಿ, ಪಂಗಡಗಳ ಜನರ ಶ್ರೇಯೋಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಬೇಕಾದ ಸರಕಾರಗಳು ಅವರ ಅಭಿವೃದ್ಧಿಗೆ ತಯಾರಿಸಿದ ಪ್ರಮುಖ ಯೋಜನೆಗಳನ್ನು ಜಾರಿಗೆ ತರದೇ ಇರುವುದರಿಂದ ಸಾಮಾಜಿಕವಾಗಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿಯಲು ಕಾರಣವಾಗುತ್ತಿದೆ ಎಂದರು. ಇಂತಹ ಆಡಳಿತದಿಂದ ಸರಕಾರದ ಯೋಜನೆಗಳು ಕೈ ತಪ್ಪಿದಂತಾಗುವುದಲ್ಲದೇ ಜನರು ಭ್ರಮ ನಿರಸಗೊಳ್ಳುತ್ತಿದ್ದಾರೆ ಎಂದರು.ಈ ಅನುದಾನದಲ್ಲಿ ಮೂಲಭೂತ ಸೌಲಭ್ಯಗಳ ಒದಗಿಸುವಿಕೆ, ಉದ್ಯೋಗಗಳ ಸೃಷ್ಟಿ, ಆಸಮಾನತೆ ನಿವಾರಣೆ, ಶಿಕ್ಷಣದ ಪ್ರೋತ್ಸಾಹ ಕುಂಠಿತಗೊಳ್ಳುತ್ತದೆ.ಈ ಅನುದಾನದ ಬಳಕೆಯಲ್ಲಿ ಸಂಪೂರ್ಣವಾಗಿ ಸರಕಾರ ಪ್ರಗತಿಯನ್ನು ಸಾಧಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.