ಪಟ್ಟಣದ ಪರಿಸರ ಸ್ವಚ್ಛಂದವಾಗಿ ಕಾಣಬೇಕಾದರೆ ಪೌರ ಕಾರ್ಮಿಕರ ಪ್ರಾತ್ರ ಬಹಳ ಮುಖ್ಯವಾಗಿದೆ : ಅಧ್ಯಕ್ಷ ಟೈಗರ್

ಪಟ್ಟಣದ ಪರಿಸರ ಸ್ವಚ್ಛಂದವಾಗಿ ಕಾಣಬೇಕಾದರೆ ಪೌರ ಕಾರ್ಮಿಕರ ಪ್ರಾತ್ರ ಬಹಳ ಮುಖ್ಯವಾಗಿದೆ : ಅಧ್ಯಕ್ಷ ಟೈಗರ್
ಚಿಂಚೋಳಿ :ಪಟ್ಟಣದ ಪರಿಸರ ಸ್ವಚ್ಛಂದವಾಗಿ ಕಾಣಬೇಕಾದರೆ ಪೌರ ಕಾರ್ಮಿಕರ ಪ್ರಾತ್ರ ಬಹಳ ಮುಖ್ಯವಾಗಿದೆ. ಅವರ ಶ್ರಮದಿಂದ ಪುರಸಭೆ ಆಡಳಿತಕ್ಕೆ ಉತ್ತಮ ಹೆಸರು ತರಲಿದೆ ಎಂದು ಪುರಸಭೆ ಅಧ್ಯಕ್ಷ ಆನಂದಕುಮಾರ ಟೈಗರ್ ಹೇಳಿದರು.
ಅವರು ಪುರಸಭೆ ಕಾರ್ಯಾಲಯ ಹಾಗೂ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ತಾಲೂಕ ಶಾಖೆ ವತಿಯಿಂದ ಕಾರ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾದ ಪೌರ ಕಾರ್ಮಿಕರ ದಿನಾಚರಣೆ ಜರುಗಿಸಿ ಮಾತನಾಡಿದರು.
ಪೌರ ಕಾರ್ಮಿಕರ ಶ್ರಮ ಪುರಸಭೆ ಆಡಳಿತಕ್ಕೆ ಉತ್ತಮ ಹೆಸರು ಬರಲಿದೆ. ಪಟ್ಟಣ ಹಾಗೂ ಮನೆಯ ಸುತ್ತಮುತ್ತಲಿನ ಸ್ವಚ್ಛತೆ ಕಾರ್ಯ ಮಾಡುವುದರಿಂದ ಜನರು ಆರೋಗ್ಯವಾಗಿರಲು ಸಾಧ್ಯವಾಗಿದೆ. ಸರಕಾರದಿಂದ ಪೌರ ಕಾರ್ಮಿಕರಿಗೆ ದೊರ ಬೇಕಾದ ಸೌಲಭ್ಯಗಳು ಮುಟ್ಟಿಸುವಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.
ಪುರಸಭೆ ಮುಖ್ಯ ಅಧಿಕಾರಿ ನಿಂಗಮ್ಮ ಬಿರಾದಾರ ಮಾತನಾಡಿ, ಕಾರ್ಮಿಕರು ಉತ್ತಮ ಆರೋಗ್ಯ ಕಾಪಾಡಿಕೊಂಡು ಕೆಲಸ ನಿರ್ವಹಿಸಿದಲ್ಲಿ ಇಲಾಖೆಗೆ ಒಳ್ಳೆಯ ಹೆಸರು ಸಿಗಲಿದೆ. ಕಾರ್ಮಿಕರ ಯಾವುದೇ ಸಮಸ್ಯೆಗಳಿದಲ್ಲಿ ಸ್ಪಂದಿಸಲಾಗುತ್ತದೆ ಮತ್ತು ಸಂಬಳ ಬಾಕಿ ಉಳಿಸದಂತೆ ಕ್ರಮಕೈಗೊಳ್ಳಲಾಗುತ್ತಿದೆ. ಹೀಗಾಗಿ ಕಾರ್ಮಿಕರು ದಿನನಿತ್ಯದ ಕಾಯಕದ ಸೇವೆಯ ಕೆಲಸದಲ್ಲಿ ಯಾವುದೇ ರೀತಿ ಅಡಚಣೆ ಮಾಡದೇ ಆರೋಗ್ಯ ಕಾಪಾಡಿಕೊಂಡು ಕೆಲಸದಲ್ಲಿ ತೊಡಗಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಪುರಸಭೆಯ ಹಿರಿಯ ಸದಸ್ಯ ಅಬ್ದುಲ್ ಬಾಷಿದ್ ಮಾತನಾಡಿ, ಪೌರ ಕಾರ್ಮಿಕರ ಶ್ರಮದಿಂದಲೇ ಸದಸ್ಯರಿಗೆ ಒಳ್ಳೆಯ ಹೆಸರು ಸಿಗಲಿದೆ. ಕರ್ತವ್ಯದಲ್ಲಿ ಏನೇ ಸಮಸ್ಯೆಗಳ ತೊಡಕುಗಳಿದ್ದರು ಸದಸ್ಯರು ನಿಮ್ಮ ಪರವಾಗಿದ್ದು ಹೋರಾಟ ನಡೆಸಲಾಗುತ್ತದೆ. ದಸರಾ ಹಬ್ಬದ ದಿನಗಳು ಪ್ರಾರಂಭವಾಗಿದ್ದು, ಕಸದ ವಿಲೇವಾರಿ ಮಾಡುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಸುಲ್ತಾನ ಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷ ಜಗನಾಥ ಗುತ್ತೇದಾರ, ಸದಸ್ಯ ಶಿವಕುಮಾರ ಪೋಚಾಲಿ, ಬಸವರಾಜ ಶಿರಸಿ, ಲಕ್ಷ್ಮೀಕಾಂತ ಸುಂಕದ ಸೇರಿದಂತೆ ಕಾರ್ಯಾಲಯದ ಸಿಬ್ಬಂದಿ ವರ್ಗ ಉಪಸ್ಥಿತರಿದರು.
• ಪುರಸಭೆ ಕೇಂದ್ರಗಳಲ್ಲಿ ಪೌರ ಕಾರ್ಮಿಕರಿಗೆ ವಸತಿ ನಿಲಯಗಳು ಕಲ್ಪಿಸಿಕೊಡಲಾಗಿದೆ. ಆದರೆ ಆ ಸೌಲಭ್ಯಗಳು ಚಿಂಚೋಳಿಯಲ್ಲಿ ಇಲ್ಲ. ಹೀಗಾಗಿ 2 ಎಕರೆ ಜಮೀನು ನೀಡಿ ಪೌರ ಕಾರ್ಮಿಕರಿಗೆ ವಸತಿ ನಿಲಯಗಳು ಕಲ್ಪಿಸಿಕೊಡಬೇಕು.
- ಗುಂಡಪ್ಪ ಪೂಜಾರಿ ಅಧ್ಯಕ್ಷರು ಪೌರ ಕಾರ್ಮಿಕರ ಸಂಘ ಚಿಂಚೋಳಿ
• ಪೌರ ಕಾರ್ಮಿಕರಿಗೆ ಸರಕಾರದಿಂದ ಸಿಗಬೇಕಾದ ಸೌಲಭ್ಯಗಳು ಅಧಿಕಾರಿಗಳು ನೀಡುತ್ತಿಲ್ಲ. ಅಧಿಕಾರಿ ವರ್ಗಗಳಿಂದ ಕಾರ್ಮಿಕರಿಗೆ ಅನ್ಯಾವಾಗುತ್ತಿದೆ.
- ಮಲ್ಲಪ್ಪ ಪೌರ ಕಾರ್ಮಿಕ