ಸಂತ ಜೋಸೆಫ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಸಂಚಾರಿ ನಿಯಮಗಳ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಯಿತು .

ಸಂತ ಜೋಸೆಫ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ  ಸಂಚಾರಿ ನಿಯಮಗಳ ಜಾಗೃತಿ ಕಾರ್ಯಕ್ರಮ  ಏರ್ಪಡಿಸಲಾಯಿತು .

ಸಂತ ಜೋಸೆಫ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಸಂಚಾರಿ ನಿಯಮಗಳ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಯಿತು .

ನಗರದ ಸಂತ ಜೋಸೆಫ್ ಪಿ.ಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮಗಳ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು . ಪ್ರಾಂಶುಪಾಲರಾದ ಸಿಸ್ಟರ್ ಶರಣಲತಾ ಅವರು ಸಸಿಗೆ ನೀರುಣಿಸುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಚಾರಿ ಪೊಲೀಸ್ ಠಾಣೆ-೨ ಕಲಬುರಗಿಯ ಶ್ರೀ ರಾಜಕುಮಾರ ಕೋಬಾಳೆ ಎಎಸ್‌ಐ ಇವರು ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮಗಳನ್ನು ಯಾವ ರೀತಿಯಾಗಿ ಪಾಲನೆ ಮಾಡಬೇಕು, ವೃತ್ತಗಳಲ್ಲಿ ವಿವಿಧ ಸಿಗ್ನಲ್ಗಳ ಪಾಲನೆ ಮಾಡಬೇಕು , ಹದಿನೇಂಟು ವಯಸ್ಸು ಮೇಲ್ಪಟ್ಟವರು ಮಾತ್ರ ಬೈಕ್, ವಾಹನ ಚಾಲನೆಮಾಡಬೇಕು. ಸಂಚಾರಿ ನಿಯಮಗಳನ್ನು ಚಾಚುತಪ್ಪದೆ ಪಾಲನೆ ಮಾಡಬೇಕು. ಅವಸರವೇ ಅಪಘಾತಕ್ಕೆ ಕಾರಣ ಎನ್ನುವ ಮಾತನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಉಪಪ್ರಾಚಾರ್ಯ ಡಾ. ಚಿ. ಸಿ. ನಿಂಗಣ್ಣನವರು ಮಾತನಾಡುತ್ತ ಯುವಜನತೆ ಸಂಚಾರಿ ನಿಯಮಪಾಲನೆ ಮಾಡುವುದರ ಜೋತೆಗೆ ಅತಿವೇಗವಾಗಿ ವಾಹನ ಚಲಿಸುವುದರ ಬಗ್ಗೆ ಗಮನಹರಿಸ ಬೇಕಾಗಿದೆ , ಇಂದು ನಗರಗಳು ಜನದಟ್ಟನೆ , ವಾಹನ ದಟ್ಟನೆಯಿಂದ ಕೂಡಿದೆ, ಅದಕ್ಕಾಗಿ ತಮ್ಮ ರಕ್ಷಣೆಯ ಜೊತೆಗೆ ಸಂಚಾರಿ ನಿಯಮ ಪಾಲಿಸುವುದು ತಮ್ಮ ಭವ್ಯಭವಿಷ್ಯತ್ತಿಗೆ ಸಹಾಯಕವಾಗಲಿದೆ ಎಂದು ತಿಳಿಸಿದರು . ಆರಂಭದಲ್ಲಿ ವಿದ್ಯಾರ್ಥಿನಿಯರು ಪ್ರಾರ್ಥನಾಗೀತೆ ನಡೆಸಿಕೊಟ್ಟರು , ಉಪನ್ಯಾಸಕಿ ದಿದ್ಯಾ ಕುಲಕರ್ಣಿ ನಿರೂಪಿಸಿದರು, ಕು. ಸೃಜನಾ ವಂದನಾರ್ಪಣೆ ಮಾಡಿದರೆಂದು ಉಪಪ್ರಾಚಾರ್ಯರಾದ ಡಾ. ಚಿ. ಸಿ. ನಿಂಗಣ್ಣ ಪತ್ರಿಕಾ ಪ್ರಕಟಣೆಗೆ ತಿಳಿಸಿದರು . 

ಕಲಬುರಗಿ ಸುದ್ದಿ ನಾಗರಾಜ್ ದಂಡಾವತಿ