ಸಂಘಟನೆಗೆ ಆದ್ಯತೆ ನೀಡಿ:ರಾಜ್ಯಾಧ್ಯಕ್ಷ ಕೆ. ವೀರೇಶ

ಸಂಘಟನೆಗೆ ಆದ್ಯತೆ ನೀಡಿ:ರಾಜ್ಯಾಧ್ಯಕ್ಷ ಕೆ. ವೀರೇಶ

ಸಂಘಟನೆಗೆ ಆದ್ಯತೆ ನೀಡಿ:ರಾಜ್ಯಾಧ್ಯಕ್ಷ ಕೆ. ವೀರೇಶ 

ಚಿಟಗುಪ್ಪ: ಸಂಘಟನೆಗೆ ಹೆಚ್ಚು ಆದ್ಯತೆ ನೀಡಿ, ಬಸವ ತತ್ವ ಮನೆ ಮನಗಳಿಗೆ ಪ್ರಚಾರ ಮಾಡಬೇಕು ಎಂದು ರಾಷ್ಟ್ರೀಯ ಬಸವದಳದ ರಾಜ್ಯಾಧ್ಯಕ್ಷ ಕೆ. ವೀರೇಶ ಚಳ್ಳಕೇರಿ ತಿಳಿಸಿದರು. 

ತಾಲೂಕಿನ ಕಂದಗೋಳ ಗ್ರಾಮದ ರಾಷ್ಟ್ರೀಯ ಬಸವ ದಳದ ಕಾರ್ಯಾಲಯದಲ್ಲಿ ಹಮ್ಮಿಕೊಂಡ ತಾಲೂಕು ಸಂಘಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು 

ಬಸವದಳದ ಪ್ರಮುಖ ಉದ್ದೇಶಗಳ ಬಗ್ಗೆ ಪ್ರಸ್ತಾಪಿಸಿ, ಅವುಗಳನ್ನು ಕಡ್ಡಾಯವಾಗಿ ಪಾಲಿಸಿ, ಜಾರಿಗೆ ತರುವ ಕೆಲಸ ಆಗಬೇಕು. ನಿರಂತರವಾಗಿ ತಾಲೂಕಿನಾದ್ಯಂತ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳಿಗೊಮ್ಮೆ ಸಭೆ ಆಗಲೇಬೇಕು. ಸದಸ್ಯತ್ವ ಅಭಿಯಾನ ನಿರಂತರವಾಗಿ ನಡೆಸಬೇಕು. ಬಸವ ತತ್ವ ಬೆಳೆಸುವ ಕಾಯಕ ಪ್ರಾಮಾಣಿಕವಾಗಿ ಮಾಡಬೇಕೆಂದು ಹೇಳಿದರು.

ಸಾನಿಧ್ಯ ವಹಿಸಿದ್ದ,ಬಸವ ಧರ್ಮ ಪೀಠದ ಸಾಧಕರಾದ ಪರಮ ಪೂಜ್ಯ ನಿಮಿಷಾನಂದ ಸ್ವಾಮಿಜಿಗಳು ಮಾತನಾಡಿ ಲಿಂಗೈಕ್ಯ ಲಿಂಗಾನಂದ ಸ್ವಾಮಿಜಿಗಳು ಹಾಗೂ ಮಾತಾಜಿ ರವರ ನಿಸ್ವಾರ್ಥ ಸೇವೆ,ತ್ಯಾಗದ ಪರಿಣಾಮದಿಂದ ಇಂದು ರಾಷ್ಟ್ರೀಯ ಬಸವ ದಳ ಸಂಘಟನೆ ರಾಷ್ಟ್ರ ಮಟ್ಟದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದೆ. ಅವರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು.

ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಪ್ರತಿ ದಿನ ಕೆಲಸ ಮಾಡಲು ತಿಳಿಸಿದರು.ತಾಲೂಕಾಧ್ಯಕ್ಷ ರಾಜಶೇಖರ ದೇವಣಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ, ಮಾತನಾಡಿದರು.

ಸಭೆಯಲ್ಲಿ ಸಾಹಿತಿ ಸಂಗಮೇಶ ಎನ್ ಜವಾದಿ, ಚಂದ್ರಶೇಖರ ತಂಗಾ, ವೀರೇಶ ಮಠಪತಿ, ಜಗನ್ನಾಥ ದೇವಣಿ, ಬಂಡೆಪ್ಪಾ ಮೂಲಗೆ,ಅನೀಲಕುಮಾರ ಸಿಂದಗಿರಿ, ಬಸವಂತರಾವ ಮಾಲಿ ಪಾಟೀಲ, ರವೀಂದ್ರ ಪವಾಡಶೆಟ್ಟಿ, ಶಿವರಾಜ್ ಸಜ್ಜನ್ ಶೆಟ್ಟಿ , ಪ್ರವೀಣ ಕಲ್ಯಾಣಿ, ಮಲ್ಲಶೆಟ್ಟಿ ಧೊಳಾ, ಶರಣಪ್ಪಾ ಚಿಟನ್ನಳ್ಳಿ, ಶ್ರೀನಿವಾಸ ಧೊಮಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(ಇದೆ ಸಂದರ್ಭದಲ್ಲಿ 24ನೇ ಕಲ್ಯಾಣ ಪರ್ವ ಉತ್ಸವದ ಅಂಗವಾಗಿ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.)